ರಘು ಮುಖರ್ಜಿ ಮತ್ತು ಕಿಶೋರ್‌ ಪ್ರಮುಖ ಪಾತ್ರಗಳಲ್ಲಿ ನಟಿಸುತ್ತಿರುವ ‘ದಂತಕಥೆ’ ಸಿನಿಮಾದ ಪೋಸ್ಟರ್‌ ಬಿಡುಗಡೆಯಾಗಿದೆ. ಹಿರಿಯ ನಟ ರವಿಚಂದ್ರನ್‌ ಪೋಸ್ಟರ್‌ ರಿಲೀಸ್‌ ಮಾಡಿ ಹಾರೈಸಿದ್ದಾರೆ. ವಚನ್‌ ನಿರ್ದೇಶನದ ಚಿತ್ರವಿದು.

ವಚನ್‌ ನಿರ್ದೇಶನದಲ್ಲಿ ರಘು ಮುಖರ್ಜಿ ಮತ್ತು ಕಿಶೋರ್‌ ಮುಖ್ಯ ಭೂಮಿಕೆಯಲ್ಲಿ ನಟಿಸುತ್ತಿರುವ ‘ದಂತಕಥೆ’ ಚಿತ್ರದ ಪೋಸ್ಟರ್‌ ಅನ್ನು ಹಿರಿಯ ನಟ ರವಿಚಂದ್ರನ್‌ ಬಿಡುಗಡೆ ಮಾಡಿದ್ದಾರೆ. ವಚನ್‌ ಅವರೇ ಸಿನಿಮಾಗೆ ಚಿತ್ರಕಥೆ ರಚಿಸಿದ್ದಾರೆ. ಧನಂಜಯ ಅವರ ‘ಹೆಡ್ ಬುಷ್‌’ ಚಿತ್ರದಲ್ಲಿ ರಾಜಕಾರಣಿಯಾಗಿ ಕಾಣಿಸಿಕೊಂಡಿದ್ದ ರಘು ಮುಖರ್ಜಿ ತಮ್ಮ ಮುಂದಿನ ಚಿತ್ರಕ್ಕೆ ಸಿದ್ಧರಾಗಿದ್ದಾರೆ. ವಚನ್ ನಿರ್ದೇಶಿಸಿರುವ ಈ ಚಲನಚಿತ್ರವು ಮೂವರು ಪೊಲೀಸರನ್ನು ಒಳಗೊಂಡ ಪೊಲೀಸ್ ತನಿಖಾ ಕಥೆಯಾಗಿದೆ. ರಘು ಇನ್ಸ್‌ಪೆಕ್ಟರ್ ಪಾತ್ರದಲ್ಲಿ ನಟಿಸಿದ್ದರೆ, ರವಿಶಂಕರ್ ಅವರು ಉನ್ನತ ಅಧಿಕಾರಿಯಾಗಿದ್ದಾರೆ. ವಿಶೇಷ ತನಿಖಾಧಿಕಾರಿಯಾಗಿ ಕಿಶೋರ್ ಕಾಣಿಸಿಕೊಂಡಿದ್ದಾರೆ. ‘ಚಿತ್ರವು ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸಂಭವಿಸುವ ಘಟನೆಯನ್ನು ಒಳಗೊಂಡಿದೆ. ಇದು ಹಿಂದೆಂದೂ ಪ್ರಯತ್ನಿಸಿರದ ಕಥಾವಸ್ತು. ಟೈಟಲ್‌ಗೆ ಈ ಕಥೆ ಹೇಗೆ ಹೊಂದಿಕೆಯಾಗುತ್ತದೆ ಎಂಬುದು ಚಿತ್ರದಲ್ಲಿ ಮೂಡಿಬರಲಿದೆ’ ಎಂದಿದ್ದಾರೆ ನಿರ್ದೇಶಕ ವಚನ್‌. Janaratna Productions ಬ್ಯಾನರ್‌ ಅಡಿ ಜನಾರ್ಧನ್‌ ವಿ ಸಿನಿಮಾ ನಿರ್ಮಿಸುತ್ತಿದ್ದು, ಅರ್ಜುನ್‌ ಜನ್ಯ ಚಿತ್ರಕ್ಕೆ ಸಂಗೀತ ಸಂಯೋಜಿಸಿದ್ದಾರೆ.

https://www.instagram.com/p/CwkuXauBeNn/?utm_source=ig_web_copy_link

Previous article‘ಕರಿಕಾನು ಗುಡ್ಡದ ಮೇಲೊಂದು ಅಧಿಕ ಪ್ರಸಂಗ’ ಫಸ್ಟ್‌ ಲುಕ್‌ | ಪ್ರಮೋದ್ ಶೆಟ್ಟಿ ಸಿನಿಮಾ
Next article‘ಕಥನಾರ್‌’ ಟೀಸರ್‌ | ಜಯಸೂರ್ಯ – ಅನುಷ್ಕಾ ಶೆಟ್ಟಿ ನಟನೆಯ ಮಲಯಾಳಂ ಸಿನಿಮಾ

LEAVE A REPLY

Connect with

Please enter your comment!
Please enter your name here