ನಟಿ ನಯನತಾರಾ ಮತ್ತು ನಿರ್ದೇಶಕ ವಿಘ್ನೇಶ್ ಶಿವನ್ ಸದ್ಯದಲ್ಲೇ ದಂಪತಿಯಾಗಲಿದ್ದಾರೆ. ಮದುವೆ ದಿನಾಂಕ ನಿಗಧಿಪಡಿಸಲು ಸಿದ್ಧತೆ ನಡೆಸಿರುವ ನಟಿ ಶಾರುಖ್ ಖಾನ್‌ ಸಿನಿಮಾದಿಂದ ಹೊರನಡೆಯುವ ಸಾಧ್ಯತೆಗಳಿವೆ.

ಬಹುಭಾಷಾ ನಟಿ ನಯನತಾರಾ ಮತ್ತು ತಮಿಳು ಚಿತ್ರನಿರ್ದೇಶಕ ವಿಘ್ನೇಶ್ ಶಿವನ್‌ ನಿಶ್ಚಿತಾರ್ಥ ನೆರವೇರಿರುವುದು ಸರಿಯಷ್ಟೆ. ಇದೀಗ ಅವರ ಮದುವೆಗೆ ಸಿದ್ಧತೆ ನಡೆದಿದೆ. ಮುಹೂರ್ತ ನಿಗಧಿಯಾಗಿದ್ದು, ನಯನತಾರಾ ಹೊಸ ಸಿನಿಮಾಗಳನ್ನು ಒಪ್ಪಿಕೊಳ್ಳುತ್ತಿಲ್ಲ. ಎಲ್ಲವೂ ಅಂದುಕೊಂಡಂತೆಯೇ ಆಗಿದ್ದರೆ ಈ ವೇಳೆಗೆ ನಯನತಾರಾ ಅವರು ಶಾರುಖ್‌ ಖಾನ್ ಹೀರೋ ಆಗಿರುವ ಹಿಂದಿ ಚಿತ್ರದ ಚಿತ್ರೀಕರಣಕ್ಕೆಂದು ವಿದೇಶಕ್ಕೆ ತೆರಳಬೇಕಿತ್ತು. ಆದರೆ ಪುತ್ರ ಅರ್ಯನ್‌ ಡ್ರಗ್ಸ್‌ ಪ್ರಕರಣದಲ್ಲಿ ಸಿಲುಕಿದ್ದರಿಂದ ಶಾರುಖ್ ವಿದೇಶಿ ಪ್ರವಾಸ ರದ್ದುಗೊಳಿಸಿದರು.

ಹಿಂದಿ ಚಿತ್ರಕ್ಕೆಂದು ನಯನತಾರಾ ಕೊಟ್ಟಿದ್ದ ಡೇಟ್ಸ್ ಮುಗಿದಿದೆ. ಈಗ ಮದುವೆ ಪ್ರಸ್ತಾಪವಿರುವುದರಿಂದ ಈ ಚಿತ್ರದಿಂದ ಹೊರಬರಲು ಅವರು ನಿರ್ಧರಿಸಿದ್ದಾರೆ. ಈ ಮಧ್ಯೆ ಮೊನ್ನೆ ಅವರು ತಮ್ಮ ಪ್ರಿಯತಮ ವಿಘ್ನೇಶ್ ಶಿವನ್‌ ಅವರೊಡಗೂಡಿ ನಿರ್ಮಿಸಿದ ‘ಕೂಝಂಗಳ್‌’ ತಮಿಳು ಚಿತ್ರದ ಕುರಿತಾಗಿ ಅವರಿಗೆ ಸಂತಸದ ಸುದ್ದಿ ಸಿಕ್ಕಿದೆ. ಈ ಸಿನಿಮಾ ಭಾರತದಿಂದ ಪ್ರತಿಷ್ಠಿತ ಆಸ್ಕರ್‌ಗೆ ನಾಮನಿರ್ದೇಶನಗೊಂಡಿದೆ. ಹಲವು ಅಂತಾರಾಷ್ಟ್ರೀಯ ಚಿತ್ರೋತ್ಸವಗಳಲ್ಲಿ ಪ್ರದರ್ಶನಗೊಂಡಿರುವ ಈ ಸಿನಿಮಾ ಮೂಲಕ ನಯನತಾರಾ ಅವರ ಹೆಸರು ರಾಷ್ಟ್ರಮಟ್ಟದಲ್ಲೂ ಮಿಂಚುತ್ತಿದೆ. ಇತ್ತೀಚೆಗೆ ಫೋರ್ಬ್ಸ್‌ ಮ್ಯಾಗಜಿನ್‌ ನಯನತಾರಾ ಅವರನ್ನು ‘ಲೇಡಿ ಸೂಪರ್‌ಸ್ಟಾರ್‌’ ಎಂದು ಕರೆದು ಅವರ ಸಂದರ್ಶನ ನಡೆಸಿದ್ದನ್ನು ಇಲ್ಲಿ ಸ್ಮರಿಸಬಹುದು.

LEAVE A REPLY

Connect with

Please enter your comment!
Please enter your name here