ಆಂಟೋನಿ ಭಾಗ್ಯರಾಜ್‌ ನಿರ್ದೇಶನದ ‘ಸೈರನ್‌’ ತಮಿಳು ಸಿನಿಮಾದ ಟ್ರೇಲರ್‌ ಬಿಡುಗಡೆಯಾಗಿದೆ. ಜಯಂ ರವಿ, ಕೀರ್ತಿ ಸುರೇಶ್‌, ಅನುಪಮಾ ಪರಮೇಶ್ವರನ್‌ ಚಿತ್ರದ ಮುಖ್ಯ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ಮುಂದಿನ ವಾರ ಫೆಬ್ರವರ 16ರಂದು ಸಿನಿಮಾ ತೆರೆಕಾಣಲಿದೆ.

ಕೀರ್ತಿ ಸುರೇಶ್, ಜಯಂ ರವಿ ಮತ್ತು ಅನುಪಮಾ ಪರಮೇಶ್ವರನ್‌ ಅಭಿನಯಿಸಿರುವ ‘ಸೈರನ್’ ತಮಿಳು ಚಿತ್ರದ ಟ್ರೇಲರ್‌ ಬಿಡುಗಡೆಯಾಗಿದೆ. ಈ ಚಿತ್ರವನ್ನು ‘ಇರುಂಬು ತಿರೈ’, ‘ವಿಶ್ವಾಸಂ’ ಮತ್ತು ‘ಹೀರೋ’ ಚಿತ್ರಗಳನ್ನು ಬರೆದಿರುವ ಆಂಟೋನಿ ಭಾಗ್ಯರಾಜ್ ನಿರ್ದೇಶಿಸಿದ್ದಾರೆ. ಸಮುದ್ರಕನಿ ಚಿತ್ರದ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಟ್ರೇಲರ್‌, ಜಯಂ ರವಿ ಅವರ ವಾಯ್ಸ್‌ ಓವರ್‌ನೊಂದಿಗೆ ಪ್ರಾರಂಭವಾಗುತ್ತದೆ. ಜಯಂ ರವಿ ಆಂಬ್ಯುಲೆನ್ಸ್ ಡ್ರೈವರ್ ಆಗಿ ಕಾಣಿಸಿಕೊಂಡಿದ್ದು, ಕೆಲವೇ ನಿಮಿಷಗಳ ಮೊದಲು ಕರೆತಂದಿದ್ದರೆ ರೋಗಿಯನ್ನು ಉಳಿಸಬಹುದಿತ್ತು ಎಂದು ವೈದ್ಯರು ಹೇಳುತ್ತಾರೆ.

ಅನುಪಮಾ ಪರಮೇಶ್ವರನ್ ರವಿ ಹೆಂಡತಿಯಾಗಿ ಕಾಣಿಸಿಕೊಂಡಿದ್ದು, ಅವರಿಗೆ ಒಂದು ಹೆಣ್ಣು ಮಗು ಜನಿಸುತ್ತದೆ. ನಂತರ ಕಥೆ ತಿರುವು ಪಡೆದುಕೊಳ್ಳುತ್ತದೆ. ರವಿ ಜೈಲು ಸೇರುತ್ತಾನೆ. ಕೀರ್ತಿ ಪೊಲೀಸ್‌ ಅಧಿಕಾರಿಯಾಗಿ ಆಕ್ಷನ್‌ ದೃಶ್ಯಗಳಲ್ಲಿ ರವಿ ಕೇಸನ್ನು ಸೂಕ್ಷ್ಮವಾಗಿ ನಿಭಾಯಿಸುವುದನ್ನು ಕಾಣಬಹುದು. ಚಿತ್ರದಲ್ಲಿ ಯೋಗಿ ಬಾಬು, ಚಾಂದಿನಿ ತಮಿಳರಸನ್, ಅಳಗಂ ಪೆರುಮಾಳ್, ತುಳಸಿ ನಟಿಸಿದ್ದಾರೆ. G V ಪ್ರಕಾಶ್‌ ಕುಮಾರ್‌ ಸಂಗೀತ ಸಂಯೋಜನೆ, ಸೆಲ್ವ ಕುಮಾರ್‌ S K ಛಾಯಾಗ್ರಹಣ, ರೂಬೆನ್‌ ಸಂಕಲನ ಚಿತ್ರಕ್ಕಿದೆ. ಸಿನಿಮಾ ಇದೇ ಫೆಬ್ರವರಿ 16ರಂದು ತೆರೆಕಾಣಲಿದೆ. ಸದ್ಯ ಜಯಂ ರವಿ ಅವರು ‘ಜೆನಿ’ ಮತ್ತು ‘ಬ್ರದರ್’ ಸಿನಿಮಾಗಳು ಸೇರಿದಂತೆ ಅನೇಕ ಯೋಜನೆಗಳ ಭಾಗವಾಗಿದ್ದಾರೆ.

LEAVE A REPLY

Connect with

Please enter your comment!
Please enter your name here