ನೀಲೇಶ್‌ ಕೃಷ್ಣ ನಿರ್ದೇಶನದ ‘ಅನ್ನಪೂರ್ಣಿ’ ತಮಿಳು ಚಿತ್ರದ ಟ್ರೇಲರ್‌ ಬಿಡುಗಡೆಯಾಗಿದೆ. ನಯನತಾರಾ ಮತ್ತು ಜೈ ಮುಖ್ಯಭೂಮಿಕೆಯಲ್ಲಿ ಅಭಿನಯಿಸಿದ್ದಾರೆ. ಕನ್ನಡ ನಟ ಅಚ್ಯುತ್‌ ಕುಮಾರ್‌ ಈ ಚಿತ್ರದಲ್ಲಿ ನಯನತಾರಾ ತಂದೆ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

ನಯನತಾರಾ ಮತ್ತು ಜೈ ಮುಖ್ಯಭೂಮಿಕೆಯಲ್ಲಿ ಅಭಿನಯಿಸಿರುವ ‘ಅನ್ನಪೂರ್ಣಿ’ – The Goddess of Food ತಮಿಳು ಚಿತ್ರದ ಟ್ರೇಲರ್‌ ಬಿಡುಗಡೆಯಾಗಿದೆ. ಈ ಚಿತ್ರವನ್ನು ನೀಲೇಶ್ ಕೃಷ್ಣ ನಿರ್ದೇಶಿಸಿಸದ್ದಾರೆ. ಸಿನಿಮಾದ ಟ್ರೇಲರ್‌ ಬಿಡುಗಡೆಯಾಗಿ ಕೆಲವೇ ಗಂಟೆಗಳಲ್ಲಿ 2 ಮಿಲಿಯನ್‌ಗಿಂತ ಹೆಚ್ಚು ವೀಕ್ಷಣೆ ಕಂಡಿದ್ದು ವಿಶೇಷ. ಸಾಂಪ್ರದಾಯಿಕ ಕುಟುಂಬದ ಯುವತಿ ಅನ್ನಪೂರ್ಣಿ(ನಯನತಾರಾ) ದೊಡ್ಡ ಚೆಫ್‌ ಅಗಬೇಕೆಂದು ಹಂಬಲಿಸುವ ಕಥೆಯನ್ನು ಟ್ರೇಲರ್‌ನಲ್ಲಿ ತೋರಿಸಲಾಗಿದೆ. ಆಕೆಯ ತಂದೆ ತಿರುಚ್ಚಿಯ ಶ್ರೀರಂಗಂನಲ್ಲಿರುವ ದೇವಸ್ಥಾನದಲ್ಲಿ ಅರ್ಚಕರಾಗಿ ಹಾಗೂ ಪ್ರಸಾದವನ್ನು ತಯಾರಿಸುವ ಬಾಣಸಿಗ. ಪೂಜೆ, ಪುನಸ್ಕಾರ, ನಿಯಮಗಳನ್ನು ಪಾಲಿಸುವ ಕುಟುಂಬದಲ್ಲಿ ಮಾಂಸಹಾರ ಸಂಪೂರ್ಣ ನಿಷೇಧ. ಮಾಂಸಾಹಾರದ ಬಗ್ಗೆ ತಾತ್ಸಾರವಿರುವ ಕುಟುಂಬದಿಂದ ಕಣ್ತಪ್ಪಿಸಿ ಹೇಗೆ ಆಕೆ ಚೆಫ್‌ ಆಗುತ್ತಾಳೆ ಎನ್ನವುದು ಚಿತ್ರದ ಕಥಾವಸ್ತು.

ಚಿತ್ರದಲ್ಲಿ ಕನ್ನಡ ನಟ ಅಚ್ಯುತ್‌ಕುಮಾರ್‌ ಅವರು ನಯನತಾರಾ ತಂದೆಯಾಗಿ ಕಾಣಿಸಿಕೊಂಡಿದ್ದಾರೆ. ರೇಣುಕಾ, ಜೈ, ಸತ್ಯರಾಜ್, ಕೆ ಎಸ್ ರವಿಕುಮಾರ್, ರೆಡಿನ್ ಕಿಂಗ್‌ಸ್ಲೀ, ಕುಮಾರಿ ಸಚ್ಚು, ಕಾರ್ತಿಕ್ ಕುಮಾರ್, ಸುರೇಶ್ ಚಕ್ರವರ್ತಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಸತ್ಯನ್ ಸೂರ್ಯನ್ ಛಾಯಾಗ್ರಹಣ, ಪ್ರವೀಣ್ ಆಂಟೋನಿ ಸಂಕಲನ, ಚಿತ್ರಕ್ಕಿದೆ. Zee Studios, Trident Arts ಮತ್ತು Naad S Studios ಸಿನಿಮಾವನ್ನು ಪ್ರಸ್ತುತ ಪಡಿಸುತ್ತಿದೆ. ಡಿಸೆಂಬರ್‌ 1 ರಂದು ಸಿನಿಮಾ ತೆರೆಕಾಣಲಿದೆ.

LEAVE A REPLY

Connect with

Please enter your comment!
Please enter your name here