‘ಕೂಸೆ ಮುನಿಸಾಮಿ ವೀರಪ್ಪನ್’ ತಮಿಳು ವೆಬ್‌ ಸರಣಿ ಟೀಸರ್‌ ಬಿಡುಗಡೆಯಾಗಿದೆ. ವೀರಪ್ಪನ್‌ ಮಾತನಾಡಿರುವ ಕೆಲವು ವೀಡಿಯೋ ಕ್ಲಿಪ್‌ಗಳು ಸರಣಿಯಲ್ಲಿವೆ. ಸರಣಿಯು ಡಿಸೆಂಬರ್ 8ರಿಂದ ಮೂಲ ತಮಿಳು ಸೇರಿದಂತೆ ಕನ್ನಡ, ಹಿಂದಿ ಮತ್ತು ತೆಲುಗು ಭಾಷೆಗಳಲ್ಲಿ ZEE5ನಲ್ಲಿ ಸ್ಟ್ರೀಮ್ ಆಗಲಿದೆ.

ZEE5 ‘ಕೂಸೆ ಮುನಿಸಾಮಿ ವೀರಪ್ಪನ್’ ಶೀರ್ಷಿಕೆಯ ಮೂಲ ದಾಖಲೆಯ ತಮಿಳು ಸರಣಿಯನ್ನು ಪ್ರಕಟಿಸಿದೆ. ಈ ಸರಣಿಯು ನರಹಂತಕ ವೀರಪ್ಪನ್‌ನ ನಿಗೂಢ ವ್ಯಕ್ತಿತ್ವ ಮತ್ತು ಅವನ ಅಪರಾಧ ಸರಣಿಗಳನ್ನು ತೆರೆದಿಡಲಿದೆ. ವಿಶೇಷವೆಂದರೆ ವೀರಪ್ಪನ್‌ ಮಾತನಾಡಿರುವ ಕೆಲವು ವೀಡಿಯೋ ಕ್ಲಿಪ್‌ಗಳು ಸರಣಿಯಲ್ಲಿವೆ. ಅವನ ಸುತ್ತ ನಡೆದ ಕೆಲವು ನೈಜ ನಿಗೂಢ ಘಟನೆಗಳ ಸಂಪೂರ್ಣ ಕಥೆಗಳನ್ನು ತಾನೇ ಬಹಿರಂಗಪಡಿಸಿದ್ದಾನೆ. ಸರಣಿಯಲ್ಲಿ ಅವನನ್ನು ಸೆರೆಹಿಡಿಯಲು ಹಗಲು ರಾತ್ರಿ ಶ್ರಮಿಸಿದ ಅಧಿಕಾರಿಗಳು ಹೇಳಿಕೆಗಳನ್ನು ನೀಡಿದ್ದಾರೆ. ಸುಮಾರು ಮೂರು ದಶಕಗಳ ಕಾಲ ತಮಿಳುನಾಡು, ಕರ್ನಾಟಕ ಮತ್ತು ಕೇರಳದ ಕೆಲವು ಭಾಗಗಳ ದಟ್ಟವಾದ ಕಾಡುಗಳಲ್ಲಿ ಕಾಡುತ್ತಿದ್ದ ಕುಖ್ಯಾತ ದರೋಡೆಕೋರ ವೀರಪ್ಪನ್ ವಿಶೇಷ ಕಾರ್ಯಪಡೆ (STF)ಯ ಕಾರ್ಯಾಚರಣೆಯ ಎನ್‌ಕೌಂಟರ್‌ನಲ್ಲಿ ಸಾವನ್ನಪ್ಪಿದನು.

ಸರಣಿಯನ್ನು ಶರತ್ ಜೋತಿ ನಿರ್ದೇಶಿಸಿದ್ದಾರೆ. ಜಯಚಂದ್ರ ಹಶ್ಮಿ, ಪ್ರಭಾವತಿ ಆರ್‌ ವಿ ಮತ್ತು ವಸಂತ ಬಾಲಕೃಷ್ಣನ್ ರಚಿಸಿದ್ದು, Dheeran Productions ಬ್ಯಾನರ್‌ ಅಡಿಯಲ್ಲಿ ಪ್ರಭಾವತಿ ಆರ್‌ ವಿ ಸರಣಿ ನಿರ್ಮಿಸಿದ್ದಾರೆ. ರಾಜ್ ಕುಮಾರ್ ಪಿಎಂ ಛಾಯಾಗ್ರಹಣ ಮಾಡಿದ್ದು, ಸತೀಶ್ ರಘುನಾಥನ್ ಸಂಗೀತ ಸಂಯೋಜನೆ, ರಾಮ್ ಪಾಂಡಿಯನ್ ಸಂಕಲನ ನಿರ್ವಹಿಸಿದ್ದಾರೆ. ಈ ಸರಣಿಯು ಡಿಸೆಂಬರ್ 8ರಿಂದ ಮೂಲ ತಮಿಳು ಸೇರಿದಂತೆ ಕನ್ನಡ, ಹಿಂದಿ ಮತ್ತು ತೆಲುಗು ಭಾಷೆಗಳಲ್ಲಿ ಸ್ಟ್ರೀಮ್ ಆಗಲಿದೆ.

LEAVE A REPLY

Connect with

Please enter your comment!
Please enter your name here