ಖ್ಯಾತ ಸ್ನೂಕರ್‌ ಆಟಗಾರ್ತಿ ವರ್ಷಾ ಸಂಜೀವ್‌ ನಿರ್ಮಾಣದ ‘ಹೋಪ್‌’ ಕನ್ನಡ ಸಿನಿಮಾ ಸದ್ದಿಲ್ಲದೆ ಪೂರ್ಣಗೊಂಡಿದ್ದು ಜುಲೈ 8ರಂದು ತೆರೆಗೆ ಬರಲಿದೆ. ನಟಿ ಶ್ವೇತಾ ಶ್ರೀವಾತ್ಸವ್‌ ಮುಖ್ಯಭೂಮಿಕೆಯಲ್ಲಿ ನಟಿಸಿರುವ ಚಿತ್ರವಿದು.

ನಟಿ ಶ್ವೇತಾ ಶ್ರೀವಾತ್ಸವ್ ಸಣ್ಣದೊಂದು ವಿರಾಮದ ನಂತರ ‘ಹೋಪ್‌’ ಚಿತ್ರದೊಂದಿಗೆ ಬೆಳ್ಳಿತೆರೆಗೆ ಮರಳುತ್ತಿದ್ದಾರೆ. ಜುಲೈ 8ರಂದು ಸಿನಿಮಾ ತೆರೆಕಾಣಲಿದ್ದು, ಚಿತ್ರತಂಡ ಪ್ರಚಾರ ಕಾರ್ಯ ಆರಂಭಿಸಿದೆ. ಖ್ಯಾತ ಸ್ನೂಕರ್ ಆಟಗಾರ್ತಿ ವರ್ಷಾ ಸಂಜೀವ್ ಕತೆ ಬರೆದು ನಿರ್ಮಿಸಿರುವ ಚಿತ್ರವಿದು ಎನ್ನುವುದು ವಿಶೇಷ. ಅಂಬರೀಷ್ ಚಿತ್ರಕಥೆ ಬರೆದು ನಿರ್ದೇಶಿಸಿದ್ದಾರೆ. ಕೆಎಎಸ್ ಅಧಿಕಾರಿಗಳ ವರ್ಗಾವಣೆ ಸಾಮಾನ್ಯ ಜನರ ಮೇಲೆ ಹೇಗೆಲ್ಲಾ ಪರಿಣಾಮ ಬೀರುತ್ತದೆ ಎನ್ನುವ ಎಳೆ ಚಿತ್ರದ್ದು. ಕಂಟೆಂಟ್ ಆಧಾರಿತ ಸೋಷಿಯಲ್ ಡ್ರಾಮಾದಲ್ಲಿ ಶ್ವೇತಾ ಶ್ರೀವಾತ್ಸವ್ ಕೆಎಎಸ್ ಅಧಿಕಾರಿಯಾಗಿ ಬಣ್ಣ ಹಚ್ಚಿದ್ದಾರೆ. ಸಂಸದೆ ಸುಮಲತಾ ಅಂಬರೀಶ್‌ ವಿಶೇಷ ಪಾತ್ರದಲ್ಲಿ ನಟಿಸಿದ್ದು, ಉಳಿದಂತೆ ಪ್ರಮೋದ್ ಶೆಟ್ಟಿ, ಪ್ರಕಾಶ್ ಬೆಳವಾಡಿ, ಗೋಪಾಲ್ ದೇಶಪಾಂಡೆ ಇದ್ದಾರೆ. ಹಾಲೇಶ್ ಛಾಯಾಗ್ರಾಹಣ, ಹರೀಶ್ ಕೊಮ್ಮೆ ಸಂಕಲನ, ರಿತ್ವಿಕ್ ಮುರಳೀಧರ್ ಸಂಗೀತ ಚಿತ್ರಕ್ಕಿದೆ.

Previous articleರಕ್ಷಿತ್‌ ಶೆಟ್ಟಿ ಬರ್ತ್‌ಡೇ ಸ್ಪೆಷಲ್‌; ‘ಸಪ್ತ ಸಾಗರದಾಚೆ ಎಲ್ಲೋ’ ಟೀಸರ್‌ ಬಿಡುಗಡೆ
Next article‘ತೆಹ್ರಾನ್’ ಎರಡನೇ ಆವೃತ್ತಿಯಲ್ಲಿ‌ ಕತೆಗಿಂತ ಪಾತ್ರಗಳೇ ಮುಖ್ಯ

LEAVE A REPLY

Connect with

Please enter your comment!
Please enter your name here