ರುಚಿ ನಾರಾಯಣ್‌ ನಿರ್ದೇಶನದ ‘ಕರ್ಮ ಕಾಲಿಂಗ್’ ಹಿಂದಿ ಸರಣಿ ಟ್ರೇಲರ್ ಬಿಡುಗಡೆಯಾಗಿದೆ. ರವೀನಾ ಟಂಡನ್‌ ಮುಖ್ಯ ಪಾತ್ರದಲ್ಲಿ ನಟಿಸಿರುವ ಸರಣಿಯನ್ನು R A T films ನಿರ್ಮಿಸಿದೆ. ಸರಣಿ ಜನವರಿ 26ರಿಂದ Hotstar ನಲ್ಲಿ ಸ್ಟ್ರೀಮಿಂಗ್‌ ಆರಂಭಿಸಲಿದೆ.

ರವೀನಾ ಟಂಡನ್ ಅಭಿನಯದ ‘ಕರ್ಮ ಕಾಲಿಂಗ್’ ಹಿಂದಿ ಸರಣಿ ಟ್ರೇಲರ್ ಬಿಡುಗಡೆಯಾಗಿದೆ. ಸರಣಿಯನ್ನು ರುಚಿ ನಾರಾಯಣ್ ನಿರ್ದೇಶಿಸಿದ್ದಾರೆ. ಈ ವೆಬ್‌ ಸರಣಿಯು ಶ್ರೀಮಂತ ಕೊಠಾರಿ ಕುಟುಂಬದ ಸುತ್ತ ಪಿತೂರಿ ನಡೆಸುವ ಸಂಚುಗಳ ಸುತ್ತ ಸುತ್ತುತ್ತದೆ. ಟ್ರೇಲರ್‌ನಲ್ಲಿ ರವೀನಾ ಟಂಡನ್‌ ಅವರನ್ನು ಇಂದ್ರಾಣಿ ಕೊಠಾರಿ ಎಂದು ಪರಿಚಯಿಸಿದೆ. ಇಂದ್ರಾಣಿ ಎಂದರೆ 90ರ ದಶಕದಲ್ಲಿ ಬಾಲಿವುಡ್ ಅನ್ನು ರಾಣಿಯಂತೆ ಆಳಿದವರಲ್ಲಿ ಒಬ್ಬರು, ಪ್ರಸ್ತುತ ಅಲಿಬಾಗ್‌ನ ರಾಜಮಾತಾ ಎಂದು ಹೇಳುತ್ತಾಳೆ. ಇಂದ್ರಾಣಿ ಮಾತ್ರವೇ ಕೊಠಾರಿಗಳ ಜಗತ್ತಿನ ಸರ್ವಾಧಿಕಾರಿಯಲ್ಲ. ಅಲಿಬಾಗ್‌ನ ಸಮಾಜಕ್ಕೆ ಇತ್ತೀಚಿನ ಕರ್ಮಾ ತಲ್ವಾರ್ (ನಮ್ರತಾ ಶೇಟ್) ಸಹ ಸೇರ್ಪಡೆಯಾಗಿದ್ದಾಳೆ ಎಂದೂ ಹೇಳಲಾಗುತ್ತದೆ.

ಇವರೆಲ್ಲರ ಮಧ್ಯೆ ವೈಮನಸ್ಸು ಉಂಟಾಗಿ ಒಳಸಂಚು, ಜಗಳ, ಕೊಲೆಗಳು ನಡೆಯುತ್ತಿರುತ್ತವೆ. ಈ ಸರಣಿಯನ್ನು R A T films ನಿರ್ಮಿಸಿದೆ. ಸರಣಿಯಲ್ಲಿ ಗೌರವ್ ಶರ್ಮಾ, ವಾಲುಚಾ ಡಿಸೋಜಾ, ಆಮಿ ಏಲಾ, ವಿರಾಫ್ ಪಟೇಲ್, ಪಿಯೂಷ್ ಖಾತಿ, ವರುಣ್ ಸೂದ್, ವಿಕ್ರಮ ಜೀತ್ ವಿರ್ಕ್, ವಿರಾಫ್ ಪಟೇಲ್, ರೋಹಿತ್ ರಾಯ್ ಮತ್ತು ಆಮಿ ಏಲಾ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಸರಣಿ ಜನವರಿ 26ರಿಂದ Hotstar ನಲ್ಲಿ ಸ್ಟ್ರೀಮಿಂಗ್‌ ಆರಂಭಿಸಲಿದೆ.

LEAVE A REPLY

Connect with

Please enter your comment!
Please enter your name here