ಇಂದಿನ ಬರ್ತ್‌ಡೇ ವಿಶೇಷವಾಗಿ ರಕ್ಷಿತ್‌ ಶೆಟ್ಟಿ ಅಭಿನಯದ ‘ಸಪ್ತ ಸಾಗರದಾಚೆ ಎಲ್ಲೋ’ ಚಿತ್ರದ ಟೀಸರ್‌ ಬಿಡುಗಡೆಯಾಗಿದೆ. ಹೇಮಂತ್‌ ರಾವ್‌ ನಿರ್ದೇಶನದ ಈ ಚಿತ್ರದ ನಾಯಕಿ ರುಕ್ಮಿಣಿ ವಸಂತ್‌. ಚರಣ್‌ ರಾಜ್‌ ಸಂಗೀತ ಸಂಯೋಜನೆಯಿದ್ದು ವಿಶೇಷ ಕತೆಯೊಂದು ಪರದೆ ಮೇಲೆ ಬರುವ ಸೂಚನೆ ಸಿಗುತ್ತದೆ.

ರಕ್ಷಿತ್‌ ಶೆಟ್ಟಿ ಅಭಿನಯದ ಬಹುನಿರೀಕ್ಷಿತ ‘ಚಾರ್ಲಿ’ ಸಿನಿಮಾ ಜೂನ್‌ 10ರಂದು ಬಿಡುಗಡೆಯಾಗುತ್ತಿದೆ. ಈ ಮಧ್ಯೆ ಅವರ ಮತ್ತೊಂದು ಪ್ರಮುಖ ಪ್ರಯೋಗ ‘ಸಪ್ತ ಸಾಗರದಾಚೆ ಎಲ್ಲೋ’ ಚಿತ್ರದ ಟೀಸರ್‌ ಬಿಡುಗಡೆಯಾಗಿದೆ. ನಾಯಕಿ ರುಕ್ಮಿಣಿ ವಸಂತ್‌ ಪಾತ್ರದ ಮೂಲಕ ತೆರೆದುಕೊಳ್ಳುವ ಟೀಸರ್‌ ಸಮುದ್ರ ತೀರವನ್ನು ಹಾದು ಬಂದೀಖಾನೆವರೆಗೆ ಕರೆದೊಯ್ಯುತ್ತದೆ. ಈ ಹಿಂದಿನ ಚಿತ್ರಗಳಲ್ಲಿ ಗಮನ ಸೆಳೆದಿದ್ದ ಹೇಮಂತ್‌ ರಾವ್‌ ನೂತನ ಚಿತ್ರದಲ್ಲಿಯೂ ತಮ್ಮ ನಿರ್ದೇಶನದ ಛಾಪು ಮೂಡಿಸುವ ಪ್ರಾಮಾಣಿಕ ಪ್ರಯತ್ನ ನಡೆಸಿದ್ದಾರೆ. ಇದು 2010 ಮತ್ತು 2020 ಎರಡು ಟೈಮ್‌ಲೈನ್‌ನಲ್ಲಿ ನಡೆಯಲಿರುವ ಕತೆ. ಮಂಗಳೂರು ಶೆಡ್ಯೂಲ್‌ ಚಿತ್ರೀಕರಣ ಮುಗಿಸಿದ ನಂತರ ಬೆಂಗಳೂರಿನಲ್ಲಿ ಚಿತ್ರೀಕರಣ ನಡೆದಿದೆ. ಪೋಸ್ಟ್‌ ಪ್ರೊಡಕ್ಷನ್‌ ಕೆಲಸಗಳನ್ನು ಪೂರೈಸಿ ಆದಷ್ಟು ಶೀಘ್ರ ಚಿತ್ರವನ್ನು ತೆರೆಗೆ ತರುವುದು ಚಿತ್ರತಂಡದ ಯೋಜನೆ. ಚರಣ್‌ ರಾಜ್‌ ಸಿನಿಮಾಗೆ ಸಂಗೀತ ಸಂಯೋಜಿಸುತ್ತಿದ್ದು, ಅದ್ವೈತ ಗುರುಮೂರ್ತಿ ಛಾಯಾಗ್ರಹಣದ ಹೊಣೆ ಹೊತ್ತಿದ್ದಾರೆ. ಚೊಚ್ಚಲ ನಿರ್ದೇಶನದ ‘ಗೋಧಿ ಬಣ್ಣ ಸಾಧಾರಣ ಮೈಕಟ್ಟು’ ಚಿತ್ರದಲ್ಲೇ ಗಮನ ಸೆಳೆದ ಹೇಮಂತ್‌ ರಾವ್‌ ‘ಕವಲುದಾರಿ’ಯಲ್ಲೂ ಗೆದ್ದಿದ್ದರು. ‘ಸಪ್ತ ಸಾಗರದಲ್ಲಿ ಎಲ್ಲೋ’ ಅವರ ನಿರ್ದೇಶನದ ಮೂರನೇ ಸಿನಿಮಾ. ಅವರ ನಿರ್ಮಾಣದ ‘ಭೀಮ ಸೇನ ನಳಮಹರಾಜ’ ಸಿನಿಮಾ ಕಳೆದ ವರ್ಷ OTTಯಲ್ಲಿ ಬಿಡುಗಡೆಯಾಗಿತ್ತು.

LEAVE A REPLY

Connect with

Please enter your comment!
Please enter your name here