ಲೋಕೇಶ್ ಕನಗರಾಜ್ ನಿರ್ದೇಶನದಲ್ಲಿ ರಜನೀಕಾಂತ್ ನಟಿಸುತ್ತಿರುವ ನೂತನ ತಮಿಳು ಸಿನಿಮಾ ‘ಕೂಲಿ’ ವಿವಾದಕ್ಕೆ ಸಿಲುಕಿದೆ. ಇತ್ತೀಚೆಗೆ ರಿಲೀಸ್ ಆದ ಚಿತ್ರದ ಪ್ರೋಮೋದಲ್ಲಿನ ಮ್ಯೂಸಿಕ್‌ಗೆ ಸಂಬಂಧಿಸಿದಂತೆ ಸಂಗೀತ ಸಂಯೋಜಕ ಇಳಯರಾಜ ಅವರು ಚಿತ್ರ ನಿರ್ಮಿಸುತ್ತಿರುವ ಸನ್ ಪಿಕ್ಚರ್ಸ್‌ಗೆ ಲೀಗಲ್ ನೋಟೀಸ್ ಕಳುಹಿಸಿದ್ದಾರೆ.
ರಜನೀಕಾಂತ್ ನಟನೆಯ ನೂತನ ತಮಿಳು ಸಿನಿಮಾ ‘ಕೂಲಿ’ ಸುದ್ದಿಯಾಗಿದೆ. ಸನ್ ಪಿಕ್ಚರ್ಸ್ ನಿರ್ಮಾಣದ ಚಿತ್ರವನ್ನು ಲೋಕೇಶ್ ಕನಗರಾಜ್ ನಿರ್ದೇಶಿಸುತ್ತಿದ್ದಾರೆ. ಇತ್ತೀಚೆಗೆ ಸಿನಿಮಾದ ಪ್ರೋಮೋ ರಿಲೀಸ್ ಆಗಿತ್ತು. ರಜನೀಕಾಂತ್‌ಗೆ ಗೌರವ ಸಲ್ಲಿಸುವ ಈ ಪ್ರೋಮೋದಲ್ಲಿ ‘ತಂಗ ಮಗನ್’ (1983) ತಮಿಳು ಸಿನಿಮಾದ ‘ವಾ ವಾ ಪಕ್ಕಮ್ ವಾ’ remixed ವರ್ಷನ್ ಗೀತೆ ಬಳಕೆ ಮಾಡಲಾಗಿದೆ. ಖ್ಯಾತ ಸಂಗೀತ ಸಂಯೋಜಕ ಇಳಯರಾಜ ಅವರ ಸಂಯೋಜನೆಯ ಸೂಪರ್‌ಹಿಟ್ ಗೀತೆಯಿದು. ತಮ್ಮ ಅನುಮತಿ ಇಲ್ಲದೆ ‘ಕೂಲಿ’ ಪ್ರೋಮೋದಲ್ಲಿ ಈ ಸೂಪರ್‌ಹಿಟ್ ಗೀತೆ, ಸಂಗೀತ ಬಳಕೆ ಮಾಡಿದ್ದಾರೆ ಎಂದು ಇಳಯರಾಜ ಅವರು ಸನ್ ಪಿಕ್ಚರ್ಸ್ ವಿರುದ್ಧ ಕಾನೂನು ಕ್ರಮ ಜರುಗಿಸಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಸನ್ ಪಿಕ್ಚರ್ಸ್ ಕಡೆಯಿಂದ ಪ್ರತಿಕ್ರಿಯೆ ವ್ಯಕ್ತವಾಗಿಲ್ಲ. Sun Pictures ಈ ಹಿಂದೆ ರಜನೀಕಾಂತ್ ಅವರಿಗೆ ಎಂಧಿರನ್, ಪೆಟ್ಟಾ, ಅಣ್ಣಾತೆ, ಜೈಲರ್ ಸಿನಿಮಾಗಳನ್ನು ನಿರ್ಮಿಸಿದೆ. ರಜನೀಕಾಂತ್ ಅವರಿಗೆ ಸನ್ ಪಿಕ್ಚರ್ಸ್ ನಿರ್ಮಿಸುತ್ತಿರುವ ನೂತನ ತಮಿಳು ಸಿನಿಮಾ ‘ಕೂಲಿ’ಯನ್ನು ಲೋಕೇಶ್ ಕನಗರಾಜ್ ನಿರ್ದೇಶಿಸುತ್ತಿದ್ದಾರೆ. ಅನಿರುದ್ಧ ರವಿಚಂದ್ರನ್ ಸಂಗೀತ ಸಂಯೋಜಿಸಲಿದ್ದಾರೆ. ನಲವತ್ತು ವರ್ಷಗಳ ವೃತ್ತಿ ಬದುಕಿನಲ್ಲಿ ಸಂಗೀತ ಸಂಯೋಜಕ ಇಳಯರಾಜ ಅವರು ಹಲವು ಬಾರಿ ಕಾಪಿರೈಟ್ಸ್‌ಗೆ ಸಂಬಂಧಿಸಿದಂತೆ ಕಾನೂನು ಸಮರ ನಡೆಸಿದ್ದಿದೆ. ಸದ್ಯ ತಾವು ಸಂಯೋಜಿಸಿರುವ 4,500 ಹಾಡುಗಳ ‘special moral rights’ಗಾಗಿ ಅವರು ಹೋರಾಟ ನಡೆಸುತ್ತಿದ್ದಾರೆ.