ಕಾರ್ತಿಕ್ ಅವರು ವರ್ತೂರು ಸಂತೋಷ್‌ಗೆ ಕಳಪೆ ನೀಡಿದ್ದರೆ, ತನಿಷಾ ಅವರು ಮೈಕಲ್ ಕಳಪೆ ಪ್ರದರ್ಶನ ನೀಡಿದ್ದಾರೆ ಎಂದು ಹೇಳಿದ್ದಾರೆ. ಒಟ್ಟಾರೆ ಮನೆಯ ಸದಸ್ಯರ ಬಾಯಲ್ಲಿ ಮೈಕಲ್‌ ಮತ್ತು ವರ್ತೂರು ಸಂತೋಷ್ ಹೆಸರುಗಳು ಹೆಚ್ಚು ಸಲ ಬಂದಂತಿದೆ.

ಬಿಗ್‌ಬಾಸ್‌ ಬಾಸ್ ಮನೆಯೊಳಗೆ ವಾರಾಂತ್ಯ ಸಮೀಪಿಸುತ್ತಿರುವ ಹಾಗೆಯೇ ಕಳಪೆ, ಉತ್ತಮ ಅನ್ನೋ ಹಾವು ಏಣಿ ಆಟ ಮತ್ತೆ ಶುರುವಾಗಿದೆ. ಈ ವಾರ ಬಹುಮಾನದ ಮೊತ್ತವನ್ನು ಗಳಿಸುವ ಟಾಸ್ಕ್ ಅನ್ನು ಬಿಗ್‌ಬಾಸ್ ಮನೆಯ ಸದಸ್ಯರಿಗೆ ನೀಡಿತ್ತು. ಈ ಟಾಸ್ಕ್‌ಗಳಲ್ಲಿ ಆಡುವ ಅವಕಾಶಕ್ಕಾಗಿ ಮಾತಿನ ಚಕಮಕಿಗಳೂ ನಡೆದಿದ್ದವು. ಈಗ ಅವೆಲ್ಲ ಮುಗಿದು ಈ ವಾರದ ಕಳಪೆ ಯಾರು? ಉತ್ತಮ ಯಾರು ಎಂಬುದನ್ನು ನಿರ್ಧರಿಸುವ ಹಂತ ಬಂದಿದೆ. ಕಳಪೆ – ಉತ್ತಮ ಯಾರು ಎಂಬ ಬಗ್ಗೆ ಮನೆಯ ಸದಸ್ಯರ ಅಭಿಪ್ರಾಯ ಏನು ಎಂಬುದರ ಕುರಿತು JioCinema ಬಿಡುಗಡೆ ಮಾಡಿರುವ ಪ್ರೋಮೊದಲ್ಲಿ ಸುಳಿವು ನೀಡಲಾಗಿದೆ.

ಕಾರ್ತಿಕ್ ಅವರು ವರ್ತೂರು ಸಂತೋಷ್‌ಗೆ ಕಳಪೆ ನೀಡಿದ್ದರೆ, ತನಿಷಾ ಅವರು ಮೈಕಲ್ ಕಳಪೆ ಪ್ರದರ್ಶನ ನೀಡಿದ್ದಾರೆ ಎಂದು ಹೇಳಿದ್ದಾರೆ. ಒಟ್ಟಾರೆ ಮನೆಯ ಸದಸ್ಯರ ಬಾಯಲ್ಲಿ ಮೈಕಲ್‌ ಮತ್ತು ವರ್ತೂರು ಸಂತೋಷ್ ಹೆಸರುಗಳು ಹೆಚ್ಚು ಸಲ ಬಂದಂತಿದೆ. ಇದಕ್ಕೆ ಪ್ರತಿಕ್ರಿಯಿಸಿರುವ ವರ್ತೂರು, ‘ಐದು ಲಕ್ಷದ ಟಾಸ್ಕ್‌ನಲ್ಲಿ ರಿಸ್ಕ್ ತೆಗೆದುಕೊಂಡು ಆಡಿದ್ದೀನಿ. ‌ನಾನೇನೂ ಸ್ಫೋರ್ಟ್ಸ್ ಫೀಲ್ಡಿಂದ ಬಂದವನಲ್ಲ, ಆದರೆ ಎತ್ತು, ದನಗಳನ್ನು ಪರಿಗಣಿಸಿದರೆ ಸ್ಫೋರ್ಟ್ಸ್ ಹುಟ್ಟುಹಾಕಿದ್ದೇ ನಾವು’ ಎಂದು ಖಡಕ್ಕಾಗಿ ಹೇಳಿದ್ದಾರೆ. ಒಟ್ಟಾರೆ ಈ ವಾರದ ಕಳಪೆ ಯಾರು ಮತ್ತು ಉತ್ತಮ ಯಾರು ಎನ್ನುವುದಕ್ಕೆ ಇಂದಿನ ಬಿಗ್ ಬಾಸ್ ಎಪಿಸೋಡ್‌ನಲ್ಲಿ ಉತ್ತರ ಸಿಗಲಿದೆ.

LEAVE A REPLY

Connect with

Please enter your comment!
Please enter your name here