ಹದಿಹರೆಯದ ಹುಡುಗಿಯೊಬ್ಬಳು ವೈದ್ಯೆಯಾಗುವ ಕನಸು ಕಾಣುವ ಸೋಶಿಯಲ್ ಡ್ರಾಮಾ ‘ಅಯಾಲಿ’ ZEE5ನಲ್ಲಿ ಸ್ಟ್ರೀಮ್‌ ಆಗುತ್ತಿದೆ. ತಮಿಳು ಮತ್ತು ತೆಲುಗು ಭಾಷೆಗಳಲ್ಲಿರುವ ಸರಣಿ ಕುರಿತಾಗಿ ಸಿನಿಮಾರಂಗದ ಹಲವರು ಮೆಚ್ಚುಗೆ ವ್ಯಕ್ತಪಡಿಸಿ ಟ್ವೀಟ್‌ ಮಾಡುತ್ತಿದ್ದಾರೆ.

ಹದಿಹರೆಯದ ಹುಡುಗಿ ಸೆಲ್ವಿ ವೈದ್ಯೆಯಾಗುವ ಕನಸು ಕಾಣುವ ಸೋಶಿಯಲ್ ಡ್ರಾಮಾ ‘ಅಯಾಲಿ’. ಆಕೆಯ ಊರು ವೀರಪಣೈನಲ್ಲಿ ಹೆಣ್ಣು ಮಕ್ಕಳು ಪ್ರೌಢಾವಸ್ಥೆಗೆ ಬಂದಾಗ ಮದುವೆಯಾಗಬೇಕು, ಇಲ್ಲವಾದಲ್ಲಿ ಅಯಾಲಿ ದೇವಿಯೂ ಕೋಪಗೊಂಡು ಹಳ್ಳಿಯ ಜನರನ್ನು ಶಪಿಸುತ್ತಾಳೆ ಎಂಬುದು ನಂಬಿಕೆ. ಈ ಪುರಾತನ ನಂಬಿಕೆ, ಸಂಪ್ರದಾಯಗಳನ್ನು ದಾಟಿ ವಿರೋಧಗಳನ್ನು ಎದುರಿಸುತ್ತಾ ವೈದ್ಯೆಯಾಗುವ ಗುರಿಯತ್ತ ಸಾಗುವ ಕತೆಯಿದು. ಸಾಮಾಜಿಕ ಸಂದೇಶವಿರುವ ಸರಣಿಗೆ ಸಿನಿಮಾ ತಾರೆಯರಾದ ದುಲ್ಕರ್ ಸಲ್ಮಾನ್, ವಿಜಯ್ ಸೇತುಪತಿ, ವೆಂಕಟ್‌ ಪ್ರಭು, ಮಿತ್ರನ್‌ ಜವಹಾರ್‌ ಸೇರಿದಂತೆ ಹಲವರು ಪ್ರಶಂಸೆ ವ್ಯಕ್ತಪಡಿಸಿ ಟ್ವೀಟ್‌ ಮಾಡಿದ್ದಾರೆ.

ರಾಷ್ಟ್ರೀಯ ಹೆಣ್ಣು ಮಕ್ಕಳ ದಿನ ಹಾಗೂ ಅಂತರಾಷ್ಟ್ರೀಯ ಶಿಕ್ಷಣ ದಿನದಂದು ZEE5ನಲ್ಲಿ ಸರಣಿ ಬಿಡುಗಡೆಯಾಗಿತ್ತು. ತಮಿಳು ಮತ್ತು ತೆಲುಗು ಎರಡೂ ಭಾಷೆಗಳಲ್ಲಿ ಸರಣಿ ಸ್ಟ್ರೀಮ್‌ ಆಗುತ್ತಿದೆ. ಕುಷ್ಮಾವತಿ ಎಸ್ಟ್ರೆಲ್ಲಾ ಸ್ಟೋರಿಸ್ ಬ್ಯಾನರ್ ಸರಣಿ ನಿರ್ಮಿಸಿದ್ದು, ಮುತ್ತುಕುಮಾರ್ ನಿರ್ದೇಶಿಸಿದ್ದಾರೆ. ಸರಣಿ ಎಂಟು ಎಪಿಸೋಡ್‌ಗಳನ್ನು ಒಳಗೊಂಡಿದೆ. ಅಬಿ ನಕ್ಷತ್ರ, ಅನುಮೋಲ್, ಅರುವಿ ಮದನ್, ಲಿಂಗ, ಸಿಂಗಂ ಪುಲಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಲಕ್ಷ್ಮಿ ಪ್ರಿಯಾ, ಸೃತಿ ವೆಂಕಟ್, ಭಗವತಿ ಪೆರುಮಾಳ್ ಅತಿಥಿ ಪಾತ್ರಗಳಲ್ಲಿದ್ದಾರೆ.

LEAVE A REPLY

Connect with

Please enter your comment!
Please enter your name here