ನಾಳೆ ನಟ ಕಮಲ ಹಾಸನ್‌ರ 67ನೇ ಹುಟ್ಟುಹಬ್ಬ. ಈ ಸಂದರ್ಭಕ್ಕೆ ಅವರ ಹೊಸ ತಮಿಳು ಸಿನಿಮಾ ‘ವಿಕ್ರಮ್‌’ ಲುಕ್ ರಿವೀಲ್ ಆಗಿದೆ. ಲೋಕೇಶ್ ಕನಗರಾಜ್ ನಿರ್ದೇಶಿಸುತ್ತಿರುವ ಈ ಚಿತ್ರದಲ್ಲಿ ದಕ್ಷಿಣದ ಮತ್ತಿಬ್ಬರು ಪ್ರತಿಭಾವಂತ ನಟರಾದ ವಿಜಯ್ ಸೇತುಪತಿ ಮತ್ತು ಫಹಾದ್ ಫಾಸಿಲ್ ನಟಿಸುತ್ತಿದ್ದಾರೆ.

ಖ್ಯಾತ ನಟ ಕಮಲ ಹಾಸನ್‌ ಅಭಿನಯದ ನೂತನ ಆಕ್ಷನ್‌ ಸಿನಿಮಾದ ಲುಕ್ ರಿವೀಲ್ ಆಗಿದೆ. ನಾಳೆ (ನವೆಂಬರ್‌ 07) ಅವರು 67ನೇ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದು, ಈ ಸಂದರ್ಭವನ್ನು ಸೆಲೆಬ್ರೇಟ್ ಮಾಡಲು ಚಿತ್ರತಂಡ ನೂತನ ಸಿನಿಮಾದಲ್ಲಿನ ಕಮಲ್‌ರ ಲುಕ್ ರಿವೀಲ್ ಮಾಡಿದೆ. ಮಿಷಿನ್ ಗನ್ ಹಿಡಿದಿರುವ ಕಮಲ್‌ ಲುಕ್ ಇಂಟೆನ್ಸೀವ್ ಆಗಿದೆ. ಹಿನ್ನೆಲೆಯಲ್ಲಿ ಬೆಂಕಿಯ ಕೆನ್ನಾಲಿಗೆ. ‘ಹ್ಯಾಪಿ ಬರ್ತ್‌ಡೇ ಉಳಗನಾಯಗನ್‌’ ಎಂದು ಪೋಸ್ಟರ್‌ ಮೇಲೆ ಬರೆದಿದ್ದು, ನಿರ್ದೇಶಕ ಲೋಕೇಶ್ ಕನಗರಾಜ್ ತಮ್ಮ ಟ್ವಿಟರ್‌ ಖಾತೆಯಲ್ಲಿ ಪೋಸ್ಟರ್ ಶೇರ್ ಮಾಡಿದ್ದಾರೆ. ಇಂದು ಸಂಜೆ ‘ವಿಕ್ರಮ್‌’ ಸಿನಿಮಾದ ಫಸ್ಟ್‌ ಗ್ಲ್ಯಾನ್ಸ್‌ ರಿಲೀಸ್ ಮಾಡುವ ಯೋಜನೆ ಚಿತ್ರತಂಡದ್ದು.

1986ರಲ್ಲಿ ತೆರೆಕಂಡಿದ್ದ ಕಮಲ್ ಅವರೇ ನಟಿಸಿದ್ದ ಆಕ್ಷನ್‌ ಸಿನಿಮಾದ ಶೀರ್ಷಿಕೆ ಇದು. ದಕ್ಷಿಣ ಭಾರತದ ಇಬ್ಬರು ಪ್ರತಿಭಾವಂತ ನಟರಾದ ವಿಜಯ್ ಸೇತುಪತಿ ಮತ್ತು ಫಹಾದ್‌ ಫಾಸಿಲ್‌ ಈ ಚಿತ್ರದ ಪ್ರಮಖ ಪಾತ್ರಗಳಲ್ಲಿರುತ್ತಾರೆ ಎನ್ನುವುದು ವಿಶೇಷ. ಕಮಲ ಹಾಸನ್‌ ಅವರ ರಾಜ್ ಕಮಲ್ ಫಿಲ್ಮ್ಸ್‌ ಇಂಟರ್‌ನ್ಯಾಷನಲ್‌ ಬ್ಯಾನರ್‌ನಡಿ ಈ ಸಿನಿಮಾ ತಯಾರಾಗುತ್ತಿದೆ. ಮುಂದಿನ ದಿನಗಳಲ್ಲಿ ಚಿತ್ರದ ಕುರಿತು ಇನ್ನಷ್ಟು ಮಾಹಿತಿ ಲಭ್ಯವಾಗಲಿದೆ. ನಟ ಕಮಲ ಹಾಸನ್ ಕೂಡ ಚಿತ್ರದ ಪೋಸ್ಟರ್ ಟ್ವೀಟ್‌ ಮಾಡಿದ್ದಾರೆ. ಈ ಪೋಸ್ಟರ್‌ನಲ್ಲಿ ಕಮಲ್ ಜೊತೆ ಸೇತುಪತಿ ಮತ್ತು ಫಹಾದ್ ಫಾಸಿಲ್‌ ಲುಕ್‌ಗಳೂ ಇವೆ. ಮೂವರು ದೊಡ್ಡ ನಟರ ಸಿನಿಮಾ ಖಂಡಿತಾ ಭಿನ್ನವಾಗಿರಲಿದೆ ಎನ್ನುವುದು ಉದ್ಯಮ ಮತ್ತು ಸಿನಿಪ್ರೇಮಿಗಳ ವಿಶ್ವಾಸ.

LEAVE A REPLY

Connect with

Please enter your comment!
Please enter your name here