ಲವ್‌ಸ್ಟೋರಿಗಳಲ್ಲಿ ನಟಿಸುತ್ತಿರುವ ಡಾರ್ಲಿಂಗ್‌ ಕೃಷ್ಣ ಮೊದಲ ಬಾರಿ ವಿಶಿಷ್ಟ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಸುಖೇಶ್‌ ನಾಯಕ್‌ ನಿರ್ದೇಶನದ ಸ್ವಾತಂತ್ರ್ಯ ಪೂರ್ವದ ಕತೆ ‘ಹಲಗಲಿ’ ಕೃಷ್ಣರ ಸಿನಿಮಾ ಬದುಕಿಗೆ ತಿರುವಾಗುವ ಸಾಧ್ಯತೆಗಳಿವೆ. ಬ್ರಿಟಿಷ್‌ ಆಳ್ವಿಕೆಯ ಕಾಲಘಟ್ಟದ ಕತೆಯ ಸಿನಿಮಾ ಎರಡು ಭಾಗಗಳಲ್ಲಿ ತಯಾರಾಗಲಿದೆ ಎನ್ನುವುದು ವಿಶೇಷ.

ನಟ ಡಾರ್ಲಿಂಗ್‌ ಕೃಷ್ಣ ರೊಮ್ಯಾಂಟಿಕ್‌ ಲವ್‌ ಸಿನಿಮಾಗಳಲ್ಲೇ ನಟಿಸುತ್ತಾ ಬಂದವರು. ಇದೀಗ ವಿಶಿಷ್ಟ ಪಾತ್ರಕ್ಕೆ ಸಜ್ಜಾಗಿದ್ದಾರೆ. ಸುಖೇಶ್‌ ಕುಮಾರ್‌ ನಿರ್ದೇಶನದಲ್ಲಿ ತಯಾರಾಗುತ್ತಿರುವ ‘ಹಲಗಲಿ’ ಚಿತ್ರದಲ್ಲಿ ಅವರು ಪಾತ್ರ ಮಾಡಲಿದ್ದಾರೆ. ಈ ಚಿತ್ರವು ಬ್ರಿಟಿಷರ ಆಳ್ವಿಕೆಯ ಹಿನ್ನೆಲೆಯನ್ನು ಒಳಗೊಂಡಿದ್ದು, ಐತಿಹಾಸಿಕ ವಿಷಯಾಧಾರಿತವಾಗಿದೆ ಎಂದು ಹೇಳಲಾಗುತ್ತಿದೆ. ಭಿನ್ನ ಪಾತ್ರಗಳ ತಲಾಶೆಯಲ್ಲಿದ್ದ ನಟ ಕೃಷ್ಣರಿಗೆ ಈ ಐತಿಹಾಸಿಕ ಚಲನಚಿತ್ರವು ಉತ್ತಮ ಅವಕಾಶ ಎನ್ನಬಹುದು. ಚಿತ್ರಕಥೆಯು 1857ರ ಸ್ವಾತಂತ್ರ್ಯ ಪೂರ್ವ ಯುಗಕ್ಕೆ ಪ್ರೇಕ್ಷಕರನ್ನು ಕೊಂಡೊಯ್ಯುವ ಭರವಸೆ ನೀಡುತ್ತದೆ. ಮತ್ತು ಬ್ರಿಟಿಷ್ ಆಳ್ವಿಕೆಯ ಕಾಲಘಟ್ಟವನ್ನೇ ಪ್ರಮುಖ ಹಿನ್ನೆಲೆಯಾಗಿರಿಸಿಕೊಂಡು ರಚನೆಯಾಗಿದೆ. ಚಿತ್ರವು ಸಧ್ಯದಲ್ಲೇ ಸೆಟ್ಟೇರಲಿದ್ದು, ಚಿತ್ರತಂಡ ಪ್ರಸ್ತುತ ಚಿತ್ರೀಕರಣದ ಸ್ಥಳಗಳ ಅನ್ವೇಷಣೆಯಲ್ಲಿದೆ. ಡಾರ್ಲಿಂಗ್ ಕೃಷ್ಣ ಅವರು ಎರಡು ಭಾಗಗಳಲ್ಲಿ ನಿರ್ಮಾಣವಾಗುತ್ತಿರುವ ಪ್ಯಾನ್-ಇಂಡಿಯಾ ಚಿತ್ರಕ್ಕಾಗಿ ದೈಹಿಕ ಕಸರತ್ತುಗಳ ತರಬೇತಿ ನಡೆಸುತ್ತಿದ್ದಾರೆ. ಕಲ್ಯಾಣ್ ಚಕ್ರವರ್ತಿ ಈ ಚಲನಚಿತ್ರವನ್ನು ನಿರ್ಮಿಸಲಿದ್ದಾರೆ. ವಾಸುಕಿ ವೈಭವ್ ಸಂಗೀತ ಸಂಯೋಜನೆ ಇರಲಿದೆ.

LEAVE A REPLY

Connect with

Please enter your comment!
Please enter your name here