ಉಪೇಂದ್ರ ಅಭಿನಯದ ‘ಕಬ್ಜ’ ಸಿನಿಮಾದ ಲಿರಿಕಲ್‌ ಸಾಂಗ್‌ ಬಿಡುಗಡೆಯಾಗಿದೆ. ಪ್ರವೀಣ್‌ ಮರವಂತೆ ರಚನೆಯ ಹಾಡಿಗೆ ರವಿ ಬಸ್ರೂರು ಸಂಗೀತ ಸಂಯೋಜಿಸಿದ್ದಾರೆ. ಐರಾ ಉಡುಪಿ, ಮನೀಶ್‌ ದಿನಕರ್‌, ಸಂತೋಷ್‌ ವೆಂಕಿ ಹಾಡಿರುವ ಮಾಸ್‌ ಸಾಂಗ್‌ ಆನಂದ್‌ ಆಡಿಯೋ ಮೂಲಕ ಬಂದಿದೆ.

ಪ್ಯಾನ್‌ ಇಂಡಿಯಾ ಸಿನಿಮಾ ಟ್ಯಾಗ್‌ಲೈನ್‌ನೊಂದಿಗೆ ‘ಕಬ್ಜ’ ತೆರೆಗೆ ಬರಲು ಸಿದ್ಧವಾಗಿದೆ. ಇದಕ್ಕೆ ಪೂರ್ವಭಾವಿಯಾಗಿ ಪ್ರೊಮೋಷನ್‌ ನಡೆದಿದ್ದು, ಇದರ ಭಾಗವಾಗಿ ಚಿತ್ರದ ‘ಚುಮ್‌ ಚುಮ್‌’ ಲಿರಿಕಲ್‌ ವೀಡಿಯೋ ಬಿಡುಗಡೆಯಾಗಿದೆ. ಚಿತ್ರದ ನಿರ್ದೇಶಕ ಮತ್ತು ನಿರ್ಮಾಪಕ ಆರ್‌.ಚಂದ್ರು ಅವರ ಊರು ಶಿಡ್ಲಘಟ್ಟದಲ್ಲಿ ನಡೆದ ಸಮಾರಂಭ ಆಡಿಯೋ ಬಿಡುಗಡೆಗೆ ಸಾಕ್ಷಿಯಾಯ್ತು. ಹಾಡಿಗೆ ಬಾಲಿವುಡ್‌ ನಟಿ ತಾನ್ಯಾ ಹೋಪ್‌ ಹೆಜ್ಜೆ ಹಾಕಿದ್ದಾರೆ. ಜಾನಿ ಮಾಸ್ಟರ್‌ ನೃತ್ಯ ಸಂಯೋಜನೆಯ ಹಾಡಿನಲ್ಲಿ ತಾನ್ಯಾ ಜೊತೆ ಹೀರೋ ಉಪೇಂದ್ರ ಇದ್ದಾರೆ. ಪ್ರವೀಣ್‌ ಮರವಂತೆ ರಚನೆಯ ಮಾಸ್‌ ಸಾಂಗ್‌ಗೆ ರವಿ ಬಸ್ರೂರು ಸಂಗೀತ ಸಂಯೋಜನೆಯಿದೆ. ಐರಾ ಉಡುಪಿ, ಮನೀಶ್‌ ದಿನಕರ್‌ ಮತ್ತು ಸಂತೋಷ್‌ ವೆಂಕಿ ಹಾಡಿಗೆ ದನಿಯಾಗಿದ್ದಾರೆ.

ಇವೆಂಟ್‌ನಲ್ಲಿ ಅತಿಥಿಯಾಗಿ ಪಾಲ್ಗೊಂಡಿದ್ದ ಶಿವರಾಜಕುಮಾರ್‌, “ನಾನು ಉಪೇಂದ್ರರ ಅಭಿಮಾನಿ. ಅವರು ‘ಓಂ’ ಸಿನಿಮಾ ಮೂಲಕ ಭಾರತೀಯ ಸಿನಿಮಾರಂಗದಲ್ಲಿ ಸಂಚಲನ ಸೃಷ್ಟಿಸಿದರು. ಅವರ ಜೊತೆ ಕೆಲಸ ಮಾಡುವುದೇ ಖುಷಿ. ಆರ್.ಚಂದ್ರು ಕೂಡ ಅದ್ಭುತವಾದ ಸಿನಿಮಾಗಳನ್ನು ನೀಡುತ್ತಾ ಬರುತ್ತಿದ್ದಾರೆ’ ಎಂದು ತಂಡಕ್ಕೆ ಶುಭ ಹಾರೈಸಿದರು. “ಮಾಸ್‌, ಕ್ಲಾಸ್‌… ಎರಡೂ ಮಾದರಿ ಮ್ಯೂಸಿಕ್‌ ಮಾಡುತ್ತಾರೆ ರವಿ ಬಸ್ರೂರು. ಅವರ ಹಿನ್ನೆಲೆ ಸಂಗೀತದಲ್ಲಿ ಕಬ್ಜ ಸಿನಿಮಾ ದೊಡ್ಡ ಸದ್ದು ಮಾಡಲಿದೆ” ಎನ್ನುತ್ತಾರೆ ಉಪೇಂದ್ರ. ಇಂಥದ್ದೊಂದು ದೊಡ್ಡ ಕ್ಯಾನ್ವಾಸ್‌ನ ಚಿತ್ರದ ಭಾಗವಾಗಿರುವ ಖುಷಿ ನಾಯಕಿ ‍ಶ್ರಿಯಾ ಶರಣ್‌ ಅವರಿಗೆ. ಈಗಾಗಲೇ ಎರಡು ಹಾಡುಗಳನ್ನು ಚಿತ್ರತಂಡ ಹೈದರಾಬಾದ್‌, ಚೆನ್ನೈನಲ್ಲಿ ಬಿಡುಗಡೆ ಮಾಡಿದೆ. ಚಿತ್ರದ ವಿಶೇಷ ಪಾತ್ರದಲ್ಲಿ ಸುದೀಪ್‌ ಅಭಿನಯಿಸಿದ್ದಾರೆ. ಕನ್ನಡ, ತೆಲುಗು, ತಮಿಳು, ಮಲಯಾಳಂ ಮತ್ತು ಹಿಂದಿ ಭಾಷೆಗಳಲ್ಲಿ ಮಾರ್ಚ್‌ 17ರಂದು ಸಿನಿಮಾ ತೆರೆಕಾಣಲಿದೆ. ಉತ್ತರ ಭಾರತದಲ್ಲಿ 1800ಕ್ಕೂ ಹೆಚ್ಚು ಥಿಯೇಟರ್‌ಗಳಲ್ಲಿ ಈ ಸಿನಿಮಾ ರಿಲೀಸ್‌ ಮಾಡುವುದು ನಿರ್ದೇಶಕರ ಯೋಜನೆ.

Previous article4ನೇ ಚಂದನವನ ಫಿಲ್ಮ್ ಕ್ರಿಟಿಕ್ಸ್ ಅಕಾಡೆಮಿ ಅವಾರ್ಡ್ಸ್ ನಾಮಿನೇಷನ್ ಘೋಷಣೆ
Next article‘19.20.21’; ಇದು ವಿಠಲ್ ಮಲೆಕುಡಿಯ ಕಾನೂನು ಹೋರಾಟದ ರೋಚಕ ಕಥೆ

LEAVE A REPLY

Connect with

Please enter your comment!
Please enter your name here