ಪುನೀತ್‌ ರಾಜಕುಮಾರ್‌ ಹುಟ್ಟುಹಬ್ಬದ ಅಂಗವಾಗಿ ಅವರ ಹಿಟ್‌ ಸಿನಿಮಾ ‘ಜಾಕಿ’ ಮರುಬಿಡುಗಡೆಯಾಗಲಿದೆ. ಸೂರಿ ನಿರ್ದೇಶನದ ಈ ಸಿನಿಮಾ 2010ರ ಅಕ್ಟೋಬರ್‌ನಲ್ಲಿ ತೆರೆಕಂಡಿತ್ತು. KRG Studios ಮುಂದಿನ ತಿಂಗಳು ಮಾರ್ಚ್‌ 15ರಂದು ನೂರಕ್ಕೂ ಹೆಚ್ಚು ಥಿಯೇಟರ್‌ಗಳಲ್ಲಿ ಚಿತ್ರವನ್ನು ಬಿಡುಗಡೆ ಮಾಡುತ್ತಿದೆ.

ಪುನೀತ್ ರಾಜಕುಮಾರ್ ಮತ್ತು ಭಾವನಾ ನಟಿಸಿರುವ ‘ಜಾಕಿ’ ಸಿನಿಮಾ ಮರು ಬಿಡುಗಡೆಯಾಗಲಿದೆ. ಸೂರಿ ನಿರ್ದೇಶನದ ಸಿನಿಮಾ ಆಗ ದೊಡ್ಡ ಯಶಸ್ಸು ಕಂಡಿತ್ತು. ಇದೇ ಮಾರ್ಚ್ 15ರಂದು KRG Studios ಚಿತ್ರವನ್ನು ಮತ್ತೆ ತೆರೆಗೆ ತರುತ್ತಿದೆ. ಈ ಕುರಿತು ಮಾತನಾಡಿರುವ ಕಾರ್ತಿಕ್‌ ಗೌಡ, ‘ಪುನೀತ್‌ ರಾಜಕುಮಾರ್‌ ಅವರ ಜನ್ಮದಿನದಂದು ಪ್ರತಿ ವರ್ಷ ಅವರ ಒಂದೊಂದು ಬ್ಲಾಕ್ ಬಸ್ಟರ್ ಚಿತ್ರವನ್ನು ಬಿಡುಗಡೆ ಮಾಡುವ ಆಲೋಚನೆ ಇದೆ. ‘ಜಾಕಿ’ ಅವರ ಅತ್ಯಂತ ಜನಪ್ರಿಯ ಚಲನಚಿತ್ರಗಳಲ್ಲೊಂದು. ಇದು ಅವರ ಅಭಿಮಾನಿಗಳಿಗೆ ಹಾಗೂ ಎಲ್ಲರಿಗೂ ಅಚ್ಚುಮೆಚ್ಚಿನ ಚಿತ್ರವಾಗಿದೆ. ಅಪ್ಪು ಬರ್ತ್‌ಡೇಗೆ ವಿಶೇಷವಾಗಿ ಏನು ಮಾಡಬಹುದು ಎಂದು ಅಶ್ವಿನಿ ಪುನೀತ್ ರಾಜಕುಮಾರ್ ಅವರೊಂದಿಗೆ ಚರ್ಚಿಸುವಾಗ ಜಾಕಿ ಬಗ್ಗೆ ಪ್ರಸ್ತಾಪವಾಯ್ತು. ಚಿತ್ರವನ್ನು ಮತ್ತೆ ತೆರೆಗೆ ತರಲು ನಿರ್ಧರಿಸಿದೆವು’ ಎಂದಿದ್ದಾರೆ.

‘ಜಾಕಿ’ ಚಿತ್ರದ ಹಾಡುಗಳು ಸೂಪರ್ ಹಿಟ್‌ ಆಗಿದ್ದವು. ಚಿತ್ರದಲ್ಲಿ ಪುನೀತ್‌ ರಾಜಕುಮಾರ್‌ ಮತ್ತು ಭಾವನಾ ಜೋಡಿ ಮೆಚ್ಚುಗೆ ಪಡೆದುಕೊಂಡಿತ್ತು. ಜನಮೆಚ್ಚಿದ ತೆರೆ ಮೇಲಿನ ಜೋಡಿಗಳ ಪಟ್ಟಿಯಲ್ಲಿ ಈ ಜೋಡಿಯು ಅಗ್ರ ಸ್ಥಾನದಲ್ಲಿತ್ತು. ಇದೀಗ ಈ ಚಿತ್ರವನ್ನು ಕನಿಷ್ಠ 100 ಚಿತ್ರಮಂದಿರಗಳಲ್ಲಿ ಮರುಬಿಡುಗಡೆ ಮಾಡಲು ನಿರ್ಧರಿಸಲಾಗಿದೆ. ‘ಜಾಕಿ’ ಚಿತ್ರಕಥೆಯು ಹಾಸ್ಯದ ಜೊತೆಗೆ ಭಾವನಾತ್ಮಕವಾಗಿಯೂ ಪ್ರೇಕ್ಷಕರನ್ನು ತಲುಪಿತ್ತು. ಈ ಚಿತ್ರವನ್ನು Poornima Enterprises ಬ್ಯಾನರ್‌ ಅಡಿಯಲ್ಲಿ ಪಾರ್ವತಮ್ಮ ರಾಜಕುಮಾರ್‌ ನಿರ್ಮಿಸಿದ್ದರು. ಸಿನಿಮಾ ಅಕ್ಟೋಬರ್‌ 10, 2010ರಲ್ಲಿ ತರೆಕಂಡು ಶತದಿನೋತ್ಸವ ಆಚರಿಸಿಕೊಂಡಿತ್ತು.

LEAVE A REPLY

Connect with

Please enter your comment!
Please enter your name here