‘ತೂಫಾನ್‌’ ಹಿಂದಿ ಸಿನಿಮಾ ಮತ್ತು ‘ಸರ್ಪಟ್ಟ ಪರಾಂಬರೈ’ ತಮಿಳು ಚಿತ್ರಗಳ ನಂತರ ಬಾಕ್ಸಿಂಗ್ ಕುರಿತ ಈ ವರ್ಷದ ಮೂರನೇ ಚಿತ್ರವಾಗಿ ‘ಘನಿ’ ತೆರೆಗೆ ಬರುತ್ತಿದೆ.

ಕಿರಣ್ ಕೊರ್ರಪಾಟಿ ನಿರ್ದೇಶನದಲ್ಲಿ ವರುಣ್ ತೇಜ್‌ ನಟಿಸಿರುವ ‘ಘನಿ’ ತೆಲುಗು ಚಿತ್ರದ ಟೀಸರ್ ಬಿಡುಗಡೆಯಾಗಿದೆ. ಟೀಸರ್ ಟ್ವೀಟ್ ಮಾಡಿರುವ ನಟ ವರುಣ್ ತೇಜ್‌, “ಎಮೋಷನ್ ಜೊತೆ ಪ್ಯಾಷನ್ ಜೊತೆಯಾದಾಗ ಅದರ ಪ್ರಭಾವವನ್ನು ಊಹಿಸಲೂ ಸಾಧ್ಯವಿಲ್ಲ” ಎಂದಿದ್ದಾರೆ. ಈ ಸಿನಿಮಾ ಡಿಸೆಂಬರ್‌ 3ರಂದು ತೆರೆಗೆ ಬರುತ್ತಿರುವ ಸುದ್ದಿಯನ್ನೂ ಅವರು ನೀಡಿದ್ಧಾರೆ. ನಲವತ್ತು ಸೆಕೆಂಡುಗಳ ಟೀಸರ್‌ನಲ್ಲಿ ಸದೃಢ ಕಾಯದ ವರುಣ್ ತೇಜ್‌ ವೃತ್ತಿಪರ ಬಾಕ್ಸರ್‌ನಂತೆ ತೋರುತ್ತಾರೆ.

ಬಾಕ್ಸಿಂಗ್ ಕುರಿತಂತೆ ಈ ವರ್ಷ ಭಾರತದಲ್ಲಿ ಬಿಡುಗಡೆಯಾಗುತ್ತಿರುವ ಮೂರು ಸಿನಿಮಾಗಳಲ್ಲಿ ‘ಘನಿ’ ಒಂದು. ಫರ್ಹನ್ ಅಖ್ತರ್‌ (ತೂಫಾನ್‌, ಹಿಂದಿ) ಮತ್ತು ಆರ್ಯ (ಸರ್ಪಟ್ಟ ಪರಾಂಬರೈ, ತಮಿಳು) ಬಾಕ್ಸರ್ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದರು. ಕೋವಿಡ್‌ ಪ್ಯಾಂಡಮಿಕ್‌ನಿಂದಾಗಿ ಈ ಎರಡೂ ಸಿನಿಮಾಗಳು ನೇರವಾಗಿ ಅಮೇಜಾನ್ ಪ್ರೈಂ ಓಟಿಟಿಯಲ್ಲಿ ಬಿಡುಗಡೆಯಾಗಿದ್ದವು. ‘ತೂಫಾನ್‌’ ಚಿತ್ರಕ್ಕೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾದರೆ ‘ಸರ್ಪಟ್ಟ ಪರಾಂಬರೈ’ಗೆ ವಿಮರ್ಶಕರು ಹಾಗೂ ಪ್ರೇಕ್ಷಕರ ಅಪಾರ ಮೆಚ್ಚುಗೆ ವ್ಯಕ್ತವಾಗಿತ್ತು. ‘ಘನಿ’ ಸಿನಿಮಾ ಇವೆರೆಡೂ ಚಿತ್ರಗಳ ಸಾಲಿನಲ್ಲಿ ನಿಲ್ಲುತ್ತದೆಯೇ ಎನ್ನುವುದನ್ನು ಕಾದು ನೋಡಬೇಕಿದೆ. ಜಗಪತಿ ಬಾಬು, ಉಪೇಂದ್ರ, ಸುನೀಲ್ ಶೆಟ್ಟಿ, ನವೀನ್ ಚಂದ್ರ ಚಿತ್ರದ ಇತರೆ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.

LEAVE A REPLY

Connect with

Please enter your comment!
Please enter your name here