ಸ್ಯಾಂಡಲ್‌ವುಡ್‌ ನಟ ವಿಜಯರಾಘವೇಂದ್ರ ಪತ್ನಿ ಸ್ಪಂದನಾ ವಿಜಯರಾಘವೇಂದ್ರ (41 ವರ್ಷ) ಅವರು ಹೃದಯಾಘಾತದಿಂದ ನಿಧನರಾಗಿದ್ದಾರೆ. ಪ್ರವಾಸಕ್ಕೆಂದು ಬ್ಯಾಂಕಾಕ್‌ಗೆ ತೆರಳಿದ್ದ ವೇಳೆ ಈ ಆಕಸ್ಮಿಕ ಸಂಭವಿಸಿದೆ. 2007ರ ಆಗಸ್ಟ್‌ 26ರಂದು ವಿಜಯ ರಾಘವೇಂದ್ರ – ಸ್ಪಂದನಾ ವಿವಾಹ ನೆರವೇರಿತ್ತು.

ನಟ, ನಿರೂಪಕ ವಿಜಯ ರಾಘವೇಂದ್ರ ಅವರ ಪತ್ನಿ ಸ್ಪಂದನಾ (41 ವರ್ಷ) ಹೃದಯಾಘಾತದಿಂದ ಅಗಲಿದ್ದಾರೆ. ಸ್ಪಂದನಾ ಪ್ರವಾಸಕ್ಕೆಂದು ಬ್ಯಾಂಕಾಕ್‌ಗೆ ತೆರಳಿದ್ದರು. ಈ ವೇಳೆ ಅವರಿಗೆ ಹೃದಯಾಘಾತ ಸಂಭವಿಸಿದೆ. ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. 2007ರ ಆಗಸ್ಟ್‌ 26ರಂದು ವಿಜಯ ರಾಘವೇಂದ್ರ ಮತ್ತು ಸ್ಪಂದನಾ ಅವರ ವಿವಾಹ ನೆರವೇರಿತ್ತು. ಅವರ 16ನೇ ವಿವಾಹ ವಾರ್ಷಿಕೋತ್ಸವಕ್ಕೆ ಕೆಲವು ದಿನಗಳು ಬಾಕಿ ಇರುವಾಗ ಈ ಆಕಸ್ಮಿಕ ಸಂಭವಿಸಿದೆ. ದಂಪತಿಗೆ ಶೌರ್ಯ ಹೆಸರಿನ ಮಗ ಇದ್ದಾನೆ. ನಿವೃತ್ತ ಪೊಲೀಸ್‌ ಅಧಿಕಾರಿ (IPS) ಬಿ ಕೆ ಶಿವರಾಂ ಅವರ ಪುತ್ರಿ ಸ್ಪಂದನಾ. ವಿಜಯ ರಾಘವೇಂದ್ರ ಮತ್ತು ಸ್ಪಂದನಾ ಪ್ರೀತಿಸಿ, ಹಿರಿಯರ ಒಪ್ಪಿಗೆ ಪಡೆದು ಮದುವೆಯಾಗಿದ್ದರು. ‘ಅಪೂರ್ವ’ (2016) ಚಿತ್ರದ ಅತಿಥಿ ಪಾತ್ರದಲ್ಲಿ ಸ್ಪಂದನಾ ಕಾಣಿಸಿಕೊಂಡಿದ್ದರು. ಅವರು ನಿರ್ಮಿಸಿದ ‘ಕಿಸ್ಮತ್‌’ ಕನ್ನಡ ಚಿತ್ರದಲ್ಲಿ ವಿಜಯ ರಾಘವೇಂದ್ರ ಹೀರೋ ಆಗಿ ಅಭಿನಯಿಸಿದ್ದರು. ಸ್ಪಂದನಾ ಅಕಾಲಿಕ ನಿಧನ ಅವರ ಕುಟುಂಬದವರು ಹಾಗೂ ಚಿತ್ರರಂಗದಲ್ಲಿನ ವಿಜಯ ರಾಘವೇಂದ್ರ ಅವರ ಆಪ್ತರಿಗೆ ಆಘಾತ ತಂದಿದೆ. ಸ್ಯಾಂಡಲ್‌ವುಡ್‌ನಲ್ಲಿ ಅಜಾತಶತ್ರು ಎಂದೇ ಕರೆಸಿಕೊಂಡಿದ್ದವರು ನಟ ವಿಜಯ ರಾಘವೇಂದ್ರ. ಸ್ಯಾಂಡಲ್‌ವುಡ್‌ ಹೀರೋಗಳ ಅಭಿಮಾನಿಗಳು ತಮ್ಮ ಸೋಷಿಯಲ್‌ ಮೀಡಿಯಾ ಹ್ಯಾಂಡಲ್‌ಗಳಲ್ಲಿ ಸ್ಪಂದನಾ ಅವರ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ.

LEAVE A REPLY

Connect with

Please enter your comment!
Please enter your name here