A S ರವಿಕುಮಾರ್‌ ಚೌದರಿ ನಿರ್ದೇಶನದ ‘ತಿರಗಬದರ ಸಾಮಿ’ ತೆಲುಗು ಸಿನಿಮಾದ ಟೀಸರ್‌ ಬಿಡುಗಡೆಯಾಗಿದೆ. ರಾಜ್‌ ತರುಣ್‌ ಮತ್ತು ಮಾಲ್ವಿ ಮಲ್ಹೋತ್ರಾ ಮುಖ್ಯಭೂಮಿಕೆಯಲ್ಲಿ ನಟಿಸಿರುವ ರೊಮ್ಯಾಂಟಿಕ್‌ ಲವ್‌ ಸ್ಟೋರಿಗೆ J B ಮತ್ತು ಬೋಲೆ ಶವಾಲಿ ಸಂಗೀತ ಸಂಯೋಜನೆಯಿದೆ.

ರಾಜ್‌ ತರುಣ್‌ ಮತ್ತು ಮಾಲ್ವಿ ಮಲ್ಹೋತ್ರಾ ಮುಖ್ಯ ಭೂಮಿಕೆಯಲ್ಲಿ ನಟಿಸಿರುವ ‘ತಿರಗಬದರ ಸಾಮಿ’ ತೆಲುಗು ಚಿತ್ರದ ಟೀಸರ್‌ ಬಿಡುಗಡೆಯಾಗಿದೆ. ರೊಮ್ಯಾಂಟಿಕ್‌ ಪ್ರೇಮ ಕಥೆಯನ್ನು A S ರವಿಕುಮಾರ್‌ ಚೌಧರಿ ನಿರ್ದೇಶಿಸಿದ್ದಾರೆ. ಹಿಂಸಾಚಾರವನ್ನು ಕಟುವಾಗಿ ವಿರೋಧಿಸುವ ಮುಗ್ಧ ಸ್ವಭಾವದ ಯುವಕನ ಸುತ್ತ ಕಥೆ ಸುತ್ತುತ್ತದೆ. ಅಹಿಂಸಾವಾದಿ ಯುವಕನೊಬ್ಬ ಶಾಂತಿಯನ್ನು ಬಯಸುವ, ಗದ್ದಲ ಗಲಾಟೆ ಎಂದರೆ ದೂರ ಸರಿಯುವ ಮನೋಭಾವದ ವ್ಯಕ್ತಿತ್ವ ಹೊಂದಿರುತ್ತಾನೆ. ಈ ವ್ಯಕ್ತಿತ್ವಕ್ಕೆ ವಿದುದ್ಧವಾಗಿರುವ ಬೋಲ್ಡ್‌ ಯುವತಿಯೊಂದಿಗಿನ ಆತನ ಪ್ರೀತಿಯ ಕತೆಯನ್ನು ಚಿತ್ರದಲ್ಲಿ ತೋರಿಸಲಾಗಿದೆ.

ಇವರಿಬ್ಬರು ಮದುವೆಯಾದ ಬಳಿಕ ಆಕೆಯ ಗಂಡನನ್ನು ಪರಿಸ್ಥಿತಿಗೆ ಅನುಗುಣವಾಗಿ, ಅನ್ಯಾಯದ ವಿರುದ್ಧ ಪ್ರತಿಕ್ರಿಯಿಸಬೇಕೆಂದು ಅವಳು ಬದಲಾಯಿಸುವ ಪರಿ ಟ್ರೈಲರ್‌ನಲ್ಲಿದೆ. ಚಿತ್ರದಲ್ಲಿ ರಾಜ್‌ ತರುಣ್‌, ಮಾಲ್ವಿ ಮಲ್ಹೋತ್ರಾ, ಮನ್ನಾರ್‌ ಚೊಪ್ರಾ, ಮಕರಂದ್‌ ದೇಶ್ ಪಾಂಡೆ, ರಘು ಬಾಬು, ಜಾನ್‌ ವಿಜಯ್‌, ಅಂಕಿತಾ ಠಾಕೂರ್‌, ಪೃಥ್ವಿ, ಪ್ರಗತಿ, ರಾಜಾ ರವೀಂದ್ರ, ಬಿತ್ರಿ ಸತ್ತಿ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಚಿತ್ರಕ್ಕೆ ಜವಹಾರ್‌ ರೆಡ್ಡಿ ಛಾಯಾಗ್ರಹಣ ಮಾಡಿದ್ದು, J B ಮತ್ತು ಬೋಲೆ ಶವಾಲಿ ಸಂಗೀತ ಸಂಯೋಜಿಸಿದ್ದಾರೆ. Suraksh Entertainments Media ಬ್ಯಾನರ್‌ ಸಿನಿಮಾ ನಿರ್ಮಿಸಿದೆ.

LEAVE A REPLY

Connect with

Please enter your comment!
Please enter your name here