ತಮಿಳು ನಟ ವಿಕ್ರಂ ಮತ್ತು ಅವರ ಪುತ್ರ ಧ್ರುವ ನಟಿಸಿರುವ ‘ಮಹಾನ್‌’ ತಮಿಳು ಸಿನಿಮಾ ಅಮೇಜಾನ್‌ ಪ್ರೈಮ್‌ನಲ್ಲಿ ಫೆಬ್ರವರಿ 10ರಿಂದ ಸ್ಟ್ರೀಮ್‌ ಆಗಲಿದೆ. ಸೆವೆನ್‌ ಸ್ಕ್ರೀನ್‌ ಸ್ಟುಡಿಯೋ ನಿರ್ಮಾಣದ ಚಿತ್ರವನ್ನು ಕಾರ್ತೀಕ್‌ ಸುಬ್ಬರಾಜ್‌ ನಿರ್ದೇಶಿಸಿದ್ದಾರೆ.

ಕಾರ್ತೀಕ್‌ ಸುಬ್ಬರಾಜ್‌ ನಿರ್ದೇಶನದಲ್ಲಿ ವಿಕ್ರಂ ಮತ್ತು ಧ್ರುವ ನಟಿಸಿರುವ ‘ಮಹಾನ್‌’ ತಮಿಳು ಸಿನಿಮಾ ಅಮೇಜಾನ್‌ ಪ್ರೈಮ್‌ನಲ್ಲಿ ಫೆಬ್ರವರಿ 10ರಿಂದ ಸ್ಟ್ರೀಮ್‌ ಆಗಲಿದೆ. ‘ಜಗಮೇ ತಂದಿರಮ್‌’ ನಂತರ ನೇರವಾಗಿ OTTಗೆ ಬರುತ್ತಿರುವ ನಿರ್ದೇಶಕ ಕಾರ್ತೀಕ್‌ ಸುಬ್ಬರಾಜ್‌ ಅವರ ಎರಡನೇ ಚಿತ್ರವಿದು. ಸೆವೆನ್‌ ಸ್ಕ್ರೀನ್‌ ಸ್ಟುಡಿಯೋ ನಿರ್ಮಾಣದ ಚಿತ್ರದ ಇತರೆ ಪ್ರಮುಖ ಪಾತ್ರಗಳಲ್ಲಿ ಸಿಮ್ರಾನ್‌, ಬಾಬ್ಬಿ ಸಿಂಹ, ವಾಣಿ ಭೋಜನ್‌ ನಟಿಸಿದ್ದಾರೆ. ಮೂಲ ತಮಿಳು ಭಾಷೆಯ ಜೊತೆ ಕನ್ನಡ, ಮಲಯಾಳಂ ಮತ್ತು ತೆಲುಗಿನಲ್ಲೂ ಸಿನಿಮಾ ತೆರೆಕಾಣಲಿದೆ. ಕನ್ನಡದಲ್ಲಿ ಚಿತ್ರದ ಶೀರ್ಷಿಕೆ ‘ಮಹಾ ಪುರುಷ’ ಎಂದಿದೆ.

ಚಿತ್ರದ ಕುರಿತು ಮಾತನಾಡುವ ಲಲಿತ್‌ ಕುಮಾರ್‌, “ಆಕ್ಷನ್‌, ಡ್ರಾಮಾ ಮತ್ತು ಎಮೋಷನ್‌ಗಳ ಸಮಾನ ಮಿಶ್ರಣ ಈ ಸಿನಿಮಾ. ಇಂಥದ್ದೊಂದು ಉತ್ತಮ ಕತೆಗೆ ಉತ್ತಮ ಕಲಾವಿದರ ನಟನೆಯೂ ಸೇರಿಕೊಂಡು ವೀಕ್ಷಕರಿಗೆ ಇದು ಅಪೂರ್ವ ಮನರಂಜನೆ ನೀಡುವ ಚಿತ್ರವಾಗಲಿದೆ” ಎಂದಿದ್ದಾರೆ. ಸಿನಿಮಾದ ಅಫಿಷಿಯಲ್‌ ಸಿನಾಪ್ಸಿಸ್‌ ಹೀಗಿದೆ – ”ಸ್ವಾತಂತ್ರ್ಯ ಮತ್ತು ಹಣ ಗಳಿಕೆಯ ಆಸೆಯಿಂದ ವ್ಯಕ್ತಿಯೊಬ್ಬ ತನ್ನ ಕುಟುಂಬದಿಂದ ಬೇರ್ಪಡುತ್ತಾನೆ. ತನ್ನ ಗುರಿಯನ್ನು ತಲುಪುವ ಆತ ಪುತ್ರನ ಪ್ರೀತಿಯನ್ನು ಕಳೆದುಕೊಳ್ಳುತ್ತಾನೆ. ಶ್ರೀಮಂತನಾಗುವ ಆತನ ಆಸೆಯೇನೋ ಈಡೇರುತ್ತದೆ. ಆದರೆ ಬದುಕು ತಂದೆಯ ಪ್ರೀತಿಯನ್ನು ಅವನಿಗೆ ಮರಳಿ ಗಳಿಸಿಕೊಡುತ್ತದೆಯೇ?”

Previous articleಬಾಲಿವುಡ್‌ನ ಭ್ರಷ್ಟತನಕ್ಕೆ ಈಡಾಗಬೇಡಿ; ದಕ್ಷಿಣದ ಹೀರೋಗಳಿಗೆ ನಟಿ ಕಂಗನಾ ಸಲಹೆ
Next articleಟ್ರೈಲರ್‌ | ಕೀರ್ತಿ ಸುರೇಶ್‌ ‘ಗುಡ್‌ಲಕ್‌ ಸಖಿ’; ನಾಗೇಶ್‌ ಕುಕನೂರ್‌ ತೆಲುಗು ಸಿನಿಮಾ

LEAVE A REPLY

Connect with

Please enter your comment!
Please enter your name here