Martin Scorsese ನಿರ್ದೇಶನದ ‘Killers of the Flower Moon’ ಸಿನಿಮಾದ ಟೀಸರ್ ಬಿಡುಗಡೆಯಾಗಿದೆ. ಈ ಚಿತ್ರಕ್ಕಾಗಿ ಮೂವತ್ತು ವರ್ಷಗಳ ನಂತರ ನಟರಾದ Leonardo DiCaprio ಮತ್ತು Robert De Niro ಜೊತೆಯಾಗಿದ್ದಾರೆ. ನಾಳೆ (ಮೇ 20) ಕೇನ್ಸ್‌ ಚಿತ್ರೋತ್ಸವದಲ್ಲಿ ಸಿನಿಮಾ ಪ್ರೀಮಿಯರ್‌ ಆಗಲಿದೆ.

Martin Scorsese ನಿರ್ದೇಶನದ ‘Killers of the Flower Moon’ ಸಿನಿಮಾದ ಟೀಸರ್ ಬಿಡುಗಡೆಯಾಗಿದೆ. ಚಿತ್ರದ ನಾಯಕ ನಟ Leonardo DiCaprio ಟ್ವಿಟರ್‌ನಲ್ಲಿ ಟೀಸರ್‌ ಹಂಚಿಕೊಂಡಿದ್ದಾರೆ. ನಾಳೆ ಮೇ 20ರಂದು 76ನೇ ಕೇನ್ಸ್‌ ಚಿತ್ರೋತ್ಸವದಲ್ಲಿ ಚಿತ್ರದ ಮೊದಲ ಪ್ರೀಮಿಯರ್‌ ನಡೆಯಲಿದೆ. 1920ರಲ್ಲಿ ಅಮೇರಿಕಾದಲ್ಲಿ ನಡೆದ ಸರಣಿ ಕೊಲೆಗಳ ಸುತ್ತ ಹೆಣೆದ ಕತೆಯಿದು. ಈ ಚಿತ್ರಕ್ಕಾಗಿ ಮೂವತ್ತು ವರ್ಷಗಳ ನಂತರ ನಟರಾದ Leonardo DiCaprio ಮತ್ತು Robert De Niro ಜೊತೆಯಾಗಿದ್ದಾರೆ. ಈ ಹಿಂದೆ 1993ರಲ್ಲಿ ‘ದಿಸ್ ಬಾಯ್ಸ್ ಲೈಫ್’ ಚಿತ್ರದಲ್ಲಿ ಇಬ್ಬರೂ ಒಟ್ಟಿಗೆ ಕೆಲಸ ಮಾಡಿದ್ದರು.

ನೈಜ ಘಟನೆಗಳನ್ನು ಆಧರಿಸಿದ ಟೀಸರ್ 1920ರ ಒಕ್ಲಹೋಮಾದ ಒಸಾಜ್ ನೇಷನ್ ಸದಸ್ಯರ ಸರಣಿ ಕೊಲೆಗಳ ಕತೆ ಹೇಳುತ್ತದೆ. ತೈಲವನ್ನು ಪತ್ತೆ ಹಚ್ಚಲು ಹೊಸದಾಗಿ ರಚನೆಯಾದ Federal Bureau of Investigation (ಎಫ್‌ಬಿಐ) ವಿಷಯವನ್ನು ಸಹ ಪರಿಶೀಲಿಸುವಂತಿದೆ. Leonardo ಸ್ಥಳೀಯ ಮಹಿಳೆಯನ್ನು (Lily Gladstone) ಮದುವೆಯಾಗುವ ಪಾತ್ರದಲ್ಲಿ ನಟಿಸಿದ್ದು, ಅವಳು ಉಳಿದ ಸಮುದಾಯದಿಂದ ಹೆಚ್ಚಿನ ತಾರತಮ್ಯ ಎದುರಿಸುತ್ತಾಳೆ. ಟೀಸರ್‌ನಲ್ಲಿ ‘ಈ ಚಿತ್ರದಲ್ಲಿ ತೋಳಗಳನ್ನು ಹುಡುಕಬಹುದೇ’ ಎನ್ನುವ ಸಾಲು ಮತ್ತೆ ಮತ್ತೆ ಕೇಳಿಸುತ್ತದೆ. ಮೂರು ಗಂಟೆ 26 ನಿಮಿಷಗಳ ಚಿತ್ರವು ಮಾರ್ಟಿನ್ ಅವರ ದೀರ್ಘ ಚಲನಚಿತ್ರಗಳಲ್ಲೊಂದು. ಡೇವಿಡ್ ಗ್ರ್ಯಾನ್ ಅವರ 2017ರ ಪುಸ್ತಕ Killers of the Flower Moon: The Osage Murders and the Birth FBIನಿಂದ ಅಳವಡಿಸಲಾಗಿದೆ. ಈ ಸಿನಿಮಾ ಮುಂದಿನ ವರ್ಷಕ್ಕೆ ಪ್ರಬಲ ಆಸ್ಕರ್ ಸ್ಪರ್ಧಿ ಎನ್ನಲಾಗಿದೆ. ಇದೇ ವರ್ಷ ಅಕ್ಟೋಬರ್‌ 6ರಂದು ಸಿನಿಮಾ ತೆರೆಕಾಣಲಿದೆ.

LEAVE A REPLY

Connect with

Please enter your comment!
Please enter your name here