ನೀನಾಸಂ ಪ್ರತಿಭೆಗಳು ಕನ್ನಡ ಚಿತ್ರರಂಗದಲ್ಲಿ ಹೆಸರು ಮಾಡುತ್ತಿರೋದು ಹೊಸ ಸುದ್ದಿ ಏನಲ್ಲ. ಸತೀಶ್ ನೀನಾಸಂ, ಅಶ್ವಥ್ ನೀನಾಸಂ ಅವರಂಥ ಅನೇಕ ಪ್ರತಿಭಾವಂತರು ಸದ್ಯ ಸ್ಯಾಂಡಲ್‌ವುಡ್‌ನಲ್ಲಿ ನೆಲೆ ಕಂಡುಕೊಂಡಿದ್ದಾರೆ. ಅವರ ಸಾಲಿಗೆ ಹೊಸ ಸೇರ್ಪಡೆ ನೀನಾಸಂ ಮಂಜು. ಆದರೆ ಅವರು ನಟರಲ್ಲ, ನಿರ್ದೇಶಕರು ಅನ್ನೋದು ವಿಶೇಷ.

ರಂಗಭೂಮಿ ಪ್ರತಿಭೆ ನೀನಾಸಂ ಮಂಜು ನಿರ್ದೇಶನದ ‘ಕನ್ನೇರಿ’ ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. ನೈಜ ಘಟನೆ ಆಧಾರಿತ ಸ್ತ್ರೀಕೇಂದ್ರಿತ ಚಿತ್ರ ‘ಕನ್ನೇರಿ’. ಬಿಡುಗಡೆಗೆ ಸಜ್ಜಾಗಿರುವ ಈ ಚಿತ್ರದ ಫಸ್ಟ್ ಲುಕ್ ಅನ್ನು ಚಂದನವನದ ಖ್ಯಾತ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭ ಕೋರಿದ್ದಾರೆ. ಸಂವೇದನಾಶೀಲ ಚಿತ್ರಗಳಿಗೆ ಹೆಸರಾದ ನಾಗತಿಹಳ್ಳಿ ಚಂದ್ರಶೇಖರ್ ರಂಗಭೂಮಿಯ ಪ್ರತಿಭೆಗಳಿಗೆ ಬೆನ್ನೆಲುಬಾಗಿ ನಿಂತಿದ್ದಾರೆ. ಅವರ ಈ ಪ್ರಯತ್ನಕ್ಕೆ ಹಾರೈಸಿ ಚಿತ್ರದ ಫಸ್ಟ್ ಲುಕ್ ಬಿಡುಗಡೆ ಮಾಡಿದ್ದಾರೆ.  

ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಕರ್ ಅವರಿಂದ ಚಿತ್ರದ ಫಸ್ಟ್‌ಲುಕ್ ಅನಾವರಣ

ಚಿತ್ರದಲ್ಲಿ ಅರ್ಚನಾ ಮಧುಸೂಧನ್ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದು, ಅನಿತಾ ಭಟ್, ಎಂ.ಕೆ.ಮಠ, ಅರುಣ್ ಸಾಗರ್, ಕರಿಸುಬ್ಬು, ಸರ್ದಾರ್ ಸತ್ಯ ಒಳಗೊಂಡ ಪ್ರತಿಭಾನ್ವಿತ ಕಲಾವಿದರ ತಂಡವಿದೆ. ಚಿತ್ರೀಕರಣ ಕಂಪ್ಲೀಟ್ ಮಾಡಿ ಪೋಸ್ಟ್ ಪ್ರೊಡಕ್ಷನ್ ಕೆಲಸದಲ್ಲಿ ಬ್ಯುಸಿ ಇರುವ ಚಿತ್ರತಂಡ ಫಸ್ಟ್ ಲುಕ್ ಬಿಡುಗಡೆ ಮಾಡುವ ಮೂಲಕ ಚಿತ್ರದ ಪ್ರಚಾರ ಕಾರ್ಯ ಆರಂಭಿಸಿದೆ. ‘ಬುಡ್ಡಿದೀಪ ಸಿನಿಮಾ ಹೌಸ್’ ಬ್ಯಾನರ್ ನಡಿ ಪಿ.ಪಿ ಹೆಬ್ಬಾರ್ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ಗಣೇಶ್ ಹೆಗ್ಡೆ ಛಾಯಾಗ್ರಹಣ, ಮಣಿಕಾಂತ್ ಕದ್ರಿ ಸಂಗೀತ ನಿರ್ದೇಶನ, ಸುಜಿತ್ ನಾಯಕ್ ಸಂಕಲನ ಚಿತ್ರಕ್ಕಿದೆ.

ಚಿತ್ರೀಕರಣದಲ್ಲಿ ನಟ ಅರುಣ್ ಸಾಗರ್‌, ನಿರ್ದೇಶಕ ಮಂಜು ನೀನಾಸಂ
Previous articleಲಿರಿಕಲ್ ವೀಡಿಯೋ | ಅಲ್ಲು ಅರ್ಜುನ್ – ರಶ್ಮಿಕಾ ಸಾಂಗ್; ಡಿಸೆಂಬರ್ 17ಕ್ಕೆ ‘ಪುಷ್ಪ’
Next article‘ಇಂದಿರಾ’ ಟೈಟಲ್ ಪೋಸ್ಟರ್‌ಗೆ ಪುನೀತ್ ಪವರ್; ಅನಿತಾ ಭಟ್ ನಿರ್ಮಾಣದಲ್ಲಿ ಎರಡು ಚಿತ್ರಗಳು

LEAVE A REPLY

Connect with

Please enter your comment!
Please enter your name here