ಚಂದನವನದಲ್ಲಿ ಇತ್ತೀಚೆಗೆ ಯುವ ಪ್ರತಿಭೆಗಳ ಪರ್ವ ಆರಂಭವಾಗಿದೆ. ಹೊಸಬರು ಮಾಡುತ್ತಿರುವ ಸಿನಿಮಾಗಳಲ್ಲಿ ಆಗೊಂದು ಈಗೊಂದು ಚಿತ್ರಗಳು ಯಶಸ್ಸು ಕಾಣುತ್ತಿವೆ. ಇದರ ಜೊತೆಗೆ ಸಾಕಷ್ಟು ಹೊಸ ಸಿನಿಮಗಳೂ ಸೆಟ್ಟೇರುತ್ತಿವೆ. ವಿಭಿನ್ನವಾದ ಟೈಟಲ್‌ ಮೂಲಕ ಗಮನ ಸೆಳೆಯುತ್ತಿದೆ ‘ಎಲ್ಟು ಮುತ್ತಾ’ ಸಿನಿಮಾ.

ನಗರದಲ್ಲಿ ನಡೆದ ಹೈ5 ಸ್ಟುಡಿಯೋ ಬ್ಯಾನರ್‌ ಉದ್ಘಾಟನೆ ಕಾರ್ಯಕ್ರಮದಲ್ಲೇ ‘ಎಲ್ಟು ಮುತ್ತಾ’ ಟೈಟಲ್‌ ಪೋಸ್ಟರ್ ಬಿಡುಗಡೆ ಮಾಡಲಾಯಿತು. ಹೊಂಬಾಳೆ ಸಂಸ್ಥೆಯ ವಿಜಯ್ ಕಿರಗಂದೂರು ಅವರ ಪತ್ನಿ ಶೈಲಜಾ, ಸಂಗೀತ ಕಟ್ಟಿ, ಎ ಎಂ ಆರ್ ರಮೇಶ್ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ‘ಎಲ್ಟು ಮುತ್ತಾ’ ಚಿತ್ರದ ನಿರ್ದೇಶಕ ನಿರ್ದೇಶಕ ರಾ ಸೂರ್ಯ ಮಾತನಾಡಿ, ‘ಸಾವಿಗೆ ಡೋಲು ಬಡಿಯುವವರ ಕಥೆಯನ್ನು ಎತ್ತಿಕೊಂಡು ಸಿನಿಮಾ ಮಾಡಿದ್ದೇನೆ. ಇದು ಸತ್ಯ ಘಟನೆ ಆಧಾರಿತ ಸಿನಿಮಾ. ಅದನ್ನು ಕಾಲ್ಪನಿಕ ಕಥೆಯ ರೀತಿಯಲ್ಲಿ ಹೇಳಿದ್ದೇನೆ. ಸಿನಿಮಾದಲ್ಲಿ 4 ಹಾಡುಗಳಿವೆ. ಈಗಾಗಲೇ ಡಬ್ಬಿಂಗ್ ಮುಗಿದಿದೆ’ ಎಂದರು.

