ನಿತ್ಯಾ ಮೆನನ್‌ ಮುಖ್ಯಭೂಮಿಕೆಯಲ್ಲಿ ನಟಿಸಿರುವ ‘ಕುಮಾರಿ ಶ್ರೀಮತಿ’ ತೆಲುಗು ಸರಣಿಯ ಟೀಸರ್‌ ಬಿಡುಗಡೆಯಾಗಿದೆ. ಶ್ರೀನಿವಾಸ್‌ ಅವಸರಾಳ ನಿರ್ದೇಶನದ ಸರಣಿ ಸೆಪ್ಟೆಂಬರ್‌ 28ರಿಂದ Prime Videoದಲ್ಲಿ ಸ್ಟ್ರೀಮ್‌ ಆಗಲಿದೆ.

ನಿತ್ಯಾ ಮೆನನ್ ಮುಖ್ಯಭೂಮಿಕೆಯಲ್ಲಿ ನಟಿಸಿರುವ ‘ಕುಮಾರಿ ಶ್ರೀಮತಿ’ ತೆಲುಗು ವೆಬ್‌ ಸರಣಿ ಟೀಸರ್‌ ಬಿಡುಗಡೆಯಾಗಿದೆ. ರಾಷ್ಟ್ರಪ್ರಶಸ್ತಿ ಪುರಸ್ಕೃತ ನಟಿ ಕೀರ್ತಿ ಸುರೇಶ್‌ ಟೀಸರ್‌ ಬಿಡುಗಡೆಗೊಳಿಸಿ ತಂಡಕ್ಕೆ ಶುಭ ಹಾರೈಸಿದ್ದಾರೆ. ‘ಕಥಾ ಸಂಗಮ’ ಖ್ಯಾತಿಯ ಛಾಯಾಗ್ರಾಹಕ ಗೋಮಟೇಶ್ ಉಪಾಧ್ಯೆ ಈ ಸರಣಿಯ ಕಥೆ ರಚಿಸಿದ್ದು, ನಟ ಶ್ರೀನಿವಾಸ್ ಅವಸರಾಳ ಸರಣಿಯನ್ನು ನಿರ್ದೇಶಿಸಿದ್ದಾರೆ. ಟೀಸರ್‌ನಲ್ಲಿ ಅವಿವಾಹಿತ ಯುವತಿ ಶ್ರೀಮತಿ (ನಿತ್ಯಾ) ಸಮಾಜದಲ್ಲಿ ಎದುರಿಸುವ ಅನೇಕ ಸಮಸ್ಯೆಗಳನ್ನು ತೋರಿಸಲಾಗಿದೆ. ಆಕೆ ಎಲ್ಲೇ ಹೋದರೂ ಬಂದರೂ ಆಕೆಯ ಮದುವೆಯ ಬಗ್ಗೆಯೇ ಪ್ರಸ್ತಾಪಗಳು ನಡೆಯುತ್ತಿರುತ್ತವೆ. ಕಾರ್ಯಕ್ರಮವೊಂದರಲ್ಲಿ ವೃದ್ಧೆಯೊಬ್ಬಳು, ‘ನಿನ್ನ ವಯಸ್ಸಿನವರು ಎಲ್ರೂ ಮದುವೆಯಾಗುತ್ತಿದ್ದಾರೆ. ನೀನು ಮದುವೆಯಾಗೋದಲ್ವಾ?’ ಎಂದು ಪ್ರಶ್ನಿಸುತ್ತಾಳೆ. ಇದಕ್ಕೆ ಪ್ರತಿಕ್ರಿಯಿಸುವ ಶ್ರೀಮತಿ, ‘ನಿನ್ನ ವಯಸ್ಸಿನವರು ಒಬ್ಬೊಬ್ಬರಾಗೇ ಸ್ವರ್ಗಕ್ಕೆ ಹೋಗ್ತಾ ಇದ್ದಾರೆ, ನೀನು ಹೋಗೋದಿಲ್ವಾ?’ ಎನ್ನುತ್ತಾಳೆ!

ಸರಣಿಯಲ್ಲಿ ನಿರುಪಮ್ ಪರಿಟಾಲ, ತಿರುವೀರ್, ಗೌತಮಿ, ತಲ್ಲೂರಿ ರಾಮೇಶ್ವರಿ, ಪ್ರೇಮ್ ಸಾಗರ್, ಲಕ್ಷ್ಮಿ ವೆನ್ನೆಲಾ, ಉಷಾಶ್ರೀ, ಗವಿರೆಡ್ಡಿ ಶ್ರೀನಿವಾಸ್, ಅಕ್ಷಯ್ ಲಗುಸಾನಿ, ಮಹೇಶ್ ಅಚಂತ, ಮಾಧವಿಲತಾ, ಸುಬ್ಬರಾಯ ಶರ್ಮಾ, ರಾಮ್, ವೇಣು ಪೊಲಸಾನಿ ಪೋಷಕ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಸರಣಿಯಲ್ಲಿ ಪ್ರಣೀತಾ ಪಟ್ನಾಯಕ್, ನರೇಶ್, ತಿರುವೀರ್ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದು, ಸ್ಟಾಕಾಟೊ ಮತ್ತು ಕಮ್ರಾನ್ ಸಂಗೀತ ಸಂಯೋಜಿಸಿದ್ದಾರೆ. ಮೋಹನ್‌ ಕೃಷ್ಣ ಛಾಯಾಗ್ರಹಣ ಮಾಡಿದ್ದಾರೆ. ಟೀಸರ್‌ ಬಿಡುಗಡೆ ಮಾಡಿದ ಕೀರ್ತಿ, ‘ನಿತ್ಯ ಮೆನನ್‌ರ ಕಾಮಿಡಿ – ಡ್ರಾಮಾ ಸರಣಿ ಟೀಸರ್‌ ಬಿಡುಗಡೆಗೊಳಿಸಲು ತುಂಬಾ ಖುಷಿಯಿದೆ’ ಎಂದಿದ್ದಾರೆ. ಸ್ವಪ್ನಾ ದತ್‌ ಮತ್ತು ಪ್ರಿಯಾಂಕಾ ದತ್‌ ಸರಣಿ ನಿರ್ಮಿಸಿದ್ದು, PrimeVideoದಲ್ಲಿ ಸೆಪ್ಟೆಂಬರ್ 28ರಿಂದ ಸರಣಿ ಸ್ಟ್ರೀಮ್‌ ಆಗಲಿದೆ. ನಿತ್ಯಾ ಈ ಹಿಂದೆ ‘ಮಾಡರ್ನ್ ಲವ್ ಹೈದರಾಬಾದ್‌’ ತೆಲುಗು ಸೀರೀಸ್‌ನಲ್ಲಿ ಕಾಣಿಸಿಕೊಂಡಿದ್ದರು. ಈ ಸರಣಿಯಲ್ಲಿ ರೇವತಿ, ಆದಿ ಪಿನಿಸೆಟ್ಟಿ, ರಿತು ವರ್ಮಾ, ಸುಹಾಸಿನಿ ಮಣಿರತ್ನಂ, ಅಭಿಜೀತ್ ದುದ್ದಲ, ಮಾಳವಿಕಾ ನಾಯರ್, ನರೇಶ್, ಉಲ್ಕಾ ಗುಪ್ತಾ, ಕೋಮಲೀ ಪ್ರಸಾದ್ ಮತ್ತು ರಾಗ್ ಮಯೂರ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದರು.

LEAVE A REPLY

Connect with

Please enter your comment!
Please enter your name here