ಶ್ರೀ ಮತ್ತು ಪ್ರಣತಿ ನಟನೆಯ ‘ಜಸ್ಟ್‌ ಪಾಸ್’‌ ಸಿನಿಮಾದ ಟೀಸರ್‌ ಬಿಡುಗಡೆಯಾಗಿದೆ. ಜಸ್ಟ್‌ ಪಾಸ್‌ ವಿದ್ಯಾರ್ಥಿಗಳ ಸುತ್ತ ಹೆಣೆದಿರುವ ಈ ಕತೆಯನ್ನು ಕೆ ಎಂ ರಘು ನಿರ್ದೇಶಿಸುತ್ತಿದ್ದಾರೆ. ಕೆ ವಿ ಶ್ರೀಧರ್‌ ಸಂಗೀತ ಸಂಯೋಜನೆ ಚಿತ್ರಕ್ಕಿದೆ.

ಕೆ ಎಂ ರಘು ನಿರ್ದೇಶಿಸಿರುವ ‘ಜಸ್ಟ್ ಪಾಸ್’ ಚಿತ್ರದ ಟೀಸರ್ ಬಿಡುಗಡೆಯಾಗಿದೆ. ಚಿತ್ರದಲ್ಲಿ ಶ್ರೀ ಹಾಗೂ ಪ್ರಣತಿ ನಾಯಕ- ನಾಯಕಿಯಾಗಿ ನಟಿಸಿದ್ದಾರೆ. ಟೀಸರ್‌ ಅಧಿಕ ಸಂಖ್ಯೆಯಲ್ಲಿ ವೀಕ್ಷಣೆಯಾಗುತ್ತಿದೆ. ತಮ್ಮ ಸಿನಿಮಾ ಶುರುವಾದದ್ದು ಹೇಗೆ ಎಂದು ನಿರ್ದೇಶಕರು ಮಾತನಾಡುತ್ತಾ, ‘ನಾನು ನಮ್ಮ‌ ಊರಿನ ಜಾತ್ರೆಗೆ ಹೋಗಿದಾಗ ನನ್ನ ಸ್ನೇಹಿತರೊಬ್ಬರು ಕರೆ ಮಾಡಿ ಮೈಸೂರಿನಲ್ಲಿ ನಿರ್ಮಾಪಕ ಶಶಿಧರ್ ಇದ್ದಾರೆ. ಅವರು ಚಿತ್ರ ನಿರ್ಮಾಣ ಮಾಡಲು ಹೊರಟಿದ್ದಾರೆ. ಕತೆ ಹೇಳಬೇಕು ಬಾ ಎಂದರು. ನಾನು ಶಶಿಧರ್ ಹಾಗೂ ಅವರ ಸಹೋದರ ಶ್ರೀಧರ್ ಅವರಿಗೆ ಕತೆ ಹೇಳಿದ್ದೆ. ಮೆಚ್ಚಿ ನಿರ್ಮಾಣ ಆರಂಭಿಸಿದ್ದರು. ಹೆಚ್ಚು ಅಂಕ ತೆಗೆದವರಿಗೆ ಕಾಲೇಜು ಇರುವಂತೆ. ಇದು ಜಸ್ಟ್ ಪಾಸ್ ಆದ ವಿದ್ಯಾರ್ಥಿಗಳಿಗಾಗಿಯೇ ಸ್ಥಾಪಿತವಾದ ಕಾಲೇಜು. ಕಾಲೇಜಿನಲ್ಲೇ ಹೆಚ್ಚು ಚಿತ್ರೀಕರಣ ನಡೆಯುತ್ತದೆ. ನಿರ್ಮಾಪಕರು ಯಾವುದೇ ಕೊರತೆ ಬಾರದಂತೆ ಚಿತ್ರವನ್ನು ಅದ್ಧೂರಿಯಾಗಿ ನಿರ್ಮಾಣ ಮಾಡಿದ್ದಾರೆ’ ಎನ್ನುತ್ತಾರೆ.

ಚಿತ್ರದ ನಿರ್ಮಾಪಕ ಕೆ ವಿ ಶಶಿಧರ್‌ ಅವರಿಗೆ ಯುವಕನಾಗಿದ್ದಾಗ ನಟನಾಗುವ ಉಮೇದು ಇತ್ತು. ಆದರೆ ಅವಕಾಶ ಸಿಗಲಿಲ್ಲ. ನಂತರ ಉದ್ಯಮದಲ್ಲಿ ಸಕ್ರಿಯರಾದ ಅವರು ಈಗ ನಿರ್ಮಾಪಕರಾಗಿ ಸಿನಿಮಾರಂಗಕ್ಕೆ ಬಂದಿದ್ದಾರೆ. ‘ನಟನಾಗಬೇಕೆಂಬ ಆಸೆಹೊತ್ತು ಬೆಂಗಳೂರಿಗೆ ಬಂದವನು ನಾನು. ನನಗೆ ನಟಿಸಲು ಅವಕಾಶ ಸಿಗಲಿಲ್ಲ. ಈಗ ನಿರ್ಮಾಪಕನಾಗಿ ಚಿತ್ರರಂಗಕ್ಕೆ ಬಂದಿದ್ದೇನೆ.‌ ಸಾಕಷ್ಟು ಹೊಸ ಪ್ರತಿಭೆಗಳಿಗೆ ನಮ್ಮ ಚಿತ್ರದಲ್ಲಿ ಅವಕಾಶ
ನೀಡಿದ್ದೇವೆ. ಜನವರಿ ಕೊನೆಗೆ ಚಿತ್ರವನ್ನು ತೆರೆಗೆ ತರುವ ಪ್ರಯತ್ನ ನಡೆಯುತ್ತಿದೆ’ ಎನ್ನುತ್ತಾರೆ ಶಶಿಧರ್‌. ನಟ ಶ್ರೀ ಈ ಚಿತ್ರದಲ್ಲಿ ಜಸ್ಟ್‌ಪಾಸ್‌ ವಿದ್ಯಾರ್ಥಿ ಅರ್ಜುನ್‌ ಪಾತ್ರದಲ್ಲಿ ನಟಿಸುತ್ತಿದ್ದಾರೆ. ರಂಗಾಯಣ ರಘು ಅವರಿಗೆ ಪ್ರಿನ್ಸಿಪಾಲ್‌ ಪಾತ್ರವಿದೆ. ಕೆ ವಿ ಶ್ರೀಧರ್ ಸಂಗೀತ, ಸುಜಯ್ ಕುಮಾರ್ ಛಾಯಾಗ್ರಾಹಣ ಚಿತ್ರಕ್ಕಿದೆ.

LEAVE A REPLY

Connect with

Please enter your comment!
Please enter your name here