‘ಕೆಜಿಎಫ್‌’ ಚಿತ್ರದೊಂದಿಗೆ ಪ್ಯಾನ್‌ ಇಂಡಿಯಾ ಸ್ಟಾರ್‌ ಆಗಿರುವ ನಟ ಯಶ್‌ ಇಂದು 35ನೇ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ. ತಮ್ಮ ಹೀರೋನ ಹುಟ್ಟುಹಬ್ಬದ ಅಂಗವಾಗಿ ಹೊಂಬಾಳೆ ಫಿಲ್ಮ್ಸ್‌ ‘ಕೆಜಿಎಫ್‌ 2’ ನೂತನ ಪೋಸ್ಟರ್‌ ಬಿಡುಗಡೆಗೊಳಿಸಿದೆ. ಭಾರತೀಯ ಚಿತ್ರರಂಗದ ಹಲವರು ಯಶ್‌ಗೆ ಶುಭ ಹಾರೈಸಿದ್ದಾರೆ.

ನಟ ಯಶ್‌ ಇಂದು 35ನೇ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ಧಾರೆ. ‘ಕೆಜಿಎಫ್‌’ ನಂತರ ಪ್ಯಾನ್‌ ಇಂಡಿಯಾ ಸ್ಟಾರ್‌ ಹೀರೋ ಆಗಿರುವ ಅವರಿಗೀಗ ಭಾರತದಾದ್ಯಂತ ಅಭಿಮಾನಿಗಳು ಸೃಷ್ಟಿಯಾಗಿದ್ದಾರೆ. ಈ ಚಿತ್ರದ ಮೂಲಕ ಭಾರತೀಯ ಸಿನಿಮಾರಂಗಕ್ಕೆ ಪರಿಚಯವಾದ ಅವರಿಗೆ ದೇಶದ ಹಲವೆಡೆಯಿಂದ ಶುಭಾಶಯಗಳು ಸಂದಿವೆ. ದಕ್ಷಿಣದ ತೆಲುಗು, ತಮಿಳು, ಮಲಯಾಳಂ ಚಿತ್ರರಂಗ ಹಾಗೂ ಬಾಲವುಡ್‌ನ ಹಲವರು ಟ್ವಿಟರ್‌, ಇನ್‌ಸ್ಟಾಗ್ರಾಮ್‌ ಮೂಲಕ ಯಶ್‌ರಿಗೆ ಶುಭ ಹಾರೈಸಿದ್ದಾರೆ. ಇನ್ನು ಅಭಿಮಾನಿಗಳಿಂದ ಸಾವಿರಾರು ಸಂಖ್ಯೆಯಲ್ಲಿ ಶುಭ ಸಂದೇಶಗಳು ಸಂದಿವೆ. ಇನ್ನು ಹುಟ್ಟುಹಬ್ಬದ ಅಂಗವಾಗಿ ‘ಕೆಜಿಎಫ್‌ 2’ ಸಿನಿಮಾದ ನೂತನ ಪೋಸ್ಟರ್‌ ಬಿಡುಗಡೆಯಾಗಿದೆ. ಈ ಸಿನಿಮಾದ ನಿರ್ಮಾಣ ಸಂಸ್ಥೆ ಹೊಂಬಾಳೆ ಫಿಲ್ಮ್ಸ್‌, ನಿರ್ದೇಶಕ ಪ್ರಶಾಂತ್‌ ನೀಲ್‌ ಹಾಗೂ ಚಿತ್ರತಂಡದ ಹಲವರು ತಮ್ಮ ಟ್ವಿಟರ್‌ ಅಕೌಂಟ್‌ಗಳಲ್ಲಿ ಈ ಪೋಸ್ಟರ್‌ ಹಂಚಿಕೊಂಡು ಯಶ್‌ರಿಗೆ ಶುಭ ಕೋರಿದ್ದಾರೆ.

ಅವರ ಬಹುನಿರೀಕ್ಷಿತ ‘ಕೆಜಿಎಫ್‌ 2’ ಸಿನಿಮಾ ಏಪ್ರಿಲ್‌ 14ರಂದು ತೆರೆಕಾಣಲಿದೆ. ಹುಟ್ಟುಹಬ್ಬದ ದಿನವಾದ ಇಂದು ಈ ಬಗ್ಗೆ ಮಾತನಾಡಿರುವ ಯಶ್‌, ‘ಕೆಜಿಎಫ್‌ 2 ಸಿನಿಮಾದ ಬಿಡುಗಡೆಯಲ್ಲಿ ಯಾವುದೇ ಬದಲಾವಣೆಗಳಿಲ್ಲ. ಅಭಿಮಾನಿಗಳು ನಮ್ಮ ಸಿನಿಮಾವನ್ನು ಕಾತುರದಿಂದ ಎದುರು ನೋಡುತ್ತಿದ್ದಾರೆ. ಅವರೆಲ್ಲರಿಗೂ ನಮ್ಮ ಚಿತ್ರತಂಡದ ಪರವಾಗಿ ಧನ್ಯವಾದಗಳು. ನಿಮ್ಮ ನಿರೀಕ್ಷೆ ಹುಸಿಮಾಡುವುದಿಲ್ಲ. ನಮ್ಮ ಮೇಲಿಟ್ಟಿರುವ ಪ್ರೀತಿ, ಅಭಿಮಾನಕ್ಕೆ ಋಣಿಯಾಗಿರುತ್ತೇವೆ” ಎಂದಿದ್ದಾರೆ. ಬಾಲಿವುಡ್‌ನ ಸಿನಿಮಾ ವಿಶ್ಲೇಷಕ ತರಣ್‌ ಆದರ್ಶ್‌ ‘ಕೆಜಿಎಫ್‌ 2’ ನೂತನ ಪೋಸ್ಟರ್‌ ಹಂಚಿಕೊಂಡು, ಚಿತ್ರದ ಕುರಿತು ಅಪ್‌ಡೇಟ್ಸ್‌ ನೀಡಿದ್ದಾರೆ. ಕನ್ನಡ ಸೇರಿದಂತೆ ದಕ್ಷಿಣ ಭಾರತ ಹಾಗೂ ಬಾಲಿವುಡ್‌ನ ಪ್ರಮುಖರು ಯಶ್‌ಗೆ ಶುಭ ಹಾರೈಸಿದ್ದಾರೆ. ಕಲರ್ಸ್‌ ಕನ್ನಡ ವಾಹಿನಿ ವಿಶೇಷ ವೀಡಿಯೋ ಮೂಲಕ ಶುಭ ಹೇಳಿದರೆ ಅಭಿಮಾನಿಗಳು ವಿಶಿಷ್ಟ ವಿನ್ಯಾಸದ ಪೋಸ್ಟರ್‌ಗಳ ಮೂಲಕ ಯಶ್‌ಗೆ ಒಳಿತನ್ನು ಹಾರೈಸಿದ್ದಾರೆ.

https://twitter.com/prashanth_neel/status/1479656605947998208

LEAVE A REPLY

Connect with

Please enter your comment!
Please enter your name here