ಹೈಫ್ 5 ಸ್ಟುಡಿಯೋದ ಸತ್ಯ ಶ್ರೀನಿವಾಸನ್ ಮಾತನಾಡಿ, ‘ಹೈಫ್ 5 ಸ್ಟುಡಿಯೋ ಅಂದರೆ ಐದು ಜನರ ಸಂಸ್ಥೆ. ಒಳ್ಳೆಯ ಕಂಟೆಂಟ್ ಸಿನಿಮಾಗಳನ್ನು ವಿಶ್ವದ ಎಲ್ಲ ಸಿನಿಮಾ ಪ್ರೇಮಿಗಳಿಗೆ ತಲುಪಿಸುವುದು ಸಂಸ್ಥೆಯ ಉದ್ದೇಶ. ನಾವು ಮೂರು ಕಥೆ ಕೇಳಿದವು. ಆದರೆ, ಈ ಚಿತ್ರದ ಕಥೆ ಇಷ್ಟವಾಯ್ತು’ ಎಂದಿದ್ದಾರೆ. ‘ಎಲ್ಟು ಮುತ್ತಾ’ ಸಿನಿಮಾ ಮೂಲಕ ಯುವ ಪ್ರತಿಭೆ ರಾ ಸೂರ್ಯ ನಿರ್ದೇಶಕರಾಗಿ ಮೊದಲ ಹೆಜ್ಜೆ ಇಟ್ಟಿದ್ದಾರೆ. ಕಿರುಚಿತ್ರಗಳನ್ನು ಮಾಡಿರುವ ಅನುಭವದಿಂದಲೇ ಈ ಚಿತ್ರದ ನಿರ್ದೇಶನದ ಜವಬ್ದಾರಿ ಹೊತ್ತುಕೊಂಡಿದ್ದಾರೆ. ಯುವನಟ ಶೌರ್ಯ ಪ್ರತಾಪ್ ನಾಯಕನಾಗಿ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ. ಇವರಿಗೆ ನಾಯಕಿಯಾಗಿ ಪ್ರಿಯಾಂಕಾ ಮಾಲಲಿ ಸಾಥ್ ಕೊಟ್ಟಿದ್ದಾರೆ. ಕಾಕ್ರೋಚ್ ಸುಧಿ, ಯಮುನಾ ಶ್ರೀನಿಧಿ , ನವೀನ್ ಪಡಿಲ್ ತಾರಾಬಳಗದಲ್ಲಿದ್ದಾರೆ.

ನೈಜ ಘಟನೆಯಾಧಾರಿತ ‘ಎಲ್ಟು ಮುತ್ತಾ’ ಸಿನಿಮಾದ ಚಿತ್ರೀಕರಣ ಮುಕ್ತಾಯಗೊಂಡಿದ್ದು, ಮಡಿಕೇರಿಯ ನೆಲಜಿಯಲ್ಲಿ ಬಹುತೇಕ ಶೂಟಿಂಗ್ ಮಾಡಲಾಗಿದೆ. ಉಳಿದಂತೆ ಬೆಂಗಳೂರು ಸುತ್ತಮುತ್ತ ಚಿತ್ರೀಕರಿಸಲಾಗಿದೆ. ‘ಎಲ್ಟು ಮುತ್ತಾ’ ಅಂದರೆ ಚಿತ್ರದ ಎರಡು ಪಾತ್ರಗಳ ಹೆಸರು. ಶೌರ್ಯ ಪ್ರತಾಪ್ ನಾಯಕನಾಗಿ ಬಣ್ಣ ಹಚ್ಚುವುದರ ಜೊತೆಗೆ ಸಹ ನಿರ್ದೇಶಕರಾಗಿ ಹಾಗೂ ಸಹ ಬರಗಾರರನಾಗಿ ಸೂರ್ಯ ಅವರಿಗೆ ಜೊತೆಯಾಗಿ ನಿಂತಿದ್ದಾರೆ. ಪ್ರಸನ್ನ ಕೇಶವ ಸಂಗೀತ, ಮೆಯ್ಯಪ್ಪ ಭಾಸ್ಕರ್ ಛಾಯಾಗ್ರಹಣ, ಕೆ ಯೇಸು ಸಂಕಲನ, ಜ್ಞಾನತಿ ರಾಹುಲ್ ನೃತ್ಯ ಸಂಯೋಜನೆ ಚಿತ್ರಕ್ಕಿದೆ. ಅಜಿತ್ ಕೇಶವ, ರಾ ಸೂರ್ಯ ಹಾಗೂ ಶೌರ್ಯ ಪ್ರತಾಪ್ ಹಾಡುಗಳಿಗೆ ಸಾಹಿತ್ಯ ಒದಗಿಸಿದ್ದಾರೆ.

LEAVE A REPLY

Connect with

Please enter your comment!
Please enter your name here