ನಟ ಕಿರಣ ರಾಜ್‌ ನೂತನ ಸಿನಿಮಾ ಘೋಷಣೆಯಾಗಿದೆ. ಕಿರಣ್‌ ಸಾಗರದಾಚೆ ದುಬೈಗೆ ಹೋಗಿ ಸ್ಕೈ ಡೈವ್‌ ಸಾಹಸದೊಂದಿಗೆ ಚಿತ್ರದ ಶೀರ್ಷಿಕೆ ರಿವೀಲ್‌ ಮಾಡಿದ್ದಾರೆ. ಈ ಹಿಂದೆ ಕಿರಣ್‌ ರಾಜ್‌ ಅವರಿಗೆ ‘ಬಡ್ಡೀಸ್‌’ ನಿರ್ದೇಶಿಸಿದ್ದ ಗುರುತೇಜ್‌ ಶೆಟ್ಟಿ ಅವರೇ ಹೊಸ ಸಿನಿಮಾದ ಸಾರಥ್ಯ ವಹಿಸಿದ್ದಾರೆ.

ಕನ್ನಡ ಕಿರುತೆರೆಯ ಜನಪ್ರಿಯ ನಟ ಕಿರಣ್‌ ರಾಜ್‌ ‘ಬಡ್ಡೀಸ್‌’ ತೆರೆಕಂಡ ನಂತರ ಇದೀಗ ನೂತನ ಸಿನಿಮಾ ಘೋಷಿಸಿದ್ದಾರೆ. ಈ ಲವ್‌ – ಆಕ್ಷನ್‌ ಸಿನಿಮಾದ ಶೀರ್ಷಿಕೆ ‘ರಾನಿ’. ‘ಬಡ್ಡೀಸ್‌’ ನಿರ್ದೇಶಿಸಿದ್ದ ಗುರುತೇಜ್‌ ಶೆಟ್ಟಿ ಈ ಪ್ರಾಜೆಕ್ಟ್‌ನ ಸಾರಥ್ಯ ವಹಿಸುತ್ತಿದ್ದಾರೆ. ಚಿತ್ರದ ಶೀರ್ಷಿಕೆ ಬಿಡುಗಡೆಗೆ ಕಿರಣ್‌ ರಾಜ್‌ ಭಾರೀ ಸಾಹಸ ಮಾಡಿದ್ದಾರೆ. ದೂರದ ದುಬೈಗೆ ಹೋಗಿ ಅಲ್ಲಿ ವಿಮಾನದಿಂದ ಹದಿಮೂರು ಸಾವಿರ ಅಡಿ ಮೇಲಿಂದ ಜಿಗಿದು (ಸ್ಕೈ ಡೈವ್‌) ತಮ್ಮ ನೂತನ ಚಿತ್ರದ ಶೀರ್ಷಿಕೆ ಅನಾವರಣ ಮಾಡಿದ್ದಾರೆ.

“ನನಗೆ ಸಿನಿಮಾ ಎಂದರೆ ಕನಸು‌. ಹಾಗಾಗಿ ಚಿತ್ರ ಆರಂಭದಿಂದಲೂ ಸ್ವಲ್ಪ ವಿಶೇಷ ಇರಬೇಕು ಎಂದು ಬಯಸುತ್ತೇನೆ‌. ಸಾಮಾನ್ಯವಾಗಿ ಗಣ್ಯರ ಸಮ್ಮುಖದಲ್ಲಿ ಶೀರ್ಷಿಕೆ ಅನಾವರಣವಾಗುತ್ತದೆ. ಆದರೆ ನಾನು ಸ್ವಲ್ಪ ಭಿನ್ನವಾಗಿರಲಿ ಎಂದು ಯೋಚಿಸಿ, ಸ್ಕೈ ಡೈವ್‌ ಮೂಲಕ ಈ ಚಿತ್ರದ ಶೀರ್ಷಿಕೆ ಅನಾವರಣ ಮಾಡಿದೆ. ಈ ಸಾಹಸಕ್ಕೆ ಮನೆಯವರಿಂದ, ಸ್ನೇಹಿತರಿಂದ ವಿರೋಧ ವ್ಯಕ್ತವಾಯಿತು. ಆದರು ನಾನು ಅಲ್ಲಿನ ಪರಿಣಿತರಿಂದ ತರಬೇತಿ ಪಡೆದು ಈ ಸಾಹಸಕ್ಕೆ ಮುಂದಾದೆ. ಇದು ಆಕ್ಷನ್ ಓರಿಯಂಟೆಡ್ ಚಿತ್ರವಾಗಿರುವುದರಿಂದ ಚಿತ್ರದಲ್ಲೂ ಮೈನವಿರೇಳಿಸುವ ಸಾಹಸ ದೃಶ್ಯಗಳಿರುತ್ತದೆ” ಎನ್ನುತಾರೆ ಹೀರೋ ಕಿರಣ್‌ ರಾಜ್‌.

ಕಿರಣ್‌ ರಾಜ್‌ ಅವರಿಗೆ ‘ಬಡ್ಡೀಸ್‌’ ನಿರ್ದೇಶಿಸಿದ್ದ ಗುರುತೇಜ್‌ ಶೆಟ್ಟಿ ಅವರೇ ನೂತನ ಸಿನಿಮಾದ ನಿರ್ದೇಶಕರು. “ಕಿರಣ್ ರಾಜ್ ಅವರ ಈ ಸಾಹಸ ನನಗೂ ಸ್ವಲ್ಪ ದಿಗಿಲು ಹುಟ್ಟಿಸಿತ್ತು. ಆವರು ದುಬೈನಲ್ಲಿ ಅಗಸದಿಂದ ಹಾರುತ್ತಿದ್ದರೆ, ನಾನು ಇಲ್ಲಿ ದೇವರ ಬಳಿ ಪ್ರಾರ್ಥಿಸುತ್ತಿದೆ.‌ ಅವರು ಪೂರ್ತಿ ವಿಡಿಯೋ ಕಳುಹಿಸಿದ ಮೇಲೆ ನೆಮ್ಮದಿಯ ನಿಟ್ಟುಸಿರುಬಿಟ್ಟೆ‌. ಅವರು ಈ ಸಿನಿಮಾಗಾಗಿ ಭರ್ಜರಿ ತಯಾರಿ ನಡೆಸುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಚಿತ್ರದ ಬಗ್ಗೆ ಹೆಚ್ಚು ಮಾಹಿತಿ ನೀಡುತ್ತೇನೆ” ಎನ್ನುವುದು ಗುರುತೇಜ್ ಶೆಟ್ಟಿ ಮಾತು. ಚಂದ್ರಕಾಂತ್‌ ಪೂಜಾರಿ ಮತ್ತು ಉಮೇಶ್‌ ಹೆಗಡೆ ಚಿತ್ರದ ನಿರ್ಮಾಪಕರು.

LEAVE A REPLY

Connect with

Please enter your comment!
Please enter your name here