ಶ್ರೀಕಾಂತ್‌ ಕಟಗಿ ನಿರ್ದೇಶನದ ‘ಕ್ಷೇತ್ರಪತಿ’ ಸಿನಿಮಾದ ನೂತನ ಪೋಸ್ಟರ್‌ ಬಿಡುಗಡೆಯಾಗಿದೆ. ನವೀನ್‌ ಶಂಕರ್‌ ಮತ್ತು ಅರ್ಚನಾ ಜೋಯಿಸ್‌ ಪ್ರಮುಖ ಪಾತ್ರಗಳಲ್ಲಿದ್ದಾರೆ. ಇದು ರೈತರ ಸಮಸ್ಯೆಗಳ ಕುರಿತು ಬೆಳಕು ಚೆಲ್ಲುವ ಸಿನಿಮಾ. ಇಂದು ಚಿತ್ರದ ‘ಪಲ್ಲಕ್ಕಿ’ ಹಾಡು ಬಿಡುಗಡೆಯಾಗಿದ್ದು, ಆಗಸ್ಟ್‌ 18ರಂದು ಸಿನಿಮಾ ತೆರೆಕಾಣಲಿದೆ.

ರೈತಾಪಿ ಜನರ ಸಮಸ್ಯೆಗಳ ಮೇಲೆ ಬೆಳಕು ಚೆಲ್ಲುವ ‘ಕ್ಷೇತ್ರಪತಿ’ ಸಿನಿಮಾದ ನೂತನ ಪೋಸ್ಟರ್‌ ಬಿಡುಗಡೆಯಾಗಿದೆ. ಚಿತ್ರದಲ್ಲಿ ಹೀರೋ ನವೀನ್‌ ಶಂಕರ್‌ ವ್ಯವಸ್ಥೆಯನ್ನು ಪ್ರಶ್ನಿಸುವ ‘ಬಸವ’ ಪಾತ್ರದಲ್ಲಿ ನಟಿಸಿದ್ದಾರೆ. ಅರ್ಚನಾ ಜೋಯಿಸ್‌ ಅವರಿಗೆ ಪತ್ರಕರ್ತೆ ‘ಭೂಮಿಕಾ’ ಪಾತ್ರ. ಪ್ರಗತಿಪರ ಪತ್ರಕರ್ತೆಯಾಗಿ ಅರ್ಚನಾ ಪಾತ್ರ ರೈತರ ಹೋರಾಟಕ್ಕೆ ಮಹಿಳಾ ಆಯಾಮ ನೀಡುತ್ತದೆ ಎನ್ನುತ್ತಾರೆ ಚಿತ್ರದ ನಿರ್ದೇಶಕ ಶ್ರೀಕಾಂತ್‌ ಕಟಗಿ. ಇತ್ತೀಚೆಗೆ ತೆರೆಕಂಡ ‘ಹೊಂದಿಸಿ ಬರೆಯಿರಿ’ ಚಿತ್ರದ ಜೋಡಿಯಾಗಿ ಗಮನ ಸೆಳೆದಿದ್ದ ನವೀನ್‌ ಶಂಕರ್‌ ಮತ್ತು ಅರ್ಚನಾ ಜೋಯಿಸ್‌ ಇಲ್ಲಿ ಮತ್ತೆ ಜೊತೆಯಾಗಿದ್ದಾರೆ. ಈಗಾಗಲೇ ಬಿಡುಗಡೆಯಾಗಿರುವ ‘ಕ್ಷೇತ್ರಪತಿ’ ಟೀಸರ್‌ಗೆ ಸಾಕಷ್ಟು ಮೆಚ್ಚುಗೆ ವ್ಯಕ್ತವಾಗಿದ್ದು, ಚಿತ್ರದ ಬಗ್ಗೆ ನಿರೀಕ್ಷೆ ಹೆಚ್ಚಿದೆ. ಆಶ್ರಗ ಕ್ರಿಯೇಷನ್ಸ್‌ ನಿರ್ಮಾಣದ ಚಿತ್ರಕ್ಕೆ ರವಿ ಬಸ್ರೂರು ಸಂಗೀತ, ವೈ ವಿ ಬಿ ಶಿವಸಾಗರ್‌ ಛಾಯಾಗ್ರಹಣ, ಶೇಡ್ಗಾರ್‌ ಸಂಕಲನ, ನರಸಿಂಹ ಸಾಹಸ ಸಂಯೋಜನೆಯಿದೆ. ಅಚ್ಯುತ್‌ ಕುಮಾರ್‌, ರಾಹುಲ್‌ ಐನಾಪುರ, ಕೃಷ್ಣ ಹೆಬ್ಬಾಳೆ, ಶೈಲಶ್ರೀ ಅರಸ್‌ ಚಿತ್ರದ ಇತರೆ ಪ್ರಮುಖ ಕಲಾವಿದರು. ಇಂದು ಚಿತ್ರದ ‘ಪಲ್ಲಕ್ಕಿ’ ಹಾಡು ಬಿಡುಗಡೆಯಾಗಿದ್ದು, ಆಗಸ್ಟ್‌ 18ರಂದು KRG ಸ್ಟುಡಿಯೋಸ್‌ ಮೂಲಕ ಸಿನಿಮಾ ತೆರೆಕಾಣಲಿದೆ.

Previous articleಮನರಂಜನೆಯ ಜೊತೆಗೆ ಸೂಕ್ಷ್ಮತೆಯನ್ನು ಕಟ್ಟಿಕೊಡುವ ಸೈನ್ಸ್‌ – ಫಿಕ್ಷನ್‌
Next article‘ಉಸಿರೇ ಉಸಿರೇ’ ಟೈಟಲ್‌ ಸಾಂಗ್‌ ಬಿಡುಗಡೆ | ಚಿತ್ರದ ವಿಶೇಷ ಪಾತ್ರದಲ್ಲಿ ನಟ ಸುದೀಪ್‌

LEAVE A REPLY

Connect with

Please enter your comment!
Please enter your name here