ನೈಜ ಘಟನೆಗಳನ್ನು ಆಧರಿಸಿ ಹನ್ಸಲ್‌ ಮೆಹ್ತಾ ನಿರ್ದೇಶಿಸಿರುವ ‘ಸ್ಕೂಪ್‌’ ಸರಣಿ Busan film festivalನಲ್ಲಿ ಪ್ರಶಸ್ತಿಗಳನ್ನು ಪಡೆದಿದೆ. ಅತ್ಯುತ್ತಮ ಸರಣಿ ಮತ್ತು ಕರಿಷ್ಮಾ ತನ್ನಾ ಅತ್ಯುತ್ತಮ ನಾಯಕನಟಿ ಪುರಸ್ಕಾರಗಳಿಗೆ ಪಾತ್ರರಾಗಿದ್ದಾರೆ. ಸರಣಿ ಜೂನ್ 2, 2023ರಿಂದ Netflixನಲ್ಲಿ ಸ್ಟ್ರೀಮ್‌ ಆಗುತ್ತಿದೆ.

Netflix Originalsನ ‘ಸ್ಕೂಪ್’ (Scoop) ಸರಣಿ ಮತ್ತು ಅದರ ಮುಖ್ಯ ಪಾತ್ರಧಾರಿ ಕರಿಷ್ಮಾ ತನ್ನಾ ಭಾನುವಾರ (ಅ.8) ದಕ್ಷಿಣ ಕೊರಿಯಾದ ಬುಸಾನ್‌ನಲ್ಲಿ ನಡೆದ Busan film festivalನಲ್ಲಿ ಏಷ್ಯಾ ಪ್ರಶಸ್ತಿ ಮತ್ತು 2023ರ ಗ್ಲೋಬಲ್ OTT ಪ್ರಶಸ್ತಿ ಗೆದ್ದಿದ್ದಾರೆ. ಈ ಕುರಿತು BIFF ತನ್ನ ಅಧಿಕೃತ X (Twitter) ಖಾತೆಯಲ್ಲಿ ಮಾಹಿತಿಯನ್ನು ಹಂಚಿಕೊಂಡಿದೆ. ಹಾಗೂ ಈ ಸಂಭ್ರಮವನ್ನು ತಮ್ಮ Instagram ಖಾತೆಯಲ್ಲಿ ಹಂಚಿಕೊಂಡ ಹನ್ಸಲ್‌ ಮೆಹ್ತಾ ”ನಾವು Busan film festival ಮತ್ತು Asia Contents Awards Global OTT Awards 2023 ರಲ್ಲಿ ಎರಡು ಪ್ರಶಸ್ತಿಗಳನ್ನು ಗೆದ್ದಿದ್ದೇವೆ. ‘ಅತ್ಯುತ್ತಮ ಏಷ್ಯನ್ ಸರಣಿ’ ವಿಭಾಗದಲ್ಲಿ ನಮ್ಮ ‘Scoop’ ಸರಣಿ ‘ಅತ್ಯುತ್ತಮ ಸರಣಿ’ ಮತ್ತು ಕರೀಷ್ಮಾ ತನ್ನಾ ‘ಅತ್ಯುತ್ತಮ ನಾಯಕ ನಟಿ’ ಪ್ರಶಸ್ತಿ ಪಡೆದಿದ್ದಾರೆ” ಎಂದು ಶೀರ್ಷಿಕೆ ನೀಡಿದ್ದಾರೆ.

ಹನ್ಸಲ್‌ ಮೆಹ್ತಾ ನಿರ್ದೇಶನದ ನೈಜ ಘಟನೆಯಾಧರಿತ ಈ ಸರಣಿಯಲ್ಲಿ ಕರಿಷ್ಮಾ ತನ್ನಾ ಸ್ಟಾರ್ ಕ್ರೈಮ್ ವರದಿಗಾರ್ತಿ ‘ಜಾಗೃತಿ ಪಾಠಕ್’ ಆಗಿ ಪಾತ್ರ ನಿರ್ವಹಿಸಿದ್ದು, ಒಬ್ಬ ಪತ್ರಕರ್ತನ ಅನಿರೀಕ್ಷಿತ ಕೊಲೆಯಲ್ಲಿ ಪ್ರಮುಖ ಆರೋಪಿಯಾಗಿ ಅವಳ ಹೆಸರು ಕೇಳಿಬರುತ್ತದೆ. ತನ್ನ ಪ್ರತಿಸ್ಪರ್ಧಿಯನ್ನು ನಾಶಮಾಡಲು ಭೂಗತ ಸಂಪರ್ಕಗಳಿಂದ ಸಹಾಯ ಪಡೆದಿದ್ದಾಳೆ ಎಂದು ಅವಳ ಮೇಲೆ ಎಲ್ಲರೂ ಆರೋಪ ಮಾಡುತ್ತಾರೆ. ಆದರೆ ಇದೆಲ್ಲವೂ ಸುಳ್ಳು ಎಂದು ಅವಳು ನ್ಯಾಯಕ್ಕಾಗಿ ಹೋರಾಡುತ್ತಾಳೆ. ಈ ಸರಣಿಯನ್ನು ಜಿಗ್ನಾ ವೋರಾ ಅವರ Behind Bars in Byculla ಪುಸ್ತಕದಿಂದ ಅಳವಡಿಸಿಕೊಳ್ಳಲಾಗಿದ್ದು, ದೇವೆನ್ ಭೋಜನಿ, ತನ್ನಿಷ್ಠ ಚಟರ್ಜಿ, ತೇಜಸ್ವಿನಿ ಕೊಲ್ಹಾಪುರೆ, ಶಿಖಾ ತಲ್ಸಾನಿಯಾ, ತನ್ಮಯ್ ಧನಾನಿಯಾ, ಇನಾಯತ್ ಸೂದ್, ಸ್ವರೂಪ ಘೋಷ್, ಮಲ್ಹಾರ್ ಥಾಕರ್, ಇರಾ ದುಬೆ, ಇಶಿತಾ ಅರುಣ್ ಮತ್ತು ಸನತ್ ವ್ಯಾಸ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಸರಣಿ ಜೂನ್ 2, 2023ರಿಂದ Netflixನಲ್ಲಿ ಸ್ಟ್ರೀಮ್‌ ಆಗುತ್ತಿದೆ.

LEAVE A REPLY

Connect with

Please enter your comment!
Please enter your name here