ಪ್ರಮೋದ್ ಶೆಟ್ಟಿ ಪ್ರಮುಖ ಪಾತ್ರದಲ್ಲಿ ನಟಿಸಿರುವ ‘ಕರಿಕಾನು ಗುಡ್ಡದ ಮೇಲೊಂದು ಅಧಿಕ ಪ್ರಸಂಗ’ ಸಿನಿಮಾದ ಫಸ್ಟ್ ಲುಕ್ ಬಿಡುಗಡೆಯಾಗಿದೆ. ಅನೀಶ್ ಶರ್ಮ ಚೊಚ್ಚಲ ನಿರ್ದೇಶನದ ಚಿತ್ರದ ಇತರೆ ಪ್ರಮುಖ ಪಾತ್ರಗಳಲ್ಲಿ ರಾಘು ಶಿವಮೊಗ್ಗ, ಕಿರಣ್ ನಾಯಕ್, ಮಂಜುನಾಥ್ ಹೆಗಡೆ, ಕೆಜಿ ಕೃಷ್ಣಮೂರ್ತಿ ಪ್ರಮುಖ ಪಾತ್ರಗಳಲ್ಲಿದ್ದಾರೆ.

ಅನೀಶ್‌ ಶರ್ಮ ನಿರ್ದೇಶನದಲ್ಲಿ ಪ್ರಮೋದ್‌ ಶೆಟ್ಟಿ ನಟಿಸುತ್ತಿರುವ ‘ಕರಿಕಾನು ಗುಡ್ಡದ ಮೇಲೊಂದು ಅಧಿಕ ಪ್ರಸಂಗ’ ಸಿನಿಮಾದ ಫಸ್ಟ್‌ಲುಕ್‌ ಬಿಡುಗಡೆಯಾಗಿದೆ. ಊರೊಂದರಲ್ಲಿ ಆದ ಅಪಾರ್ಥ, ಅನಾಹುತವಾಗಿ ಮಾರ್ಪಟ್ಟು ಆ ಅನಾಹುತ ಅಧಿಕ ಪ್ರಸಂಗವಾಗಿ ನಡೆಯುವ ಘಟನೆಗಳನ್ನು ಕತೆ ಒಳಗೊಂಡಿದೆ. ‘ವಡ್ಡಾರಾಧಕ’ ಹಾಗೂ ‘ಶಬರಿ’ ಕಿರು ಚಿತ್ರಗಳನ್ನು ನಿರ್ದೇಶನ ಮಾಡಿದ್ದ ಅನೀಶ್ ಶರ್ಮ ಈ ಸಿನಿಮಾದ ಚೊಚ್ಚಲ ನಿರ್ದೇಶಕ. ಶಿವಮೊಗ್ಗ ಜಿಲ್ಲೆ ಇಡುವಾಣಿ ಎಂಬ ಹಳ್ಳಿಯಲ್ಲಿ ಸಿನಿಮಾವನ್ನು ಚಿತ್ರೀಕರಿಸಲಾಗಿದೆ. ಈ ಗ್ರಾಮದಲ್ಲೇ ಸಿನಿಮಾ ಸೆಟ್‌ ಹಾಕಿ, ಸ್ಥಳೀಯ ಜನರನ್ನೇ ಬಳಸಿಕೊಂಡು ಈ ಸಿನಿಮಾ ಚಿತ್ರೀಕರಿಸಲಾಗಿದೆ.

ಈಗಾಗಲೇ ಚಿತ್ರೀಕರಣ ಪೂರ್ಣವಾಗಿದ್ದು ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ನಡೆದಿವೆ. ಸುಮತ್ ಶರ್ಮಾ ಛಾಯಾಗ್ರಹಣ, ಸಂಜೀವ್ ಜಾಗೀರ್‌ದಾರ್‌ ಸಂಕಲನ ಚಿತ್ರಕ್ಕಿದೆ. ಚೇತನ್ ಕುಮಾರ್ ಹಿನ್ನೆಲೆ ಸಂಗೀತ ನೀಡಿದ್ದಾರೆ. Ganni Bag Studio Production ಅಡಿ ಚಿತ್ತರಂಜನ್ ಕಶ್ಯಪ್, ವಲ್ಲಭ್ ಸೂರಿ, ಸುನೀತ್ ಹಲಗೇರಿ ಚಿತ್ರ ನಿರ್ಮಿಸಿದ್ದು, ಊರ್ ಮನೆ ಪ್ರೊಡಕ್ಷನ್ಸ್‌ ಸಹ ನಿರ್ಮಾಣವಿದೆ. ರಾಘು ಶಿವಮೊಗ್ಗ, ಕಿರಣ್ ನಾಯಕ್, ಮಂಜುನಾಥ್ ಹೆಗಡೆ, ಕೆಜಿ ಕೃಷ್ಣಮೂರ್ತಿ ಚಂದ್ರಕಲಾ ಸಿನಿಮಾದ ಪ್ರಮುಖ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ.

Previous article‘ತಿರಗಬದರ ಸಾಮಿ’ ಟೀಸರ್‌ | ರಾಜ್‌ ತರುಣ್‌ ನಟನೆಯ ತೆಲುಗು ಸಿನಿಮಾ
Next article‘ದಂತಕಥೆ’ ಪೋಸ್ಟರ್‌ ಬಿಡುಗಡೆ | ರಘು ಮುಖರ್ಜಿ, ಕಿಶೋರ್‌ ನಟನೆಯ ಸಿನಿಮಾ

LEAVE A REPLY

Connect with

Please enter your comment!
Please enter your name here