ಆಕ್ಷನ್‌ – ಅಡ್ವೆಂಚರ್‌ ಸಿನಿಮಾ ‘Mission Impossible Dead Reckoning part1’ ಟ್ರೈಲರ್‌ ಬಿಡುಗಡೆಯಾಗಿದೆ. ಅಪಾಯಕಾರಿ ಆಕ್ಷನ್‌ – ಅಡ್ವೆಂಚರ್‌ ಸನ್ನಿವೇಶಗಳೊಂದಿಗೆ ಟಾಮ್‌ ಕ್ರ್ಯೂಸ್‌ ತೆರೆಗೆ ಮರಳುತ್ತಿದ್ದಾರೆ. ಸಿನಿಮಾದ ಮೊದಲ ಭಾಗ ಜುಲೈ 12ರಂದು ಬಿಡುಗಡೆಯಾಗಲಿದ್ದು ಸೆಕೆಂಡ್‌ ಪಾರ್ಟ್‌ 2024ರ ಜೂನ್ 28ರಂದು ತೆರೆಗೆ ಬರಲಿದೆ.

ಆಕ್ಷನ್‌ – ಅಡ್ವೆಂಚರ್‌ ಹಾಲಿವುಡ್‌ ಸಿನಿಮಾ ‘Mission Impossible Dead Reckoning part1’ ಟ್ರೈಲರ್‌ ಬಿಡುಗಡೆಯಾಗಿದೆ. Christopher McQuarrie ಬರೆದು ನಿರ್ದೇಶಿಸಿರುವ ಚಿತ್ರದಲ್ಲಿ Tom Cruise ಅಪಾಯಕಾರಿ ಆಯುಧ ಪತ್ತೆಹಚ್ಚುವ ಹೀರೋ ಆಗಿ ತೆರೆಗೆ ಹಿಂದಿರುಗಿದ್ದಾರೆ. ಇದು ಅತ್ಯಂತ ಸವಾಲಿನ ಮಿಷನ್‌ ಎನ್ನುವುದು ಟ್ರೈಲರ್‌ನಿಂದ ತಿಳಿದುಬರುತ್ತದೆ. ಏಜೆಂಟ್ Ethan Hunt ತನ್ನ ಬೈಕನ್ನು ಪ್ರಪಾತದ ತುದಿಯಲ್ಲಿ ನಿಲ್ಲಿಸುವುದರೊಂದಿಗೆ ಟ್ರೈಲರ್‌ ಪ್ರಾರಂಭವಾಗುತ್ತದೆ. ಈ ಮಿಷನ್ ತುಂಬಾ ದುಬಾರಿಯಾಗಲಿದೆ ಎಂದು ಏಜೆಂಟ್ Eugene Kittridge, Ethanಗೆ ಎಚ್ಚರಿಕೆ ನೀಡುತ್ತಾನೆ, ಏಕೆಂದರೆ ಆತನನ್ನು ಒಳಗೊಂಡ ತಂಡವು ಮನುಕುಲವನ್ನು ನಾಶ ಮಾಡುವ ಆಯುಧವನ್ನು ಪತ್ತೆಹಚ್ಚಲು ಪ್ರಯತ್ನಿಸುತ್ತಿರುತ್ತದೆ.

Tom ಜೊತೆಗೆ ನಟರಾದ Ving Rhames, Simon Pegg, Rebecca Ferguson ಮತ್ತು Vanessa Kirby ಸಹ ಸೇರಿಕೊಂಡಿದ್ದಾರೆ. ಆಕ್ಷನ್ ಟ್ರೈಲರ್ ಕಥಾವಸ್ತು, ಮಿಷನ್ ಬಗ್ಗೆ ಯಾವುದೇ ಪ್ರಮುಖ ವಿವರಗಳನ್ನು ಬಹಿರಂಗಪಡಿಸದಿದ್ದರೂ ಸಹ, ಇದು ಕೆಲವು jaw – dropping ಸೆಟ್ ತುಣುಕುಗಳೊಂದಿಗೆ ರೋಮಾಂಚಕ ಕಥಾನಕ ಎನ್ನುವ ಭರವಸೆ ಮೂಡಿಸುತ್ತದೆ. ಟ್ರೈಲರ್ ಬಿಡುಗಡೆಯಾದ ನಂತರ ಅಭಿಮಾನಿಗಳು ಉತ್ಸಾಹದಿಂದ ಪ್ರತಿಕ್ರಿಯಿಸಿದ್ದಾರೆ. Tom Cruies ನಿರ್ಮಾಣದ ಸಿನಿಮಾ‌ ಜುಲೈ 12ರಂದು ಬಿಡುಗಡೆಯಾಗಲಿದೆ. ಸೆಕೆಂಡ್‌ ಪಾರ್ಟ್‌ 2024ರ ಜೂನ್ 28ರಂದು ಬಿಡುಗಡೆಯಾಗಲಿದೆ.

LEAVE A REPLY

Connect with

Please enter your comment!
Please enter your name here