ಚಿಕ್ಕಣ್ಣ ಹೀರೋ ಆಗಿ ನಟಿಸಿರುವ ‘ಉಪಾಧ್ಯಕ್ಷ’ ಸಿನಿಮಾದ ಟೀಸರ್‌ ಬಿಡುಗಡೆಯಾಗಿದೆ. ಉಮಾಪತಿ ನಿರ್ಮಾಣದ ಈ ಚಿತ್ರವನ್ನು ಅನಿಲ್‌ ಕುಮಾರ್‌ ನಿರ್ದೇಶನವಿದ್ದು, ನಟ ಶರಣ್‌ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ‘ಹಿಟ್ಲರ್‌ ಕಲ್ಯಾಣ’ ಸೀರಿಯಲ್‌ ಖ್ಯಾತಿಯ ಮಲೈಕಾ ಚಿತ್ರದ ನಾಯಕಿ.

‘ನಾನು ಹದಿಮೂರು ವರ್ಷದಿಂದ ನೋಡಿರದ ಕಷ್ಟವನ್ನು ಉಪಾಧ್ಯಕ್ಷ ಚಿತ್ರದ ನಾಯಕ ಆದ ಕ್ಷಣದಿಂದ ನೋಡಿದ್ದೇನೆ. ನಾನು ಈ ಚಿತ್ರದ ನಾಯಕ ಅಂದಕೂಡಲೇ ಹಲವರು ಸಾಕಷ್ಟು ಮಾತನಾಡಿ ಮನಸ್ಸು ನೋಯಿಸಿದ್ದಾರೆ. ಆದರೆ ನಿರ್ಮಾಪಕರು ನನ್ನ ಮೇಲಿನ ವಿಶ್ವಾಸದಿಂದ ಅಪಾರ ಹಣ ಹಾಕಿ ಸಿನಿಮಾ ಮಾಡಿದ್ದಾರೆ’ ಎಂದರು ನಟ ಚಿಕ್ಕಣ್ಣ. ಅವರು ಹೀರೋ ಆಗಿ ನಟಿಸಿರುವ ‘ಉಪಾಧ್ಯಕ್ಷ’ ಸಿನಿಮಾದ ಟೀಸರ್‌ ಬಿಡುಗಡೆಯಾಗಿದೆ. ನಟರಾದ ದುನಿಯಾ ವಿಜಯ್‌, ಪ್ರೇಮ್‌, ಅಭಿಷೇಕ್‌ ಅಂಬರೀಶ್‌, ಧನ್ವೀರ್‌, ಪ್ರಥಮ್‌, ನಟಿ ಅದಿತಿ ಪ್ರಭುದೇವ ಸಮಾರಂಭದಲ್ಲಿ ಪಾಲ್ಗೊಂಡು ಚಿತ್ರತಂಡಕ್ಕೆ ಹಾರೈಸಿದ್ದಾರೆ. ತಾವು ಹೀರೋ ಆಗಿ ಆಯ್ಕೆ ಆದಾಕ್ಷಣ ಜನರು ಹೇಗೆಲ್ಲಾ ಹೀಯಾಳಿಸಿದ್ದರು ಎನ್ನುವುದನ್ನು ನೆನೆದು ಚಿಕ್ಕಣ್ಣ ಸಮಾರಂಭದಲ್ಲಿ ಕಣ್ತುಂಬಿಕೊಂಡರು.

ಶರಣ್‌ ಮತ್ತು ಚಿಕ್ಕಣ್ಣ ನಟಿಸಿದ್ದ ‘ಅಧ್ಯಕ್ಷ’ ಚಿತ್ರ ಕನ್ನಡ ಚಿತ್ರರಂಗದ ಜನಪ್ರಿಯ ಹಾಸ್ಯ ಸಿನಿಮಾಗಳಲ್ಲೊಂದು. ಈ ಸಿನಿಮಾದಲ್ಲಿ ಇವರಿಬ್ಬರ ಅಧ್ಯಕ್ಷ – ಉಪಾಧ್ಯಕ್ಷ ಪಾತ್ರಗಳು ಜನಪ್ರಿಯವಾಗಿದ್ದವು. ಇದೀಗ ‘ಉಪಾಧ್ಯಕ್ಷ’ ಸಿನಿಮಾ ತಯಾರಾಗಿದೆ. ಚಿಕ್ಕಣ್ಣ ಅವರು ಉಪಾಧ್ಯಕ್ಷನಾಗಿ ನಟಿಸಿದ್ದಾರೆ. ನಟ ಶರಣ್‌ ಅತಿಥಿ ಪಾತ್ರದಲ್ಲಿ ನಟಿಸಿದ್ದು, ಟೀಸರ್‌ನಲ್ಲಿ ಅವರ ಪಾತ್ರದ ಪರಿಚಯವಿದೆ. ಉಮಾಪತಿ ನಿರ್ಮಾಣದ ಈ ಚಿತ್ರವನ್ನು ಅನಿಲ್‌ ಕುಮಾರ್‌ ನಿರ್ದೇಶಿಸಿದ್ದಾರೆ. ‘ಹಿಟ್ಲರ್‌ ಕಲ್ಯಾಣ’ ಸೀರಿಯಲ್‌ ಖ್ಯಾತಿಯ ಮಲೈಕಾ ಚಿತ್ರದ ಹಿರೋಯಿನ್‌. ಪಿ ರವಿಶಂಕರ್‌ ಮತ್ತು ಸಾಧು ಕೋಕಿಲಾ ಪ್ರಮುಖ ಪಾತ್ರಗಳಲ್ಲಿದ್ದಾರೆ. ‘ಅಧ್ಯಕ್ಷ’ ಚಿತ್ರದ ಮುಂದುವರೆದ ಭಾಗವಿದು. ಚಂದ್ರ ಮೋಹನ್ ಕಥೆ ರಚಿಸಿದ್ದಾರೆ.

LEAVE A REPLY

Connect with

Please enter your comment!
Please enter your name here