ಮಲಯಾಳಂನ ಖ್ಯಾತ ನಟ ಮೋಹನ್‌ಲಾಲ್‌ ಪುತ್ರ ಪ್ರಣವ್‌ ನಟನೆಯ ‘ಹೃದಯಂ’ OTT ಸ್ಟ್ರೀಮಿಂಗ್‌ ಡೇಟ್‌ ಘೋಷಣೆಯಾಗಿದೆ. ಥಿಯೇಟರ್‌ನಲ್ಲಿ ದೊಡ್ಡ ಯಶಸ್ಸು ಕಂಡ ಸಿನಿಮಾದಲ್ಲಿ ಕಲ್ಯಾಣಿ ಪ್ರಿಯದರ್ಶನ್‌ ಮತ್ತು ದರ್ಶನ ರಾಜೇಂದ್ರನ್‌ ನಾಯಕಿಯರಾಗಿ ನಟಿಸಿದ್ದಾರೆ.

ವಿನೀತ್‌ ಶ್ರೀನಿವಾಸನ್‌ ನಿರ್ದೇಶನದಲ್ಲಿ ಪ್ರಣವ್‌ ಮೋಹನ್‌ಲಾಲ್‌ ನಟಿಸಿರುವ ರೊಮ್ಯಾಂಟಿಕ್‌ ಡ್ರಾಮಾ ಮಲಯಾಳಂ ಸಿನಿಮಾ ‘ಹೃದಯಂ’ ಕೇರಳ ಬಾಕ್ಸ್‌ ಆಫೀಸ್‌ನಲ್ಲಿ ಯಶಸ್ವಿಯಾದ ಪ್ರಯೋಗ. ಕೋವಿಡ್‌ ನಿಯಮಗಳ ಮಧ್ಯೆಯೂ ಚಿತ್ರಕ್ಕೆ ಪ್ರೇಕ್ಷಕರಿಂದ ಉತ್ತಮ ಬೆಂಬಲ ವ್ಯಕ್ತವಾಯ್ತು. ಇದೀಗ ಸಿನಿಮಾ ಓಟಿಟಿಗೆ ಬರುತ್ತಿದ್ದು ಡಿಸ್ನೀಪ್ಲಸ್‌ ಹಾಟ್‌ಸ್ಟಾರ್‌ನಲ್ಲಿ ಫೆಬ್ರವರಿ 18ರಿಂದ ಸ್ಟ್ರೀಮ್‌ ಆಗಲಿದೆ. ಚಿತ್ರದಲ್ಲಿ ಪ್ರಣವ್‌ಗೆ ನಾಯಕಿಯರಾಗಿ ಕಲ್ಯಾಣಿ ಪ್ರಿಯದರ್ಶನ್‌ ಮತ್ತು ದರ್ಶನ ರಾಜೇಂದ್ರನ್‌ ನಟಿಸಿದ್ದಾರೆ. ಜನವರಿ 21ರಂದು ಥಿಯೇಟರ್‌ಗೆ ಬಿಡುಗಡೆಯಾದ ಸಿನಿಮಾ 50 ಕೋಟಿ ರೂ. ಮೀರಿ ವಹಿವಾಟು ದಾಖಲಿಸಿದೆ. ದಕ್ಷಿಣದ ಇತರೆ ರಾಜ್ಯಗಳಲ್ಲೂ ಸಿನಿಮಾಗೆ ಬೆಂಬಲ ಸಿಕ್ಕಿತು. ವಿಮರ್ಶಕರು ಮತ್ತು ಪ್ರೇಕ್ಷಕರಿಂದ ಸಕಾರಾತ್ಮಕ ರಿವ್ಯೂ ಪಡೆದ ಸಿನಿಮಾ ಈಗ OTTಗೆ ಬರುತ್ತಿದೆ.

Previous articleವೆಬ್‌ ಸರಣಿಯಾಗಿ ಮೀನಾ ಕುಮಾರಿ – ಕಮಲ್‌ ಅಮ್ರೋಹಿ ಲವ್‌ಸ್ಟೋರಿ
Next articleBigg Boss Non Stop; ಬಿಗ್‌ಬಾಸ್‌ ತೆಲುಗು OTT ವರ್ಷನ್‌ ಘೋಷಿಸಿದ ನಾಗಾರ್ಜುನ

LEAVE A REPLY

Connect with

Please enter your comment!
Please enter your name here