ಶಾಂತನು ಮಹೇಶ್ವರಿ ಮತ್ತು ತಾನ್ಯಾ ಮಣಿಕ್ತಲಾ ನಟನೆಯ ‘ಟೂತ್‌ ಪರಿ’ ವೆಬ್‌ ಸರಣಿಯ ಟ್ರೈಲರ್‌ ಬಿಡುಗಡೆಯಾಗಿದೆ. ‘ವೆನ್ ಲವ್ ಬೈಟ್’ ಎನ್ನುವುದು ಟ್ಯಾಗ್‌ಲೈನ್‌! ಏಪ್ರಿಲ್‌ 20ರಿಂದ ಸರಣಿ ನೆಟ್‌ಫ್ಲಿಕ್ಸ್‌ನಲ್ಲಿ ಸ್ಟ್ರೀಮ್‌ ಆಗಲಿದೆ.

ನೂತನ ವೆಬ್‌ ಸರಣಿ ‘ಟೂತ್ ಪರಿ’ ಟ್ರೈಲರ್‌ ಬಿಡುಗಡೆಯಾಗಿದೆ. ಶಾಂತನು ಮಹೇಶ್ವರಿ ಮತ್ತು ತಾನ್ಯಾ ಮಣಿಕ್ತಲಾ ಮುಖ್ಯಪಾತ್ರಧಾರಿಗಳು. ಬೆಂಗಾಲಿ ನಿರ್ದೇಶಕ ಪ್ರತಿಮ್ ದಾಸ್ ಗುಪ್ತ ಅವರ ಸಾರಥ್ಯದ ಸರಣಿ ‘an impossible love story’ ಎನ್ನುವ ವಿಶೇಷಣದೊಂದಿಗೆ ಪ್ರೇಕ್ಷಕರನ್ನು ತಲುಪಲಿದೆ. ಒಂದು ಸರಳ ಪ್ರೇಮಕತೆ ಕೊನೆಗೆ U-Turn ಹೊಡೆಯುತ್ತದಂತೆ! ಹಿರಿಯ ನಟಿ ರೇವತಿ ವಿಶಿಷ್ಟ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಸಿಕಂದರ್‌ ಖೇರ್‌ ಪೊಲೀಸ್‌ ಪಾತ್ರದಲ್ಲಿ ನಟಿಸಿದ್ದಾರೆ. ಅದಿಲ್‌ ಹುಸೇನ್‌ ಮತ್ತು ತಿಲೋತ್ತಮಾ ಶೋಮ್‌ ಪ್ರಮುಖ ಪಾತ್ರಗಳಲ್ಲಿದಾರೆ. ಹೀರೋ ಶಾಂತನು ಬೆಂಗಾಲಿ ದಂತವೈದ್ಯ ‘ರಾಯ್‌’ ಪಾತ್ರದಲ್ಲಿದ್ದರೆ, ತಾನ್ಯಾ Vampire ಆಗಿ ಹೆದರಿಸಲಿದ್ದಾರೆ.

ಚಿತ್ರದ ಶೀರ್ಷಿಕೆಯಲ್ಲಿ ಹಿಮ್ಮುಖವಾಗಿ ಬರೆದ ‘R’ ಅಕ್ಷರ ಕುತೂಹಲ ಕೆರಳಿಸಿದ್ದು ‘ವೆನ್ ಲವ್ ಬೈಟ್’ ಎನ್ನುವ ಟ್ಯಾಗ್‌ಲೈನ್‌ ಇದೆ. ಟ್ರೈಲರ್‌ ಹಂಚಿಕೊಂಡಿರುವ ಹೀರೋ ಶಾಂತನು, ‘ಮಾನವ ಮತ್ತು ರಕ್ತಪಿಶಾಚಿ ಮಧ್ಯೆಯ ಅಸಾಧ್ಯ ಪ್ರೇಮಕತೆಗೆ ಸಾಕ್ಷಿಯಾಗಲು ನಿಮ್ಮನ್ನು ಆಹ್ವಾನಿಸುತ್ತಿದ್ದೇನೆ’ ಎಂದು ಬರೆದಿದ್ದು, ತಾನ್ಯಾ ಕೂಡ ತಮ್ಮ ಇನ್‌ಸ್ಟಾಗ್ರಾಮ್‌ ಅಕೌಂಟ್‌ನಲ್ಲಿ ತಮ್ಮ ಅನಿಸಿಕೆ ಹಂಚಿಕೊಂಡಿದ್ದಾರೆ. ಉತ್ತಮ ಡ್ಯಾನ್ಸರ್‌ ಆದ ನಟ ಶಾಂತನು ‘ಗಂಗೂಭಾಯಿ ಕಾಥಿಯಾವಾಡಿ’ ಸಿನಿಮಾದಲ್ಲಿ ಗಮನ ಸೆಳೆದಿದ್ದರು. ‘ಎ ಸೂಟಬಲ್ ಬಾಯ್’ ನಟಿ ತಾನ್ಯಾಗೆ ಹೆಸರು ತಂದುಕೊಟ್ಟಿತ್ತು. ‘ಟೂತ್‌ ಪರಿ’ ಏಪ್ರಿಲ್‌ 20ರಿಂದ ನೆಟ್‌ಫ್ಲಿಕ್ಸ್‌ನಲ್ಲಿ ಸ್ಟ್ರೀಮ್‌ ಆಗಲಿದೆ.

Previous article‘ಕಿಸೀ ಕಿ ಭಾಯ್‌ ಕಿಸೀ ಕಾ ಜಾನ್‌’ ಟ್ರೈಲರ್‌ | ಸಲ್ಲೂ ಆಕ್ಷನ್‌ – ಫ್ಯಾಮಿಲಿ ಡ್ರಾಮಾ
Next articleJioCinemaದಲ್ಲಿ HBO original, Warner Bros, Max ಓಟಿಟಿ ಕಂಟೆಂಟ್‌

LEAVE A REPLY

Connect with

Please enter your comment!
Please enter your name here