ಕೀರ್ತಿ ಶೇಖರ್‌ ಮತ್ತು ವೈಶಾಖ್‌ ಚೊಚ್ಚಲ ನಿರ್ದೇಶನದ ‘ಹೊಸ ದಿನಚರಿ’ ಸಿನಿಮಾ ಸೆಪ್ಟೆಂಬರ್‌ 4ರಿಂದ ಅಮೇಜಾನ್‌ ಪ್ರೈಮ್‌ನಲ್ಲಿ ಸ್ಟ್ರೀಮ್‌ ಆಗುತ್ತಿದೆ. ಕಳೆದ ವರ್ಷ ಡಿಸೆಂಬರ್‌ನಲ್ಲಿ ತೆರೆಕಂಡಿದ್ದ ಸಿನಿಮಾ ವಿಶ್ಲೇಷಕರ ಮೆಚ್ಚುಗೆಗೆ ಪಾತ್ರವಾಗಿತ್ತು.

ಕಳೆದ ವರ್ಷ ಡಿಸೆಂಬರ್‌ನಲ್ಲಿ ಥಿಯೇಟರ್‌ನಲ್ಲಿ ರಿಲೀಸ್‌ ಆಗಿದ್ದ ‘ಹೊಸ ದಿನಚರಿ’ ಸಿನಿಮಾ ಇದೀಗ ಅಮೇಜಾನ್‌ ಪ್ರೈಮ್‌ನಲ್ಲಿ ಲಭ್ಯವಿದೆ. ಕೀರ್ತಿ ಶೇಖರ್‌ ಮತ್ತು ವೈಶಾಖ್‌ ಪುಷ್ಪಲತಾ ನಿರ್ದೇಶನದ ಸಿನಿಮಾ ಸೆಪ್ಟೆಂಬರ್‌ 4ರಿಂದ ಸ್ಟ್ರೀಮ್‌ ಆಗುತ್ತಿದೆ. ಈ ಹಿಂದೆ ಕಿರುಚಿತ್ರಗಳನ್ನು ನಿರ್ಮಿಸಿದ್ದ ಕೀರ್ತಿ, ಹೊಸ ದಿನಚರಿ ಮೂಲಕ ನಿರ್ದೇಶಕರಾಗಿ ಬಡ್ತಿ ಪಡೆದಿದ್ದರು. ಎಲ್ಲರ ಜೀವನದಲ್ಲೂ ಪ್ರೀತಿ ಇದ್ದೇ ಇರುತ್ತದೆ. ಆದರೆ ಪ್ರೀತಿಸಿದ ವ್ಯಕ್ತಿ ಕೊನೆಯವರೆಗೂ ಇರುತ್ತಾರಾ? ಅವರಿಲ್ಲದೇ ಬೇರೊಬ್ಬರು ಜೀವನದಲ್ಲಿ ಬಂದಾಗ ಏನಾಗುತ್ತದೆ ಎನ್ನುವುದು ಚಿತ್ರದ ಕಥಾಹಂದರ. ಗಂಗಾಧರ್‌ ಸಾಲಿಮಠ್‌ ನಿರ್ಮಾಣದ ಚಿತ್ರದ ಪ್ರಮುಖ ಪಾತ್ರಗಳಲ್ಲಿ ಬಾಬು ಹಿರಣ್ಣಯ್ಯ ಮತ್ತು ಅರುಣಾ ಬಾಲರಾಜ್ ಜೊತೆಗೆ ಬಹುತೇಕ ಹೊಸಬರ ನಟಿಸಿದ್ದಾರೆ. ಉಳಿದಂತೆ, ದೀಪಕ್ ಸುಬ್ರಹ್ಮಣ್ಯ, ಚೇತನ್ ವಿಕ್ಕಿ, ಮಂದಾರ, ವರ್ಷ, ಶ್ರೀಪ್ರಿಯಾ ಮುಂತಾದವರು ನಟಿಸಿದ್ದಾರೆ. ವೈಶಾಖ್ ವರ್ಮಾ ಸಂಗೀತ – ಸಾಹಿತ್ಯ, ಅಶ್ವಿನ್ ಹೇಮಂತ್ ಹಿನ್ನೆಲೆ ಸಂಗೀತ, ರಂಜಿತ್ ಸೇತು ಸಂಕಲನ ಚಿತ್ರಕ್ಕಿದೆ.

Previous articleಬರ್ತ್‌ಡೇ ಬಾಯ್‌ ಧನ್ವೀರ್‌ | ರಘುಕುಮಾರ್‌ ನಿರ್ದೇಶನದ ನೂತನ ಸಿನಿಮಾ ಘೋಷಣೆ
Next articleತಮಿಳು ನಟ, ಚಿತ್ರನಿರ್ದೇಶಕ ಮಾರಿಮುತ್ತು ಹೃದಯಾಘಾತದಿಂದ ನಿಧನ

LEAVE A REPLY

Connect with

Please enter your comment!
Please enter your name here