ತನುಷ್‌ ಶಿವಣ್ಣ ಮತ್ತು ಸೋನಾಲ್‌ ಮಾಂತೆರೊ ಅಭಿನಯದ ‘Mr ನಟ್ವರ್‌ ಲಾಲ್‌’ ಸಿನಿಮಾದ ‘ಅಚ್ಚಚ್ಚಚ್ಚೋ’ ಲಿರಿಕಲ್‌ ಸಾಂಗ್‌ ಬಿಡುಗಡೆಯಾಗಿದೆ. ಚೇತನ್‌ ಕುಮಾರ್‌ ರಚನೆ, ಧರ್ಮವಿಶ್‌ ಸಂಗೀತ ಸಂಯೋಜನೆಯ ಹಾಡಿಗೆ ಸಾಯಿ ವಿಘ್ನೇಶ್‌ ದನಿಯಾಗಿದ್ದಾರೆ. ಲವ ನಿರ್ದೇಶನದ ಆಕ್ಷನ್‌ – ಥ್ರಿಲ್ಲರ್‌ ಸಿನಿಮಾ ಸದ್ಯದಲ್ಲೇ ತೆರೆಕಾಣಲಿದೆ.

ತನುಷ್‌ ಶಿವಣ್ಣ ನಿರ್ಮಿಸಿ, ನಾಯಕನಟನಾಗಿ ಅಭಿನಯಿಸಿರುವ ‘Mr ನಟ್ವರ್‌ಲಾಲ್‌’ ಸಿನಿಮಾದ ‘ಅಚ್ಚಚ್ಚಚ್ಚೋ’ ಲಿರಿಕಲ್‌ ಸಾಂಗ್‌ ಬಿಡುಗಡೆಯಾಗಿದೆ. ವಿ ಲವ ನಿರ್ದೇಶನದ ಈ ಚಿತ್ರದ ಹಿರೋಯಿನ್‌ ಸೋನಲ್‌ ಮಾಂತೆರೊ. ಈ ಹಾಡನ್ನು ಬಹದ್ದೂರ್‌ ಚೇತನ್‌ ಕುಮಾರ್‌ ರಚಿಸಿದ್ದು, ಧರ್ಮವಿಶ್‌ ಸಂಗೀತ ಸಂಯೋಜಿಸಿದ್ದಾರೆ. ಸಾಯಿ ವಿಘ್ನೇಶ್‌ ಹಾಡಿರುವ ಹಾಡು ತನುಷ್‌ ಶಿವಣ್ಣ ಮತ್ತು ಸೋನಾಲ್‌ ಮೊಂತೆರೊ ಅವರ ಮೇಲೆ ಪಿಕ್ಚರೈಸ್‌ ಆಗಿದೆ. ‘ಇದೊಂದು ಕ್ರೈಂ – ಥ್ರಿಲ್ಲರ್‌ – ಆಕ್ಷನ್‌ ಜಾನರ್‌ ಸಿನಿಮಾ. ನೈಜ ಘಟನೆಗಳು ಚಿತ್ರಕ್ಕೆ ಪ್ರೇರಣೆ. ಮೆಡಿಕಲ್‌ ಮಾಫಿಯಾ, ಪೊಲಿಟಿಕಲ್‌ ಮಾಫಿಯಾ ಎಲ್ಲವೂ ಇಲ್ಲಿದೆ. ಜನಸಾಮಾನ್ಯರನ್ನು ಹ್ಯಾಕರ್ಸ್‌ ಹೇಗೆಲ್ಲಾ ವಂಚಿಸುತ್ತಾರೆ ಎನ್ನುವುದರ ಪ್ರಸ್ತಾಪವೂ ಇದೆ’ ಎಂದು ಚಿತ್ರದ ಬಗ್ಗೆ ಹೇಳುತ್ತಾರೆ ನಿರ್ದೇಶಕ ಲವ. ಮೂಲ ಕನ್ನಡ ಸೇರಿದಂತೆ ತೆಲುಗು, ತಮಿಳು, ಮಲಯಾಳಂ ಮತ್ತು ಹಿಂದಿಯಲ್ಲೂ ಸಿನಿಮಾ ಬಿಡುಗಡೆ ಮಾಡುವುದು ಚಿತ್ರದ ನಿರ್ಮಾಪಕರೂ ಆದ ತನುಷ್‌ ಶಿವಣ್ಣ ಅವರ ಯೋಜನೆ. ವಿಲಿಯಂ ಡೇವಿಡ್ ಛಾಯಾಗ್ರಹಣ, ಕೆ ಎಂ ಪ್ರಕಾಶ್ ಸಂಕಲನ, ಡಿಫರೆಂಟ್ ಡ್ಯಾನಿ, ಥ್ರಿಲ್ಲರ್ ಮಂಜು, ರಾ ಪುಷ್ಪರಾಜು ಸಾಹಸ ನಿರ್ದೇಶನ ಚಿತ್ರಕ್ಕಿದೆ. ನಾಗಭೂಷಣ, ಕಾಕ್ರೋಜ್ ಸುಧಿ, ಯಶ್ ಶೆಟ್ಟಿ, ರಾಜೇಶ್ ನಟರಂಗ, ರಘು ರಾಮನಕೊಪ್ಪ, ಹರಿಣಿ ಶ್ರೀಕಾಂತ್, ಸುಂದರರಾಜ್, ಕಾಂತರಾಜು ಕಡ್ಡಿಪುಡಿ ಚಿತ್ರದ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.

LEAVE A REPLY

Connect with

Please enter your comment!
Please enter your name here