OTT ವಲಯದಲ್ಲಿ ಇದು ಮಹತ್ವದ ಬೆಳವಣಿಗೆ. JioCinema ಈಗ HBO original, Warner Bros, Max ಜೊತೆ ಕೈಜೋಡಿಸಿದ್ದು, ಗ್ಲೋಬಲ್‌ ಕಂಟೆಂಟ್‌ ಭಾರತೀಯರಿಗೆ ಸುಲಭವಾಗಿ ಸಿಗಲಿದೆ. ಜನಪ್ರಿಯ ಹೌಸ್‌ ಆಫ್‌ ದಿ ಡ್ರ್ಯಾಗನ್‌, Succession, ಗೇಮ್‌ ಆಫ್‌ ಥ್ರೋನ್‌ ಮುಂತಾದ ಶೋಗಳನ್ನು ಮುಂದಿನ ತಿಂಗಳಿನಿಂದ JioCinemaದಲ್ಲಿ ವೀಕ್ಷಿಸಬಹುದಾಗಿದೆ.

ದೇಶದ ಪ್ರಮುಖ ಮನರಂಜನಾ ಸಂಸ್ಥೆ Viacom18 ಇದೀಗ Warner Bros ಸಂಸ್ಥೆಯೊಂದಿಗೆ ಕೈಜೋಡಿಸಿದೆ. ಹಾಗಾಗಿ ಹಲವಾರು ಜನಪ್ರಿಯ ಅಂತಾರಾಷ್ಟ್ರೀಯ ಮಟ್ಟದ ಎಂಟರ್‌ಟೇನ್‌ಮೆಂಟ್‌ ಕಂಟೆಂಟ್‌ ಭಾರತೀಯ ವೀಕ್ಷಕರಿಗೆ JioCinema ಪ್ಲಾಟ್‌ಫಾರ್ಮ್‌ನಲ್ಲಿ ಲಭ್ಯವಾಗಲಿದೆ. ಮುಂದಿನ ತಿಂಗಳಿಂದ HBO Original, Max ಮತ್ತು Warner Bros ಕಂಟೆಂಟ್‌ JioCinemaದಲ್ಲಿ ಸಿಗಲಿದೆ.

ದೇಶದ ಓಟಿಟಿ ವಲಯದಲ್ಲಿ ಇದು ಮಹತ್ವದ ಬೆಳವಣಿಗೆ ಎಂದೇ ಹೇಳಲಾಗಿದೆ. ಈ ಒಪ್ಪಂದದ ಅನ್ವಯ HBO ನಲ್ಲಿ ಸ್ಟ್ರೀಮ್‌ ಆಗುತ್ತಿರುವ ಹಾಗೂ ಮುಂದಿನ ದಿನಗಳಲ್ಲಿ ಸ್ಟ್ರೀಮ್‌ ಆಗಲಿರುವ ಶೋಗಳು JioCinemaದಲ್ಲಿ ಸ್ಟ್ರೀಮ್‌ ಆಗಲಿವೆ. House of the Dragon, Tha Last of Us, Succession ಮತ್ತು The White Lotus, True Detective, Euphoria, Winning Time: The Rise of the Lakers Dynasty ಮತ್ತು Perry Mason ಶೋಗಳು JioCinemaದಲ್ಲಿ ಇರಲಿವೆ. ಮುಂದಿನ ದಿನಗಳಲ್ಲಿ HBOನಲ್ಲಿ ಮೂಡಿಬರಲಿರುವ The Idol, White House Plumbers, The Sympathizer ಮತ್ತು The Regime ಶೋಗಳಲ್ಲದೆ HBOನ ಜನಪ್ರಿಯ ಸರಣಿಗಳಾದ Game of Thrones, Sex & the City, Big Little Lies, Chernobyl ಮತ್ತು Veep ಭಾರತೀಯ ವೀಕ್ಷಕರಿಗೆ ಲಭ್ಯವಾಗಲಿವೆ.

