ಅಭಿಮನ್ಯು ಕತೆ ರಚಿಸಿ ನಿರ್ದೇಶಿಸುತ್ತಿರುವ ‘ಭಾಮಾಕಲಾಪಂ 2’ ತೆಲುಗು ಸಿನಿಮಾದ ಫಸ್ಟ್‌ಲುಕ್‌ ಬಿಡುಗಡೆಯಾಗಿದೆ. ಇದೊಂದು ಕ್ರೈಂ – ಕಾಮಿಡಿ ಜಾನರ್‌ ಎನ್ನಲಾಗಿದ್ದು ಪ್ರಿಯಾಮಣಿ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ.

ಬಹುಭಾಷಾ ನಟಿ ಪ್ರಿಯಾಮಣಿ ಪ್ರಮುಖ ಪಾತ್ರದಲ್ಲಿ ನಟಿಸಿರುವ ‘ಭಾಮಾಕಲಾಪಂ 2’ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ ಎಂದು ಚಿತ್ರದ ನಿರ್ಮಾಪಕರು ತಿಳಿಸಿದ್ದಾರೆ. ಮೊದಲ ಭಾಗವನ್ನು ನಿರ್ದೇಶಿಸಿದ್ದ ಅಭಿಮನ್ಯು ಅವರೇ ಈ ಚಿತ್ರಕ್ಕೆ ಕತೆ ರಚಿಸಿ ನಿರ್ದೇಶನ ಮಾಡುತ್ತಿದ್ದಾರೆ. ಮೊದಲ ಭಾಗವು ನೇರವಾಗಿ OTTಯಲ್ಲಿ ಬಿಡುಗಡೆಯಾಗಿತ್ತು. ಪ್ರಿಯಾಮಣಿ ಈ ಚಿತ್ರದಲ್ಲಿ ಯೂಟ್ಯೂಬರ್ ಮತ್ತು ಪಾಕಶಾಲಾ ಪರಿಣಿತೆಯಾಗಿ ನಟಿಸಿದ್ದಾರೆ. ಚಿತ್ರ ತೆರೆಕಂಡ ವರ್ಷದ ನಂತರ ಸೀಕ್ವೆಲ್‌ ಘೋಷಿಸಿದ್ದ ಚಿತ್ರತಂಡ ಫಸ್ಟ್‌ಲುಕ್‌ ಬಿಡುಗಡೆ ಮಾಡಿದೆ. ಈಗಾಗಲೇ ಸಿನಿಮಾದ ಚಿತ್ರೀಕರಣ ಅಂತಿಮ ಹಂತದಲ್ಲಿದೆ. ಪೋಸ್ಟರ್‌ನಲ್ಲಿ ಪ್ರಿಯಾಮಣಿ, ಕೈಯಲ್ಲಿ ವ್ಯಾಕ್ಯೂಮ್ ಕ್ಲೀನರ್ ಹಿಡಿದಿದ್ದಾರೆ. ಅವರ ಸುತ್ತಲೂ ಗಲಭೆಯ ವಾತಾವರಣ ಸೃಷ್ಟಿಯಾದಂತೆ ಕಾಣಿಸುತ್ತಿದೆ.

ಚಿತ್ರವನ್ನು Dream Farmers ಬ್ಯಾನರ್‌ ಅಡಿಯಲ್ಲಿ ಬಾಪಿನೀಡು ಬಿ ಮತ್ತು ಸುಧೀರ್ ಎಡರ ನಿರ್ಮಾಣ ಮಾಡುತ್ತಿದ್ದಾರೆ. ದೀಪಕ್ ಯರಗೇರಾ ಛಾಯಾಗ್ರಹಣ, ಪ್ರಶಾಂತ್ ಆರ್ ವಿಹಾರಿ ಸಂಗೀತ ಸಂಯೋಜಿಸಿದ್ದಾರೆ. ಸೀರತ್ ಕಪೂರ್, ಬ್ರಹ್ಮಾಜಿ ಮತ್ತು ಶರಣ್ಯ ಚಿತ್ರದ ಇತರೆ ಪ್ರಮುಖ ಪಾತ್ರಗಳಲ್ಲಿ ನಟಿಸಲಿದ್ದಾರೆ. ‘ಈ ಕ್ರೈಂ – ಕಾಮಿಡಿ ಚಿತ್ರಕ್ಕಾಗಿ ಹೈದರಾಬಾದ್‌ನಲ್ಲಿ ಶೂಟಿಂಗ್‌ ನಡೆಸುತ್ತಿದ್ದೇವೆ’ ಎಂದು ಆಗಸ್ಟ್‌ನಲ್ಲಿ ಪ್ರಿಯಾಮಣಿ ತಿಳಿಸಿದ್ದರು. ಸಿನಿಮಾ ಶೀಘ್ರವೇ ತೆರೆಗೆ ಬರಲಿದೆ.

LEAVE A REPLY

Connect with

Please enter your comment!
Please enter your name here