‘ಗಿಣಿರಾಮ’ ಸೀರಿಯಲ್‌ ಖ್ಯಾತಿಯ ನಟ ರಿತ್ವಿಕ್‌ ಮಠದ್‌ ಸಿನಿಮಾಗೆ ‘ಉತ್ಸವ’ ಶೀರ್ಷಿಕೆ ನಿಗಧಿಯಾಗಿದೆ. ಅರುಣ್‌ ಸೂರ್ಯ ನಿರ್ದೇಶನದ ಸಿನಿಮಾಗೆ ಶೂಟಿಂಗ್‌ ಮುಗಿದಿದ್ದು, ಪೊಮೋಷನ್‌ ಶುರುವಾಗುತ್ತಿದೆ. ನಟ ರಿತ್ವಿಕ್‌ ಅವರಿಗೆ ಬೆಳ್ಳಿತೆರೆಯಲ್ಲಿ ಇದು ಮೂರನೇ ಪ್ರಾಜೆಕ್ಟ್‌.

ಕನ್ನಡ ಕಿರುತೆರೆಯ ಜನಪ್ರಿಯ ನಟರ ಸಾಲಿನಲ್ಲಿ ‘ಗಿಣಿರಾಮ’ ಚಿತ್ರದ ರಿತ್ವಿಕ್‌ ಮಠದ್‌ ಮುಂಚೂಣಿಯಲ್ಲಿದ್ದಾರೆ. ಉತ್ತರ ಕರ್ನಾಟಕ ನೇಟಿವಿಟಿಯ ಈ ಸರಣಿಯಲ್ಲಿ ಅಲ್ಲಿನ ಭಾಷೆಯೊಂದಿಗೆ ಅವರು ವೀಕ್ಷಕರಿಗೆ ಇಷ್ಟವಾದವರು. ‘ಆ ಎರಡು ವರ್ಷಗಳು’ ಚಿತ್ರದೊಂದಿಗೆ ಬೆಳ್ಳಿತೆರೆಗೆ ಪರಿಚಯವಾಗಿದ್ದ ಅವರು ‘ಗಿಫ್ಟ್‌ ಬಾಕ್ಸ್‌’ ಸಿನಿಮಾದ ಪ್ರಮುಖ ಪಾತ್ರದಲ್ಲಿ ನಟಿಸಿದ್ದರು. ಈಗ ‘ಉತ್ಸವ’ ಸಿನಿಮಾದೊಂದಿಗೆ ತೆರೆಗೆ ಮರಳುತ್ತಿದ್ದಾರೆ. ಬೆಳ್ಳಿತೆರೆಯಲ್ಲಿ ಇದು ಅವರಿಗೆ ಮೂರನೇ ಪ್ರಾಜೆಕ್ಟ್‌. ‘ಫೇಸ್‌ ಟು ಫೇಸ್‌’ ಸಿನಿಮಾ ಖ್ಯಾತಿಯ ಪೂರ್ವಿ ಜೋಷಿ ‘ಉತ್ಸವ’ ಸಿನಿಮಾ ನಾಯಕಿ. ನಾಗೇಂದ್ರ ಅರಸ್‌ ಹಾಗೂ ಇನ್ನಿತರೆ ನಿರ್ದೇಶಕರಿಗೆ ಸಹಾಯಕರಾಗಿ ಕೆಲಸ ಮಾಡಿರುವ ಅರುಣ್‌ ಸೂರ್ಯ ಅವರಿಗೆ ಸ್ವತಂತ್ರ್ಯ ನಿರ್ದೇಶನದ ಮೊದಲ ಚಿತ್ರವಿದು. ಮನಾಲಿ ಹಾಗೂ ಗೋವಾದಲ್ಲಿ ಉತ್ಸವ ಶೂಟಿಂಗ್ ನಡೆಸಲಾಗಿದೆ. ಪ್ರೇಮಕತೆಯ ಸಿನಿಮಾದ ಇತರೆ ಪ್ರಮುಖ ಪಾತ್ರಗಳಲ್ಲಿ ನಾಗೇಂದ್ರ ಅರಸ್‌, ಪ್ರಕಾಶ್‌ ತುಮ್ಮಿನಾಡು ಇದ್ದಾರೆ. ಉಷಾ ಶ್ರೀನಿವಾಸ್‌ ನಿರ್ಮಾಣ ಮಾಡಿರುವ ಚಿತ್ರಕ್ಕೆ ಜಯಂತ್ ಕಾಯ್ಕಿಣಿ ಗೀತೆಗಳನ್ನು ರಚಿಸಿದ್ದು, ಎಮಿನಲ್ ಮಹಮ್ಮದ್ ಸಂಗೀತ ಸಂಯೋಜಿಸಿದ್ದಾರೆ. ಜಾವೀದ್ ಆಲಿ ಹಾಗೂ ಅಕಿಂತಾ ಕುಂಡು ಹಾಡುಗಳಿಗೆ ದನಿಯಾಗಿದ್ದಾರೆ. ಶಿವರಾಜ್ ಮೆಹೋ ಸಂಕಲನ, ಗೌತಮ್ ಮನು ಛಾಯಾಗ್ರಹಣ ಚಿತ್ರಕ್ಕಿದೆ.

https://www.instagram.com/reel/CtTvY8RIn0R/?utm_source=ig_web_copy_link&igshid=MzRlODBiNWFlZA==

Previous articleಪಸುಪತಿ ‘ತಂಡಟ್ಟಿ’ ತಮಿಳು ಸಿನಿಮಾ Prime Videoದಲ್ಲಿ ಜುಲೈ 14ರಿಂದ
Next article‘ಟಿವಿ ಠೀವಿ’ ವಿಶೇಷ ಸಂಚಿಕೆ | ಕರ್ನಾಟಕ ಟೆಲಿವಿಷನ್ ಅಸೋಸಿಯೇಷನ್ ಕಾರ್ಯಕ್ರಮ

LEAVE A REPLY

Connect with

Please enter your comment!
Please enter your name here