ಕಾಳೀಶ್ವರನ್‌ ನಿರ್ದೇಶನದಲ್ಲಿ ವರುಣ್‌ ಧವನ್‌ ನಟಿಸುತ್ತಿರುವ ಹಿಂದಿ ಸಿನಿಮಾಗೆ ‘ಬೇಬಿ ಜಾನ್‌’ ಎನ್ನುವ ಶೀರ್ಷಿಕೆ ನಿಗಧಿಯಾಗಿದೆ. ಶಾರುಖ್‌ರ ‘ಜವಾನ್‌’ ಹಿಂದಿ ಸಿನಿಮಾ ನಿರ್ದೇಶಿಸಿದ್ದ ಅಟ್ಲೀ ಅವರ ನಿರ್ಮಾಣದ ಚಿತ್ರವಿದು. ಕೀರ್ತಿ ಸುರೇಶ್‌ ಮತ್ತು ವಾಮಿಕಾ ಗಬ್ಬಿ ಚಿತ್ರದ ಇಬ್ಬರು ನಾಯಕಿಯರು.

ಸೂಪರ್‌ಹಿಟ್‌ ಸಿನಿಮಾ ‘ಜವಾನ್‌’ ನಿರ್ದೇಶಕ ಅಟ್ಲೀ ನಿರ್ಮಿಸುತ್ತಿರುವ ವರುಣ್‌ ಧವನ್‌ ‘VD18’ ಹಿಂದಿ ಚಿತ್ರಕ್ಕೆ ‘ಬೇಬಿ ಜಾನ್’ ಎಂದು ಶೀರ್ಷಿಕೆ ನಿಗಧಿಯಾಗಿದೆ. ವರುಣ್ ಧವನ್ ಟೈಟಲ್‌ ಟೀಸರ್‌ ಹಂಚಿಕೊಂಡಿದ್ದಾರೆ. ಚಿತ್ರವನ್ನು ಎ ಕಾಳೀಶ್ವರನ್ ನಿರ್ದೇಶಿಸುತ್ತಿದ್ದು, ಕೀರ್ತಿ ಸುರೇಶ್ ಮತ್ತು ವಾಮಿಕಾ ಗಬ್ಬಿ ನಾಯಕಿಯರಾಗಿ ನಟಿಸುತ್ತಿದ್ದಾರೆ. ಜಾಕಿ ಶ್ರಾಫ್ ಮತ್ತು ರಾಜ್‌ಪಾಲ್ ಯಾದವ್ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಚಿತ್ರವನ್ನು Cine1 Studios ಮತ್ತು A For Apple Studios Production ಬ್ಯಾನರ್‌ ಅಡಿಯಲ್ಲಿ ಮುರಾದ್ ಖೇತಾನಿ, ಪ್ರಿಯಾ ಅಟ್ಲೀ ಮತ್ತು ಜ್ಯೋತಿ ದೇಶಪಾಂಡೆ ನಿರ್ಮಿಸುತ್ತಿದ್ದು, Jio Studious ಪ್ರಸ್ತುತ ಪಡಿಸುತ್ತಿದೆ. ಸಿನಿಮಾ ಮೇ 31ರಂದು ತೆರೆಕಾಣಲಿದೆ. ವರುಣ್ ಧವನ್ ಅವರು ಈ ಹಿಂದೆ ‘ಬವಾಲ್’, ‘ಭೇದಿಯಾ’ ಮತ್ತು ‘ಜುಗ್‌ಜುಗ್‌ ಜೀಯೋ’ ಚಿತ್ರಗಳಲ್ಲಿ ಅಭಿನಯಿಸಿದ್ದರು. ರಾಜ್ & ಡಿಕೆ ನಿರ್ದೇಶನದ ‘ಸಿಟಾಡೆಲ್‌’ ಸರಣಿಯ ಭಾರತೀಯ ಅವತರಣಿಕೆಯಲ್ಲಿ ಸಮಂತಾ ಅವರೊಂದಿಗೆ ವರುಣ್‌ ಕಾಣಿಸಿಕೊಳ್ಳಲಿದ್ದಾರೆ.

LEAVE A REPLY

Connect with

Please enter your comment!
Please enter your name here