ಅಮೀರ್‌ ಖಾನ್‌ರ ‘ಲಾಲ್‌ ಸಿಂಗ್‌ ಛಡ್ಡಾʼ ಮತ್ತು ಯಶ್‌ರ ‘ಕೆಜಿಎಫ್‌-2ʼ ಚಿತ್ರ ಒಂದೇ ದಿನ ಬಿಡುಗಡೆಯಾಗಲಿವೆ. ಈ ಎರಡೂ ಚಿತ್ರಗಳು 2022ರ ಏಪ್ರಿಲ್‌ 14ರಂದು ತೆರೆಗಪ್ಪಳಿಸಲಿವೆ. ಈ ಮೂಲಕ ಯಶ್‌ ಮತ್ತು ಅಮೀರ್‌ ಖಾನ್‌ ಸಿನಿಮಾಗಳ ನಡುವೆ ದೊಡ್ಡ ಫೈಟ್‌ ಉಂಟಾಗಲಿದೆ.

ಯಶ್‌ ಮತ್ತು ಸಂಜಯ್‌ ದತ್ತ್‌ರ ‘ಕೆಜಿಎಫ್‌ʼ ಚಾಪ್ಟರ್‌ 2 ರಿಲೀಸ್‌ಗೆ ಇಡೀ ದೇಶವೇ ಕಾತುರದಿಂದ ಕಾಯುತ್ತಿದೆ. ಇದೊಂದು ಪ್ಯಾನ್‌ ಇಂಡಿಯಾ ಸಿನಿಮಾ ಆಗಿದ್ದು, ಸಿನಿಮಾ ರಿಲೀಸ್‌ ಆಗುವ ಸಮಯದಲ್ಲಿ ಬೇರೆ ಭಾಷೆ ಸಿನಿಮಾಗಳು ತಮ್ಮ ಸಿನಿಮಾಗಳನ್ನು ರಿಲೀಸ್‌ ಮಾಡಲು ಹಿಂದೆ ಮುಂದೆ ನೋಡುತ್ತವೆ. ಅಷ್ಟರ ಮಟ್ಟಿಗೆ ‘ಕೆಜಿಎಫ್‌ʼ ಚಿತ್ರ ಹವಾ ಸೃಷ್ಟಿಸಿದೆ. ಆದರೆ ಬಾಲಿವುಡ್‌ನ ಅಮೀರ್‌ ಖಾನ್‌ ಅಭಿನಯದ ‘ಲಾಲ್‌ ಸಿಂಗ್‌ ಛಡ್ಡಾʼ ಚಿತ್ರವು ‘ಕೆಜಿಎಫ್‌-2ʼ ರಿಲೀಸ್‌ ದಿನದಂದೇ, ಅಂದರೆ ಏಪ್ರಿಲ್‌ 14ರಂದು ಬಿಡುಗಡೆಯ ದಿನಾಂಕವನ್ನು ನಿರ್ಧರಿಸಿದೆ. ಈ ಮೂಲಕ ಸಿನಿಪ್ರೇಕ್ಷಕ ಸಿನಿಮಾ ವೀಕ್ಷಣೆಯ ಆಯ್ಕೆಯಲ್ಲಿ ಗೊಂದಲಕ್ಕೊಳಗಾಗುವ ಸಾಧ್ಯತೆಗಳಿವೆ.

ಪ್ರಶಾಂತ್‌ ನೀಲ್‌ ನಿರ್ದೇಶನದ ‘ಕೆಜಿಎಫ್‌ʼ ಚಿತ್ರ ರಿಲೀಸ್‌ ಆದಾಗ ಶಾರುಖ್‌ ಖಾನ್‌ರ ‘ಜಿರೋʼ ಚಿತ್ರ ಕೂಡ ತೆರೆ ಕಂಡಿದ್ದು, ಚಿತ್ರ ‘ಕೆಜಿಎಫ್‌ʼ ಮುಂದೆ ಡಲ್‌ ಹೊಡೆದಿದ್ದನ್ನು ನೆನಪಿಸಿಕೊಳ್ಳಬಹುದು. ಈಗ ಅಮೀರ್‌ ಖಾನ್‌, ಕರೀನಾ ಕಪೂರ್‌ ಖಾನ್‌ ಅಭಿನಯದ ಮತ್ತು ಅದ್ವಿತಿ ಚಂದನ್‌ ನಿರ್ದೇಶನದ ‘ಲಾಲ್‌ ಸಿಂಗ್‌ ಛಡ್ಡಾʼ ಚಿತ್ರ ಏಪ್ರಿಲ್‌ 14ರಂದೇ ಬಿಡುಗಡೆಗೊಳ್ಳುತ್ತಿದೆ. ಒಂದೇ ದಿನ ಇಬ್ಬರು ದೊಡ್ಡ ಹೀರೋಗಳ ಚಿತ್ರಗಳನ್ನು ಸಿನಿರಸಿಕ ಹೇಗೆ ಸ್ವೀಕರಿಸುತ್ತಾನೆ ಎಂದು ಕಾದು ನೋಡಬೇಕಿದೆ.

Previous articleರಾಣಿ ಮುಖರ್ಜಿ ಹಿಂದಿ ಸಿನಿಮಾ ಪಯಣಕ್ಕೆ 25 ವರ್ಷ; ವಯಸ್ಸಿನ ಗುಟ್ಟು ಬಿಟ್ಟು ಕೊಡಬೇಡಿ ಎಂದ ‘ಬಬ್ಲಿ’ ನಟಿ
Next article‘ದೇವರಿಗೆ ಸಂಗೀತ ಸಂಯೋಜಿಸುತ್ತಿದ್ದೇನೆ ಎಂದು ಭಾವಿಸಿ ಕೆಲಸ ಮಾಡುತ್ತೇನೆ’: ರವಿ ಬಸ್ರೂರು

LEAVE A REPLY

Connect with

Please enter your comment!
Please enter your name here