ಶಂಕರ್‌ ನಿರ್ದೇಶನದಲ್ಲಿ ಕಮಲ ಹಾಸನ್‌ ಅಭಿನಯಿಸುತ್ತಿರುವ ಬಹುನಿರೀಕ್ಷಿತ ‘ಇಂಡಿಯನ್‌ 2’ ಚಿತ್ರತಂಡದಿಂದ ಹೊಸ ಅಪ್‌ಡೇಟ್ಸ್‌ ಸಿಕ್ಕಿದೆ. ನೂತನ ಪೋಸ್ಟರ್‌ ಜೊತೆ ನಿರ್ಮಾಪಕರು ಸಿನಿಮಾದ ಬಿಡುಗಡೆ ಕುರಿತು ಮಾಹಿತಿ ಹಂಚಿಕೊಂಡಿದ್ದಾರೆ.

ಕಮಲ್ ಹಾಸನ್ ಅಭಿನಯದ ಇಂಡಿಯನ್‌ ಚಿತ್ರದ ಸೀಕ್ವೆಲ್‌ ‘ಇಂಡಿಯನ್‌ 2’ ಚಿತ್ರಕ್ಕಾಗಿ ಸಿನಿಪ್ರಿಯರು ಕಾತರದಿಂದ ಕಾಯುತ್ತಿದ್ದಾರೆ. ಇಂಡಿಯನ್‌ ಸಿನಿಮಾ ದೊಡ್ಡ ಮಟ್ಟದಲ್ಲಿ ಯಶಸ್ಸು ಸಾಧಿಸಿದ ಹಿನ್ನಲೆಯಲ್ಲಿ ‘ಪಾರ್ಟ್‌ 2’ ಮೇಲೆ ಬೆಟ್ಟದಷ್ಟು ನಿರೀಕ್ಷೆ ಇದೆ. 1996ರಲ್ಲಿ ‘ಇಂಡಿಯನ್’ ಸಿನಿಮಾ ಬಿಡುಗಡೆಯಾಗಿ ಸೂಪರ್​ ಹಿಟ್​ ಆಗಿತ್ತು. ಸೇನಾಪತಿ ಪಾತ್ರದಲ್ಲಿ ಕಮಲ್​ ಹಾಸನ್​ ಅವರು ಮಿಂಚಿದ್ದರು. ಅದರ ಮುಂದುವರಿದ ಭಾಗವಾಗಿ ‘ಇಂಡಿಯನ್ 2’ ಸಿನಿಮಾ ಮೂಡಿಬರುತ್ತಿದೆ. ಈಗ ಈ ಸಿನಿಮಾದ ರಿಲೀಸ್‌ ಕುರಿತಾಗಿ ಹೊಸ ಅಪ್ಡೇಟ್‌ ಸಿಕ್ಕಿದೆ. ಪೋಸ್ಟರ್‌ಗಳಿಂದ ಕುತೂಹಲ ದುಪ್ಪಟ್ಟು ಮಾಡಿರುವ ಚಿತ್ರತಂಡ ಈಗ ಮತ್ತೊಂದು ಪೋಸ್ಟರ್‌ ರಿಲೀಸ್‌ ಮಾಡಿದೆ. ಈ ಪೋಸ್ಟರ್‌ ಮೂಲಕ ಸಿನಿಮಾ ಜೂನ್‌ ತಿಂಗಳಿನಲ್ಲಿ ತೆರೆಗೆ ಬರಲು ಸಜ್ಜಾಗಿದೆ ಅನ್ನೋ ಸುದ್ದಿ ರಿವೀಲ್‌ ಮಾಡಿದ್ದಾರೆ.

ದೊಡ್ಡ ಬಜೆಟ್‌ ಚಿತ್ರಗಳನ್ನ ಮಾಡುವ ಶಂಕರ್‌ ಹಾಗೂ ಕಮಲ್‌ ಜೋಡಿಯ ಮ್ಯಾಜಿಕ್‌ ನೋಡಲು ಜನರು ಸಿನಿಪ್ರಿಯರು ಕಾತರರಾಗಿದ್ದಾರೆ. ಸಿನಿಮಾ ಯಾವ ತಿಂಗಳಿನಲ್ಲಿ ರಿಲೀಸ್‌ ಆಗಲಿದೆ ಎಂದು ಪ್ರಕಟಿಸಿರುವ ಚಿತ್ರತಂಡ ಇನ್ನೂ ದಿನಾಂಕವನ್ನು ಪ್ರಕಟಿಸಿಲ್ಲ. ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಭ್ರಷ್ಟಾಚಾರದ ವಿರುದ್ಧ ಹೋರಾಡೋದೇ ‘ಇಂಡಿಯನ್ 2’ ಸಿನಿಮಾದ ಒನ್‌ ಲೈನ್‌ ಸ್ಟೋರಿ. ಲೈಕಾ ಪ್ರೊಡಕ್ಷನ್ಸ್ ಮತ್ತು ರೆಡ್ ಜೈಂಟ್ ಮೂವೀಸ್ ಸಂಸ್ಥೆಗಳು ನಿರ್ಮಿಸಿಸುತ್ತಿರುವ ಚಿತ್ರದಲ್ಲಿ ಕಮಲ್​ ಹಾಸನ್​ ಜೊತೆಗೆ ಕಾಜಲ್ ಅಗರ್‌ವಾಲ್‌, ಸಿದ್ಧಾರ್ಥ್, ರಕುಲ್ ಪ್ರೀತ್ ಸಿಂಗ್, ಕಾಳಿದಾಸ್ ಜಯರಾಮ್, ಪ್ರಿಯಾ ಭವಾನಿ ಶಂಕರ್, ಗುಲ್ಶನ್ ಗ್ರೋವರ್, ವಿವೇಕ್, ಸಮುದ್ರಖನಿ, ನೆಡುಮುಡಿ ವೇಣು, ಬಾಬಿ ಸಿಂಹ, ದೆಹಲಿ ಗಣೇಶ್, ಗುರು ಸೋಮಸುಂದರಂ, ಜಯಪ್ರಕಾಶ್, ವೆನ್ನೆಲ ಕಿಶೋರ್, ಮನೋಬಾಲಾ, ದೀಪಾ ಶಂಕರ್ ನಟಿಸಿದ್ದಾರೆ. ಅನಿರುದ್ಧ್ ರವಿಚಂದರ್ ಈ ಸಿನಿಮಾಗೆ ಸಂಗೀತ ನೀಡಿದ್ದಾರೆ. ರವಿವರ್ಮನ್ ಹಾಗೂ ರತ್ನವೇಲು ಅವರು ಛಾಯಾಗ್ರಹಣ ಮಾಡಿದ್ದಾರೆ. ಎ ಶ್ರೀಕರ್ ಪ್ರಸಾದ್ ಸಂಕಲನದ ಜವಾಬ್ದಾರಿ ನಿಭಾಯಿಸುತ್ತಿದ್ದಾರೆ.

LEAVE A REPLY

Connect with

Please enter your comment!
Please enter your name here