ನಾಸಿರುದ್ದೀನ್‌ ಷಾ ಪ್ರಮುಖ ಪಾತ್ರದಲ್ಲಿ ನಟಿಸಿರುವ ‘ಕೌನ್‌ ಬನೇಗಿ ಶಿಖರ್‌ವತಿ’ ಸರಣಿಯ ಟ್ರೈಲರ್‌ ಬಿಡುಗಡೆಯಾಗಿದೆ. ಗೌರವ್‌ ಚಾವ್ಲಾ ಮತ್ತು ಅನನ್ಯಾ ಬ್ಯಾನರ್ಜಿ ನಿರ್ದೇಶನದ ಸರಣಿ ಜನವರಿ 5ರಿಂದ ZEE5ನಲ್ಲಿ ಸ್ಟ್ರೀಮ್‌ ಆಗಲಿದೆ.

ZEE5ನಲ್ಲಿ ಸ್ಟ್ರೀಮ್‌ ಆಗಲಿರುವ ‘ಕೌನ್‌ ಬನೇಗಿ ಶಿಖರ್‌ವತಿ’ ವೆಬ್‌ ಸರಣಿ ಟ್ರೈಲರ್‌ ರಿಲೀಸ್‌ ಆಗಿದೆ. ರಾಜಮನೆತನದ ಹಿನ್ನೆಲೆಯಲ್ಲಿ ಹೆಣೆದಿರುವ ತಿಳಿಹಾಸ್ಯದ ಕಥಾವಸ್ತು. ರಾಜವಂಶಸ್ಥನ ಪಾತ್ರದಲ್ಲಿ ನಾಸಿರುದ್ದೀನ್‌ ಷಾ, ಅವರ ಬಲಗೈ ಬಂಟನಾಗಿ ರಘುವೀರ್‌ ಯಾದವ್‌ ನಟಿಸಿದ್ದಾರೆ. ಶಿಖರ್‌ವತಿ ಕೋಟೆಯ ಆಸ್ತಿಯ ತೆರಿಗೆಯ ಹಣವನ್ನಾಗಿ ದೊಡ್ಡ ಮೊತ್ತವನ್ನು ಸರ್ಕಾರಕ್ಕೆ ಪಾವತಿಸಬೇಕಿರುತ್ತದೆ. ನಾಲ್ವರು ಪುತ್ರಿಯರಿಗೆ ಈ ತೆರಿಗೆ ಭಾರ ಹೊರಿಸುವಂತೆ ಬಲಗೈ ಬಂಟ ರಾಜನಿಗೆ ಸಲಹೆ ಕೊಡುತ್ತಾನೆ. ಲಾರಾ ದತ್ತಾ, ಸೋಹಾ ಅಲಿ ಖಾನ್‌, ಕೃತಿಕಾ ಕಮ್ರಾ ಮತ್ತು ಆನ್ಯಾ ಸಿಂಗ್‌ ರಾಜನ ನಾಲ್ವರು ಪುತ್ರಿಯರ ಪಾತ್ರಗಳಲ್ಲಿ ನಟಿಸಿದ್ದಾರೆ. ಪರಸ್ಪರರಲ್ಲಿ ಹೊಂದಾಣಿಕೆ ಇರದ ಇವರಿಗೆ ಕೋಟೆ ಆಸ್ತಿಯ ಮೇಲೆ ಕಣ್ಣು. ಟ್ರೈಲರ್‌ನಲ್ಲಿ ರಾಜಕುಮಾರಿಯರ ಬಾಲ್ಯದ ಸನ್ನಿವೇಶಗಳೂ ಇವೆ.

ಈ ಕಾಮಿಡಿ ಸೀರೀಸ್‌ನ ರಾಜನ ಪಾತ್ರಕ್ಕೆ ನಾಸಿರುದ್ದೀನ್‌ ಷಾ ಅತ್ಯಂತ ಸೂಕ್ತ ಆಯ್ಕೆ ಎನಿಸುತ್ತದೆ. ಈ ಹಿಂದೆ ಅವರು ಅಮೇಜಾನ್‌ ಪ್ರೈಮ್‌ನ
‘ಬಂದಿಷ್‌ ಬ್ಯಾಂಡಿಟ್ಸ್‌’ ಮ್ಯೂಸಿಕಲ್‌ ಸರಣಿಯಲ್ಲಿ ನಟಿಸಿದ್ದರು. ಸರಣಿಯಲ್ಲಿ ಅವರಿಗೆ ಸಂಗೀತಗಾರ ಪಂಡಿತ್‌ ರಾಧೆಮೋಹನ್‌ ರಾಥೋಡ್‌ ಪಾತ್ರವಿತ್ತು. ‘ಕೌನ್‌ ಬನೇಗಿ ಶಿಖರ್‌ವತಿ’ ಸರಣಿ ಬಗ್ಗೆ ಮಾತನಾಡಿರುವ ನಟಿ ಸೋಹಾ ಅಲಿ ಖಾನ್‌, “ಔಟ್‌ ಆಫ್‌ ದಿ ಬಾಕ್ಸ್‌ ಕಂಟೆಂಟ್‌ನಲ್ಲಿ ನಟಿಸಬೇಕೆಂದು ನೋಡುತ್ತಿದ್ದಾಗ ಇದು ಸಿಕ್ಕಿತು. ಸ್ಕ್ರಿಪ್ಟ್‌ ಮತ್ತು ಸರಣಿಯಲ್ಲಿ ಪ್ರತಿಭಾವಂತ ಕಲಾವಿದರು ನಟಿಸುತ್ತಿರುವುದು ಪಾತ್ರ ಒಪ್ಪಿಕೊಳ್ಳಲು ಪ್ರೇರಣೆಯಾಯ್ತು” ಎಂದಿದ್ದಾರೆ. ಸೈರಸ್‌ ಸಾಹುಕಾರ್‌, ವರುಣ್‌ ಠಾಕೂರ್‌ ಸರಣಿಯ ಪ್ರಮುಖ ಪಾತ್ರಗಳಲ್ಲಿದ್ದಾರೆ. ಜನವರಿ 5ರಿಂದ ZEE5ನಲ್ಲಿ ಸರಣಿ ಸ್ಟ್ರೀಮ್‌ ಆಗಲಿದೆ.

LEAVE A REPLY

Connect with

Please enter your comment!
Please enter your name here