ನಟಿ ಕರೀನಾ ಕಪೂರ್‌ ಇಂದು ತಮ್ಮ ಕಿರಿಯ ಪುತ್ರ ಜೆಹ್‌ ಅಲಿ ಖಾನ್‌ ಫೋಟೊವೊಂದನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ. ಅಂಬೆಗಾಲಿಡುತ್ತಿದ್ದ ಜೆಹ್‌ ಎದ್ದು ನಿಲ್ಲಲು ಪ್ರಯತ್ನಿಸುವ ಈ ಫೋಟೊಗೆ ನಟಿಯ ಆತ್ಮೀಯರು ಹಾಗೂ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಕರೀನಾ ಕಪೂರ್‌ ಆಗಿಂದಾಗ್ಗೆ ತಮ್ಮ ಮಕ್ಕಳಾದ ತೈಮೂರ್‌ ಮತ್ತು ಜೆಹ್‌ ಫೊಟೊಗಳನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಳ್ಳುತ್ತಿರುತ್ತಾರೆ. ಇಂದು ಅವರು ಕಿರಿಯ ಪುತ್ರ ಜೆಹ್‌ ಫೋಟೊವೊಂದನ್ನು ಹಾಕಿದ್ದಾರೆ. ಅಂಬೆಗಾಲಿಡುವ ಜೆಹ್‌ ಇದೀಗ ಎದ್ದು ನಿಲ್ಲಲು ಯತ್ನಿಸುತ್ತಿದ್ದಾನೆ. ಈ ಪೋಟೊ ಹಾಕಿರುವ ನಟಿ, “ನನ್ನ ಮಗ ದೊಡ್ಡವನಾಗುತ್ತಿದ್ದಾನೆ. ಟೈಂ ಈಸ್‌ ಫ್ಲೈಯಿಂಗ್‌” ಎಂದು ಬರೆದಿದ್ದಾರೆ. ಇದನ್ನು ಶೇರ್‌ ಮಾಡಿದ ಒಂದೇ ಗಂಟೆಯಲ್ಲೇ ಸುಮಾರು ಒಂದು ಲಕ್ಷಕ್ಕೂ ಹೆಚ್ಚು ಜನ ಫೋಟೊ ಮೆಚ್ಚಿದ್ದಾರೆ. ನಟಿಯ ಸ್ನೇಹಿತರು, ಕುಟುಂಬದವರು ಸೇರಿದಂತೆ ಅಭಿಮಾನಿಗಳ ನೂರಾರು ಕಾಮೆಂಟ್‌ಗಳು ಬಂದಿವೆ. ನಿರ್ಮಾಪಕಿ ರಿಯಾ ಕಪೂರ್‌, ಕಲಾವಿದರಾದ ಮನೀಷ್‌ ಮಲ್ಹೋತ್ರಾ, ಪುನೀತ್‌ ಮಲ್ಹೋತ್ರಾ, ಅಮೃತಾ ಅರೋರಾ ಸೇರಿದಂತೆ ಹಲವರ ಮೆಚ್ಚುಗೆಯ ಕಾಮೆಂಟ್‌ಗಳು ಇಲ್ಲಿವೆ. ಮೊನ್ನೆಯಷ್ಟೇ ಕರೀನಾ ತಮ್ಮ ಹಿರಿಯ ಪುತ್ರ ತೈಮೂರ್‌ನ ಆಟದ ವೀಡಿಯೋ ಪೋಸ್ಟ್‌ ಮಾಡಿ, “ಇವನಿಂದಾಗಿ ನನ್ನ ಮೂಡ್‌ ಆಗಿಂದಾಗ್ಗೆ ಚೇಂಜ್‌ ಆಗುತ್ತಿರುತ್ತದೆ” ಎಂದು ಬರೆದಿದ್ದರು. ಚಿತ್ರರಂಗದಿಂದ ಸುದೀರ್ಘ ಬ್ರೇಕ್‌ನಲ್ಲಿದ್ದಾರೆ ಕರೀನಾ. ಅವರು ಅಮೀರ್‌ ಖಾನ್‌ ಜೊತೆಗೆ ನಟಿಸಿರುವ ʼಲಾಲ್‌ ಸಿಂಗ್‌ ಛಡ್ಡಾʼ ಹಿಂದಿ ಸಿನಿಮಾ ತೆರೆಗೆ ಸಿದ್ಧವಾಗಿದೆ.

Previous articleವೀಡಿಯೊ ಸಾಂಗ್‌ | ‘ಅರ್ಜುನ ಸನ್ಯಾಸಿ’ಯ ‘ನೋಟಗಳು’; ತೆಲುಗು, ಕನ್ನಡ ದ್ವಿಭಾಷಾ ಸಿನಿಮಾ
Next articleಯಶ್‌ – ರಾಧಿಕಾ ವಿವಾಹ ವಾರ್ಷಿಕೋತ್ಸವ; ಪರಸ್ಪರರಿಗೆ ಶುಭಾಶಯ ಕೋರಿದ ತಾರಾದಂಪತಿ

LEAVE A REPLY

Connect with

Please enter your comment!
Please enter your name here