ಇತ್ತೀಚೆಗೆ ಹೆಚ್ಚು ಸುದ್ದಿಯಲ್ಲಿರದ ನಟಿ ಐಶ್ವರ್ಯಾ ರೈ ಪನಾಮಾ ಪೇಪರ್ಸ್‌ ಪ್ರಕರಣಕ್ಕೆ ಸಂಬಂಧಿಸಿದಂತೆ ಸುದ್ದಿಯಾಗಿದ್ದಾರೆ. ಇಂದು ದಿಲ್ಲಿ ED ಕಚೇರಿಗೆ ತೆರಳಿ ಹಳೆಯ ಪ್ರಕರಣಕ್ಕೆ ಸಂಬಂಧಿಸಿದಂತೆ ಅವರು ವಿವರಣೆ ನೀಡಿದ್ದಾರೆ.

ಕನ್ನಡ ಮೂಲದ ಬಾಲಿವುಡ್‌ ತಾರೆ ಐಶ್ವರ್ಯಾ ರೈ ಇತ್ತೀಚೆಗೆ ಸಿನಿಮಾದಿಂದ ದೂರವೇ ಉಳಿದಿದ್ದರು. ಪನಾಮಾ ಪ್ರಕರಣಕ್ಕೆ ಸಂಬಂಧಿಸಿದಂತೆ ಈ ಹಿಂದೆ ಅವರಿಗೆ ಎರಡು ಬಾರಿ ED (Enforcement Directorate)ಯಿಂದ ನೋಟಿಸ್‌ ಜಾರಿಯಾಗಿತ್ತು ಎನ್ನಲಾಗಿದೆ. ಆಗ ಕಾಲಾವಕಾಶ ಕೋರಿದ್ದ ನಟಿ ಇಂದು ದಿಲ್ಲಿ ED ಕಚೇರಿಗೆ ತೆರಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆ ಎದುರಿಸಿದ್ದಾರೆ. ಫಾರಿನ್‌ ಎಕ್ಸ್‌ಚೇಂಜ್‌ ಮ್ಯಾನೇಜ್‌ಮೆಂಟ್‌ ಆಕ್ಟ್‌, 1999 ಅಡಿ ನಟಿ ಐಶ್ವರ್ಯಾ ರೈ ಮತ್ತು ಅವರ ತಾರಾಪತಿ ಅಭಿಷೇಕ್‌ ಬಚ್ಚನ್‌ ಅವರಿಗೆ ED ಸಮನ್ಸ್‌ ಜಾರಿ ಮಾಡಿತ್ತು. 2016ರ ಪನಾಮಾ ಪೇಪರ್ಸ್‌ ಪ್ರಕರಣದಲ್ಲಿ ಭಾರತದ ವಿವಿದ ಕ್ಷೇತ್ರಗಳಲ್ಲಿನ ಐನೂರು ಮಂದಿಯನ್ನು ಗುರುತಿಸಲಾಗಿತ್ತು. ಈ ಪಟ್ಟಿಯಲ್ಲಿ ಬಾಲಿವುಡ್‌ನ ಹಲವು ತಾರೆಯರ ಹೆಸರುಗಳಿವೆ. ಹಿರಿಯ ನಟ ಅಮಿತಾಭ್‌ ಬಚ್ಚನ್‌ ಮತ್ತು ಅವರ ಸೊಸೆ, ನಟಿ ಐಶ್ವರ್ಯಾ ರೈ ಕೂಡ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆ ಎದುರಿಸುತ್ತಿದ್ಧಾರೆ.

ಪನಾಮಾ ಮೂಲದ ಸಂಸ್ಥೆ ಮೊಸ್ಯಾಕ್‌ ಫಾನ್ಸೆಕಾದಲ್ಲಿ ಐಶ್ವರ್ಯಾ ರೈ ಮತ್ತು ಅವರ ತಂದೆ, ತಾಯಿ ಮತ್ತು ಸಹೋದರನ ಹೂಡಿಕೆಯಿದೆ ಎನ್ನಲಾಗಿತ್ತು. 2005ರ ಮೇ 14ರಂದು 50,000 ಡಾಲರ್‌ ಮೂಲ ಬಂಡವಾಳದೊಂದಿಗೆ ಈ ನಾಲ್ವರು ಸಂಸ್ಥೆಗೆ ನಿರ್ದೇಶಕರಾಗಿದ್ದರು. ಒಂದರೆಡು ತಿಂಗಳಲ್ಲಿ ಐಶ್ವರ್ಯಾ ರೈ ಅವರನ್ನು ನಿರ್ದೇಶಕಿ ಸ್ಥಾನದಿಂದ ಕೈಬಿಟ್ಟು ಶೇರ್‌ ಹೋಲ್ಡರ್‌ ಎಂದು ಕರೆಯಲಾಗಿತ್ತು. ಅಭಿಷೇಕ್‌ ಬಚ್ಚನ್‌ ಅವರನ್ನು ವರಿಸಿದ ಒಂದು ವರ್ಷದ ನಂತರ 2008ರಲ್ಲಿ ಮೊಸ್ಯಾಕ್‌ ಫಾನ್ಸೆಕಾ ಮುಚ್ಚಿದ ವರದಿಯಿದೆ. ತೆರಿಗೆ ಉಳಿಸುವ ಸಲುವಾಗಿ ವಿದೇಶಿ ಸಂಸ್ಥೆಯಲ್ಲಿ ಹೂಡಿಕೆ ಮಾಡಿದ ಪ್ರಕರಣವಿದು. ತೆರಿಗೆ ಅಧಿಕಾರಿಗಳು ಹೇಳುವಂತೆ ಪನಾಮಾ ಪ್ರಕರಣದಿಂದ ಸುಮಾರು 20,000 ಕೋಟಿ ರೂಪಾಯಿಯಷ್ಟು ಹಣವನ್ನು ತೆರಿಗೆಯಿಂದ ವಂಚಿಸಲಾಗಿದೆ ಎನ್ನಲಾಗಿದೆ.

Previous article‘ಕಿಚ್ಚ’ ಕಿರಣ್‌ ಅವರ ದೀಪಿಕಾ ಪಡುಕೋಣೆ ಅಭಿಮಾನ; ನಟಿಯ ಜೊತೆ ಮಾತನಾಡಿದ ವೀಡಿಯೋ ವೈರಲ್‌
Next articleಸ್ನೇಹಿತರಿಂದ, ಸ್ನೇಹಿತರಿಗಾಗಿ ‘ಬಡವ ರಾಸ್ಕಲ್‌’; ಇದು ಧನಂಜಯ ನಟನೆ, ನಿರ್ಮಾಣದ ಸಿನಿಮಾ

LEAVE A REPLY

Connect with

Please enter your comment!
Please enter your name here