ವಿವೇಕ್‌ ಒಬೇರಾಯ್‌ ನಟನೆಯ ‘ಇನ್‌ಸೈಡ್‌ ಎಡ್ಜ್‌ 3ʼ ಟ್ರೈಲರ್‌ ಬಿಡುಗಡೆಯಾಗಿದ್ದು, ಮೂರನೇ ಸೀಸನ್‌ ಕುರಿತು ನಿರೀಕ್ಷೆ ಹೆಚ್ಚಿದೆ. ಕ್ರಿಕೆಟ್‌ನ ಬೆಟ್ಟಿಂಗ್‌ ಕರಾಳಮುಖ ತೋರಿಸುವ ಸರಣಿ ಅಮೇಜಾನ್‌ ಪ್ರೈಮ್‌’ನಲ್ಲಿ ಡಿಸೆಂಬರ್‌ 3ರಿಂದ ಪ್ರಾರಂಭವಾಗಲಿದೆ.

ಝರಿನಾ ಮಲಿಕ್‌ (ರಿಚಾ ಛಡ್ಡಾ) ಕಣ್ಣು ಕ್ರಿಕೆಟ್‌ ಫೆಡರೇಷನ್‌ ಪ್ರೆಸಿಡೆಂಟ್‌ ಚೇರ್‌ ಮೇಲೆ ಇದ್ದು, ತನ್ನದೇ ಲಾಬಿ ನಡೆಸುವ ದುರಾಸೆ. ಇದಕ್ಕೆ ವಿಕ್ರಾಂತ್ ಧವನ್‌ (ವಿವೇಕ್‌ ಒಬೇರಾಯ್‌) ಪ್ರತಿರೋಧ ಎದುರಾಗುತ್ತದೆ. ಸೀರೀಸ್‌ನಲ್ಲಿ ಕ್ರಿಕೆಟ್‌ ಬೆಟ್ಟಿಂಗ್‌, ಮ್ಯಾಚ್‌ ಫಿಕ್ಸಿಂಗ್‌, ಮೈಂಡ್‌ ಗೇಮ್‌, ಧನಿಕರ ಲಾಬಿ.. ಹೀಗೆ ಕ್ರಿಕೆಟ್‌ನ ಮತ್ತೊಂದು ಮುಖ ಅನಾವರಣವಾಗುತ್ತದೆ. ಇದರ ನಡುವೆ ಕ್ರಿಕೆಟ್‌ ಬೆಟ್ಟಿಂಗ್‌ ಅನ್ನು ಲೀಗಲ್‌ ಮಾಡುವ ಪ್ರಯತ್ನ ನಡೆದಿದೆ ಎಂದು ಈ ಮೂರನೇ ಸರಣಿಯಲ್ಲಿ ತೋರಿಸಲಾಗಿದೆ!

ಅಷ್ಟೇ ಅಲ್ಲದೆ ಇದರ ಸುತ್ತ ಕಪ್ಪು ಹಣದ ಛಾಯೆ ಕೂಡ ಮೂಡುತ್ತದೆ. ಕೆಲವರು ಕಪ್ಪು ಹಣದ ಬಳಕೆಗಾಗಿ ಭಾರತದಲ್ಲಿ ಕ್ರಿಕೆಟ್‌ ಬೆಟ್ಟಿಂಗ್‌ ಅನ್ನು ಲೀಗಲ್‌ ಮಾಡಲು ಮುಂದಾಗುತ್ತಾರೆ. ಆದರೆ ಕೆಲ ಉತ್ತಮ ಅಧಿಕಾರಿಗಳು ಸ್ವಾರ್ಥಕ್ಕಾಗಿ ಕ್ರಿಕೆಟ್‌ ಬಳಕೆ ಮಾಡಲು ಅನುವು ಮಾಡಿಕೊಡುವುದಿಲ್ಲ. ಹೀಗೆ ಕ್ರಿಕೆಟ್‌ ಕುರಿತಾದ ಅನೇಕ ರಹಸ್ಯ ಸಂಗತಿಗಳನ್ನು ‘ಇನ್‌ಸೈಡ್‌ ಎಡ್ಜ್‌ 3ʼ ಹೇಳುತ್ತಾ ಹೋಗುತ್ತದೆ. ‘ಇನ್‌ಸೈಡ್‌ ಎಡ್ಜ್‌’ 2017ರಲ್ಲಿ ಮೊದಲ ಬಾರಿ ಅಮೇಜಾನ್ ಪ್ರೈಮ್‌ನಲ್ಲಿ ಸ್ಟ್ರೀಮ್ ಆಗಿ ಯಶಸ್ಸು ಕಂಡಿತ್ತು. ಇದೀಗ ಮೂರನೇ ಸರಣಿ ಡಿಸೆಂಬರ್‌ 3ರಿಂದ ಅಮೆಜಾನ್‌ ಪ್ರೈಮ್‌ನಲ್ಲಿ ಸರಣಿ ಸ್ಟ್ರೀಮ್‌ ಆಗಲಿದೆ.

LEAVE A REPLY

Connect with

Please enter your comment!
Please enter your name here