ಮಮ್ಮೂಟಿ ಮುಖ್ಯಪಾತ್ರದಲ್ಲಿ ನಟಿಸಿರುವ ‘ಕಣ್ಣೂರು ಸ್ಕ್ವಾಡ್‌’ ಮಲಯಾಳಂ ಸಿನಿಮಾ ನೂರು ಕೋಟಿ ಕ್ಲಬ್‌ಗೆ ಸೇರ್ಪಡೆಯಾಗಿದೆ. ರಾಬಿ ವರ್ಗೀಸ್‌ ನಿರ್ದೇಶನದ ಇನ್ವೆಸ್ಟಿಗೇಷನ್‌ ಥ್ರಿಲ್ಲರ್‌ ಚಿತ್ರದ ಪ್ರಮುಖ ಪಾತ್ರದಲ್ಲಿ ಕನ್ನಡಿಗ ಕಿಶೋರ್‌ ಅಭಿನಯಿಸಿದ್ದಾರೆ. ಸೆಪ್ಟೆಂಬರ್‌ 28ರಂದು ಸಿನಿಮಾ ತೆರೆಕಂಡಿತ್ತು.

ಮಮ್ಮೂಟಿ ಮುಖ್ಯಭೂಮಿಕೆಯಲ್ಲಿ ನಟಿಸಿರುವ ಪೊಲೀಸ್ ಕಾರ್ಯಾಚರಣೆಯ ಕಥೆ ‘ಕಣ್ಣೂರು ಸ್ಕ್ವಾಡ್’ ಮಲಯಾಳಂ ಸಿನಿಮಾ 100 ಕೋಟಿ ರೂ ಕ್ಲಬ್‌ ಸೇರಿದೆ. ಈ ಚಿತ್ರವನ್ನು ರಾಬಿ ವರ್ಗೀಸ್ ರಾಜ್ ನಿರ್ದೇಶಿಸಿದ್ದಾರೆ. ಚಿತ್ರದಲ್ಲಿ ಮಮ್ಮೂಟಿ ತನಿಖಾ ಪೊಲೀಸ್‌ ಅಧಿಕಾರಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಕನ್ನಡಿಗ ಕಿಶೋರ್ ಅವರು ಮಮ್ಮೂಟಿಯ ಉನ್ನತ ಅಧಿಕಾರಿ ಪಾತ್ರ ನಿರ್ವಹಿಸಿದ್ದಾರೆ. ಈ ಕುರಿತು ಮಮ್ಮೂಟಿ ತಮ್ಮ X ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. ನೈಜ ಘಟನೆಯಾಧಾರಿತ ತನಿಖಾ ಥ್ರಿಲ್ಲರ್‌ನಲ್ಲಿ ಮಮ್ಮೂಟಿ ಕ್ರಿಮಿನಲ್ ಗುಂಪಿನ ಹುಡುಕಾಟದಲ್ಲಿರುವ ಪೊಲೀಸ್ ತಂಡವನ್ನು ಮುನ್ನಡೆಸಿದ್ದಾರೆ.

ಸಿನಿಮಾದ ಇತರೆ ಪ್ರಮುಖ ಪಾತ್ರಗಳಲ್ಲಿ ವಿಜಯ ರಾಘವನ್, ರೋನಿ ಡೇವಿಡ್ ರಾಜ್, ಅಜೀಜ್ ನೆಡುಮಂಗಡ, ಶಬರೀಶ್ ವರ್ಮಾ, ಶರತ್ ಸಭಾ ಮತ್ತು ಸನ್ನಿ ವೇನ್ ಕಾಣಿಸಿಕೊಂಡಿದ್ದಾರೆ. ದುಲ್ಕರ್ ಸಲ್ಮಾನ್ ಅವರ Mammootty Kampany ಬ್ಯಾನರ್‌ ಅಡಿಯಲ್ಲಿ ಜಾರ್ಜ್‌ ಸೆಬಾಸ್ಟಿಯನ್‌ ಚಿತ್ರ ನಿರ್ಮಿಸಿದ್ದಾರೆ. ಮಹಮದ್‌ ಶಫಿ ಚಿತ್ರಕಥೆ ರಚಿಸಿದ್ದು, ಮಹಮದ್‌ ರಾಹಿಲ್ ಛಾಯಾಗ್ರಹಣ, ಸುಶಿನ್ ಶ್ಯಾಮ್ ಸಂಗೀತ ಸಂಯೋಜನೆ ಚಿತ್ರಕ್ಕಿದೆ. ಕೇರಳ ಮತ್ತು ಮಹಾರಾಷ್ಟ್ರದಲ್ಲಿ ಸಿನಿಮಾಗೆ ಚಿತ್ರೀಕರಣ ನಡೆದಿದೆ. ಸೆಪ್ಟೆಂಬರ್‌ 28ರಂದು ತೆರೆಕಂಡ ಸಿನಿಮಾ ಕೇರಳ ಮಾತ್ರವಲ್ಲದೆ ಭಾರತದ ಇತರೆಡೆ ಹಾಗೂ ಜಗತ್ತಿನ ಹಲವೆಡೆ ಸಿನಿಪ್ರಿಯರ ಮೆಚ್ಚುಗೆಗೆ ಪಾತ್ರವಾಗಿದೆ.

LEAVE A REPLY

Connect with

Please enter your comment!
Please enter your name here