ನಟ ಸುದೀಪ್‌ ಪರ್ಸನಲ್‌ ಬಾಡಿಗಾರ್ಡ್‌ ಕಿಚ್ಚ ಕಿರಣ್‌ ಬಾಲಿವುಡ್‌ ತಾರೆ ದೀಪಿಕಾ ಪಡುಕೋಣೆ ಅವರ ಅಪ್ಪಟ ಅಭಿಮಾನಿ. ನಟ ರಣವೀರ್‌ ಸಿಂಗ್‌ ಅವರು ಪತ್ನಿ ದೀಪಿಕಾಗೆ ವೀಡಿಯೋ ಕಾಲ್‌ ಮಾಡಿ ಅಭಿಮಾನಿಯನ್ನು ಪರಿಚಯಿಸಿದ ವೀಡಿಯೋ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ.

ಬಾಲಿವುಡ್‌ ನಟ ರಣವೀರ್‌ ಸಿಂಗ್‌ ಮೊನ್ನೆ ತಮ್ಮ ’83’ ಹಿಂದಿ ಸಿನಿಮಾ ಪ್ರೊಮೋಷನ್‌ಗೆಂದು ಬೆಂಗಳೂರಿಗೆ ಬಂದಿದ್ದರು. ಈ ಚಿತ್ರದ ಕನ್ನಡ ಅವತರಣಿಕೆಯನ್ನು ನಟ ಸುದೀಪ್‌ ಪ್ರಸೆಂಟ್‌ ಮಾಡುತ್ತಿದ್ದಾರೆ. ಪ್ರಚಾರದ ಸಂದರ್ಭದಲ್ಲಿ ಕಿಚ್ಚ ಸುದೀಪ್‌ ತಮ್ಮ ಪರ್ಸನಲ್‌ ಬಾಡಿಗಾರ್ಡ್‌ ಕಿರಣ್‌ ಅವರನ್ನು ನಟ ರಣವೀರ್‌ಗೆ ಪರಿಚಯಿಸಿದ್ದಾರೆ. ಇದಕ್ಕೆ ಕಾರಣವೂ ಇದೆ. ರಣವೀರ್‌ ಸಿಂಗ್‌ ತಾರಾಪತ್ನಿ ದೀಪಿಕಾ ಪಡುಕೋಣೆ ಅವರ ಅಪ್ಪಟ ಅಭಿಮಾನಿ ಕಿಚ್ಚ ಕಿರಣ್‌. ತಮ್ಮ ಬಲ ಮೊಣಕೈ ಮೇಲೆ ದೀಪಿಕಾ ಪಡುಕೋಣೆ ಹೆಸರನ್ನು ಅವರು ಹಚ್ಚೆ ಹಾಕಿಸಿಕೊಂಡಿದ್ದಾರವರು. ಇದನ್ನು ನೋಡಿದ ರಣವೀರ್‌ ಸಿಂಗ್‌ ಕೂಡಲೇ ಪತ್ನಿ ದೀಪಿಕಾಗೆ ವೀಡಿಯೋ ಕಾಲ್‌ ಮಾಡಿ ಕಿರಣ್‌ರನ್ನು ಪರಿಚಯಿಸಿದ್ದಾರೆ. ತಮ್ಮ ನೆಚ್ಚಿನ ನಟಿಯೊಂದಿಗೆ ಮಾತನಾಡಿದ ಸಂಭ್ರಮ ಕಿಚ್ಚ ಕಿರಣ್‌ ಅವರದ್ದು. ಕನ್ನಡ ನಾಡಿನ ಪಡುಕೋಣೆ ಮೂಲದ ದೀಪಿಕಾ ಕೂಡ ಅಭಿಮಾನಿಯೊಂದಿಗೆ ಆತ್ಮೀಯವಾಗಿ ಮಾತನಾಡಿದ್ದಾರೆ. ಈ ವೀಡಿಯೋ ಇಂದು ಹೊರಬಿದ್ದಿದ್ದು, ಸೋಷಿಯಲ್‌ ಮೀಡಿಯಾದಲ್ಲಿ ಓಡಾಡುತ್ತಿದೆ. ಸುದೀಪ್‌ ಅವರೊಂದಿಗೆ ಹಲವು ವರ್ಷಗಳಿಂದ ಇರುವ ಕಿರಣ್‌ ಅವರು ‘ಕಿಚ್ಚ ಕಿರಣ್‌’ ಎಂದೇ ಕರೆಸಿಕೊಳ್ಳುತ್ತಾರೆ. ನಟನ ಜೊತೆಗಿನ ಆತ್ಮೀಯ ಒಡನಾಟದ ಬಗ್ಗೆ ಕಿರಣ್‌ ಹಿಂದೊಮ್ಮೆ ಹೇಳಿಕೊಂಡಿದ್ದರು. ಈಗ ಸುದೀಪ್‌ ಕಾರಣದಿಂದಾಗಿ ನೆಚ್ಚಿನ ನಟಿಯೊಂದಿಗೆ ಮಾತನಾಡುವ ಅವಕಾಶ ಅವರದಾಗಿದೆ.

LEAVE A REPLY

Connect with

Please enter your comment!
Please enter your name here