HBO Maxನಲ್ಲಿ ಇರುವ Just Like That, Peacemaker, The Flight Attendant ಸರಣಿಗಳು Max ರೀಬ್ರಾಂಡಿಂಗ್‌ನೊಂದಿಗೆ ಮುಂದಿನ ತಿಂಗಳಿಂದ JioCinemaದಲ್ಲಿ ಸ್ಟ್ರೀಮ್‌ ಆಗಲಿವೆ. Maxನ ಬಹುನಿರೀಕ್ಷಿತ The Sisterhood, The batman spinoff The Penguin, Duster, JJ Abrams and LaToya Morgan ಸರಣಿಗಳೂ ಈ ಒಪ್ಪಂದದಡಿ ಇವೆ.

Warner Brosನ ಭಾರತ, ಆಗ್ನೇಯ ಏಷ್ಯಾ ಮತ್ತು ಕೊರಿಯಾ ವಿಭಾಗದ ಅಧ್ಯಕ್ಷ Clement Schewebig ಅವರು ಈ ಬಗ್ಗೆ ಮಾತನಾಡಿ, “Warner Bros. Discovery ಬ್ರ್ಯಾಂಡ್‌ಗಳು ಹಲವು ವರ್ಷಗಳಿಂದ ಭಾರತದಲ್ಲಿ ಜನಪ್ರಿಯವಾಗಿವೆ. ಇಲ್ಲಿನ ವೀಕ್ಷಕರಿಗೆ ನಮ್ಮ ಕಂಟೆಂಟ್‌ ಅನ್ನು Viacom18 ಮೂಲಕ ತಲುಪಿಸಲು ಉತ್ಸುಕರಾಗಿದ್ದೇವೆ. JioCinema ಪ್ಲಾಟ್‌ಫಾರ್ಮ್‌ ಮೂಲಕ ವೈವಿಧ್ಯಮಯ ಸರಣಿಗಳನ್ನು ಆಸಕ್ತರಿಗೆ ತಲುಪಿಸುವಲ್ಲಿ ಈ ಒಪ್ಪಂದ ನೆರವಾಗಲಿವೆ” ಎಂದಿದ್ದಾರೆ. Warner Bros ಲೈಬ್ರರಿಯ ಪ್ರಮುಖ ಸಿನಿಮಾಗಳಾದ Harry Potter, Lord of the Rings, DC Universe ಹಾಗೂ Dexter’s Laboratory ಮತ್ತು Tom and Jerry Kids ಅನಿಮೇಷನ್‌ ಸಿನಿಮಾಗಳು ಕೂಡ JioCinemaದಲ್ಲಿ ಸಿಗಲಿವೆ.

ಈ ಮಹತ್ವದ ಒಪ್ಪಂದದ ಬಗ್ಗೆ ಮಾತನಾಡುವ Viacom18 ಪ್ರಮುಖರಾದ Ferzad Palia, “ಎಲ್ಲರಿಗೂ ತಿಳಿದಿರುವ ಹಾಗೆ JioCinema ಪ್ಲಾಟ್‌ಫಾರ್ಮ್‌ Live sportsಗೆ ಹೆಚ್ಚು ಜನಪ್ರಿಯವಾಗಿತ್ತು. ಇದೀಗ ಮತ್ತೊಂದು ಮಜಲಿಗೆ ತೆರೆದುಕೊಳ್ಳುತ್ತಿದ್ದೇವೆ. Warner Bros. Discovery ಜೊತೆಗಿನ ಒಪ್ಪಂದ ನಮ್ಮ ಜರ್ನೀಯಲ್ಲಿ ಒಂದು ಮೈಲುಗಲ್ಲಾಗಲಿದೆ. ಈ ಮೂಲಕ ಹಾಲಿವುಡ್‌ ಕಂಟೆಂಟನ್ನು ನಮ್ಮ ಜನರಿಗೆ ತಲುಪಿಸಲಿದ್ದೇವೆ. ಮುಂದಿನ ದಿನಗಳಲ್ಲಿ ನಮ್ಮ ವೇದಿಕೆ ಮೂಲಕ ಜಾಗತಿಕ ಗುಣಮಟ್ಟದ Warner Bros. ಕಂಟೆಂಟ್‌ ಹೆಚ್ಚೆಚ್ಚು ಜನರಿಗೆ ತಲುಪಲಿದೆ” ಎಂದಿದ್ದಾರೆ.

LEAVE A REPLY

Connect with

Please enter your comment!
Please enter your name here