ಈಶ್ವರ್‌ ಪೊಲಂಕಿ ನಿರ್ದೇಶನದ ‘ಅರ್ಜುನ ಸನ್ಯಾಸಿ’ ಸಿನಿಮಾದ ಮೊದಲ ಹಾಡು ‘ನೋಟಗಳು’ ಬಿಡುಗಡೆಯಾಗಿದೆ. ಅನುರಂಜನ್‌ ರಚಿಸಿರುವ ಹಾಡಿಗೆ ಕೆ.ಹೇಮಂತಕುಮಾರ್‌ ಸಂಗೀತ ಸಂಯೋಜಿಸಿದ್ದು, ಶಕ್ತಿಶ್ರೀ ಗೋಪಾಲನ್‌ ಹಾಡಿದ್ದಾರೆ.

ಸನ್ಯಾಸಿ ಸನ್ಯಾಸಿ ಅರ್ಜುನ ಸನ್ಯಾಸಿ… ಪುಟ್ಟಣ್ಣ ಕಣಗಾಲ್‌ ನಿರ್ದೇಶನದ ‘ಎಡಕಲ್ಲು ಗುಡ್ಡದ ಮೇಲೆʼ ಚಿತ್ರದ ಜನಪ್ರಿಯ ಹಾಡಿದು. ಈ ಹಾಡಿನ ಸಾಲು ಈಗ ಸಿನಿಮಾ ಶೀರ್ಷಿಕೆಯಾಗಿದೆ. ಅದೇ ‘ಅರ್ಜುನ ಸನ್ಯಾಸಿ’. ಯುವ ಪ್ರತಿಭೆಗಳು ಜೊತೆಗೂಡಿ ರೂಪಿಸುತ್ತಿರುವ ಫ್ಯಾಮಿಲಿ ಎಂಟರ್‌ಟೇನರ್‌ ಸಿನಿಮಾ ಇದು. ಈ ಹಿಂದೆ ‘ರುದ್ರಾಕ್ಷಿಪುರ’ ಸಿನಿಮಾ ಮಾಡಿದ್ದ ಈಶ್ವರ್ ಪೊಲಂಕಿ ಈ ಚಿತ್ರ ನಿರ್ದೇಶಿಸುತ್ತಿದ್ದಾರೆ. ಇದೇ ‘ರುದ್ರಾಕ್ಷಿಪುರ’ ಸಿನಿಮಾದಲ್ಲಿ ಸಹ‌ನಿರ್ದೇಶಕನಾಗಿ ಕೆಲಸ ನಿರ್ವಹಿಸಿದ್ದ ಸಿ.ಸಿ.ರಾವ್ ‘ಅರ್ಜುನ ಸನ್ಯಾಸಿ’ ಸಿನಿಮಾ ಮೂಲಕ ಹೀರೋ ಆಗಿ ಅದೃಷ್ಟ ಪರೀಕ್ಷೆಗಿಳಿದಿದ್ದಾರೆ. ಟೈಟಲ್ ಮೂಲಕ ನಿರೀಕ್ಷೆ ಹುಟ್ಟಿಸಿರುವ ‘ಅರ್ಜುನ ಸನ್ಯಾಸಿ’ ಸಿನಿಮಾದ ಮೊದಲ ಹಾಡು ಬಿಡುಗಡೆಯಾಗಿದೆ. ಎ2 ಮ್ಯೂಸಿಕ್ ಯೂಟ್ಯೂಬ್ ನಲ್ಲಿ ಅನಾವರಣವಾಗಿರುವ ಹಾಡು ಕೇಳುಗರ ಗಮನ ಸೆಳೆಯುತ್ತಿದೆ. ಮದುವೆ ಬಗ್ಗೆ ಅರ್ಥಪೂರ್ಣವಾದ ಚೆಂದದ ಸಾಲುಗಳನ್ನು ಅನುರಂಜನ್ ಹೆಚ್.ಆರ್. ಜೋಡಿಸಿದ್ದರೆ, ಕೆ.ಹೇಮಂತ್ ಕುಮಾರ್ ಸಂಗೀತ ಸಂಯೋಜನೆ ಇದೆ. ಶಕ್ತಿಶ್ರೀ ಗೋಪಾಲನ್ ಹಾಡಿಗೆ ಧ್ವನಿಯಾಗಿದ್ದಾರೆ.

ಕನ್ನಡ ಹಾಗೂ ತೆಲುಗು ಎರಡು ಭಾಷೆಯಲ್ಲಿ ಹಾಡು ಏಕಕಾಲಕ್ಕೆ ರಿಲೀಸ್ ಆಗಿದೆ. ತೆಲುಗಿನಲ್ಲಿ ಪ್ರವರ್ಷ್ ಮಲ್ಲಾಡಿ ಲಿರಿಕ್ಸ್ ಬರೆದಿದ್ದು, ಸಿಂಧೂರಿ ವಿಶಾಲ್ ಧ್ವನಿಯಾದ್ರೆ, ಕೆ ಹೇಮಂತ್ ಕುಮಾರ್ ಅವರೇ ಮ್ಯೂಸಿಕ್ ಕಂಪೋಸ್ ಮಾಡಿದ್ದಾರೆ. ವಿರೇಶ್, ರವಿ ಬೆಳಗುಡಿ ಕ್ಯಾಮೆರಾ ವರ್ಕ್ ಸಿನಿಮಾದಲ್ಲಿದೆ. ಸಿ.ಸಿ.ರಾವ್ ಚಿತ್ರದ ಹೀರೋ. ಸೌಂದರ್ಯ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಅಭಿನಯ, ನಾಗೇಂದ್ರ ಷಾ, ಕಾಮಿಡಿ ಕಿಲಾಡಿ ಸೂರಜ್, ವಾಣಿ, ರೂಪ ರಾಯಪ್ಪ ಸೇರಿದಂತೆ ದೊಡ್ಡ ತಾರಾಬಳಗ ಸಿನಿಮಾದಲ್ಲಿದೆ. ಸಿನಿಮಾದ ಚಿತ್ರೀಕರಣ ಬೆಂಗಳೂರಿನಲ್ಲಿ ನಡೆದಿದೆ. ಕನ್ನಡ ಹಾಗೂ ತೆಲುಗು ಭಾಷೆಯಲ್ಲಿ ರೆಡಿಯಾಗುತ್ತಿರುವ ಸಿನಿಮಾಗೆ ಈಶ್ವರ್ ಪೊಲಂಕಿ ನಿರ್ದೇಶನ ಮಾಡುವುದರ ಒಟ್ಟಿಗೆ ತಮ್ಮದೇ ಪೊಲಂಕಿ ಫ್ಯಾಷನ್ ಪಿಚ್ಚರ್ಸ್‌ನಡಿ ಸಿನಿಮಾ ನಿರ್ಮಾಣ ಮಾಡಿದ್ದಾರೆ.

LEAVE A REPLY

Connect with

Please enter your comment!
Please enter your name here