ಬಾಲಿವುಡ್‌ನ ಖ್ಯಾತ ಚಿತ್ರನಿರ್ದೇಶಕ, ನಿರ್ಮಾಪಕ ಕರಣ್‌ ಜೋಹರ್‌ ಸಿನಿಮಾರಂಗಕ್ಕೆ ಪದಾರ್ಪಣೆ ಮಾಡಿ ಇಂದಿಗೆ 25 ವರ್ಷಗಳಾಗಿವೆ. ಮನರಂಜನಾ ಉದ್ಯಮಕ್ಕೆ ನೀಡಿದ ಕೊಡುಗೆ ಪರಿಗಣಿಸಿ UK ಸಂಸತ್ತು ಅವರನ್ನು ಗೌರವಿಸಿದೆ. ನಟ ಶಾರುಖ್‌ ಖಾನ್‌ ಸೇರಿದಂತೆ ಹಲವರು ಕರಣ್‌ರನ್ನು ಅಭಿನಂದಿಸಿದ್ದಾರೆ.

ಚಿತ್ರನಿರ್ಮಾಪಕ, ನಿರ್ದೇಶಕ ಕರಣ್ ಜೋಹರ್ ಅವರನ್ನು UK ಸಂಸತ್ತು ಗೌರವಿಸಿದೆ. ಕರಣ್ ಜೋಹರ್ ಸಿನಿಮಾ ನಿರ್ಮಾಣಕ್ಕೆ ಪದಾರ್ಪಣೆ ಮಾಡಿ ಈ ಹೊತ್ತಿಗೆ 25 ವರ್ಷಗಳಾಗಿವೆ. ‘ಜಾಗತಿಕ ಮನರಂಜನಾ ಉದ್ಯಮ’ಕ್ಕೆ ನೀಡಿದ ಕೊಡುಗೆಗಾಗಿ ಬ್ರಿಟಿಷ್ ಸಂಸತ್ತು ಅವರನ್ನು ಸನ್ಮಾನಿಸಿದೆ. ಕರಣ್‌ ಜೋಹರ್‌ ಈ ಪೋಟೋವನ್ನು ತಮ್ಮ Instagram ಖಾತೆಯಲ್ಲಿ ಹಂಚಿಕೊಂಡು, ‘ಇದೊಂದು ವಿಶೇಷ ದಿನ. ಹೌಸ್ ಆಫ್ ಲಾರ್ಡ್ಸ್‌ನ ಕನ್ಸರ್ವೇಟಿವ್ ಸದಸ್ಯರಾದ ಬ್ಯಾರನೆಸ್ ವರ್ಮಾ ಅವರು ಲಂಡನ್‌ನಲ್ಲಿರುವ ಬ್ರಿಟಿಷ್ ಹೌಸ್ ಆಫ್ ಪಾರ್ಲಿಮೆಂಟ್‌ನಲ್ಲಿ ನನ್ನನ್ನು ಗೌರವಿಸಿದ್ದಾರೆ. ಇದು ನನಗೆ ಹೆಮ್ಮೆ ಮತ್ತು ಧನ್ಯತೆ ತಂದಿದೆ. ಚಲನಚಿತ್ರೋದ್ಯಮದಲ್ಲಿ ನಿರ್ಮಾಪಕನಾಗಿ ನಾನು 25 ವರ್ಷಗಳನ್ನು ಪೂರೈಸಿದ ಸಲುವಾಗಿ ನನ್ನ ನಿರ್ಮಾಣ, ನಿರ್ದೇಶನದ ‘ರಾಖಿ ಔರ್‌ ರಾಣಿ ಕಿ ಪ್ರೇಮ್‌ ಕಹಾನಿ’ ಸಿನಿಮಾದ ಟೀಸರ್‌ ಕೂಡ ಬಿಡುಗಡೆ ಮಾಡಿದ್ದೇನೆ’ ಎಂದು ಬರೆದುಕೊಂಡಿದ್ದಾರೆ. ಆತ್ಮೀಯ ಸ್ನೇಹಿತನ 25 ವರ್ಷಗಳ ಸಂಭ್ರಮಕ್ಕೆ ನಟ ಶಾರುಖ್ ಖಾನ್ ಟ್ವಿಟ್ಟರ್‌ನಲ್ಲಿ ಶುಭಾಶಯ ಕೋರಿದ್ದಾರೆ.

Previous articleನಾಳೆ ಜೂನ್‌ 23ರಿಂದ OTTಯಲ್ಲಿ ಸ್ಟ್ರೀಮ್‌ ಆಗಲಿವೆ ಈ ಪ್ರಮುಖ ಸಿನಿಮಾಗಳು, ಸರಣಿ
Next articleನಟ ವಿಜಯ್‌ ಬರ್ತ್‌ಡೇ | ‘ಲಿಯೋ’ ಸಿನಿಮಾ ಫಸ್ಟ್‌ ಲುಕ್‌ ಬಿಡುಗಡೆ

LEAVE A REPLY

Connect with

Please enter your comment!
Please enter your name here