ದೀಪಕ್‌ ಮಧುವನಹಳ್ಳಿ ನಿರ್ದೇಶನದ ‘ರಾಜು ಜೇಮ್ಸ್‌ ಬಾಂಡ್‌’ ಸಿನಿಮಾದ ‘ಬೇಕಿತ್ತಾ ಬೇಕಿತ್ತಾ, ಈ ಲವ್ವು ಬೇಕಿತ್ತಾ!’ ಲಿರಿಕಲ್‌ ವೀಡಿಯೋ ಸಾಂಗ್‌ ಬಿಡುಗಡೆಯಾಗಿದೆ. ಅನೂಪ್‌ ಸಿಳೀನ್‌ ಸಂಗೀತ ಸಂಯೋಜನೆಯ ಹಾಡಿಗೆ ಆಂಥೋನಿ ದಾಸ್‌ ದನಿಯಾಗಿದ್ದಾರೆ.

‘ಟಗರು’ ಹಾಡಿನ ಖ್ಯಾತಿ ಆಂಥೋನಿ ದಾಸ್‌ ಸ್ಯಾಂಡಲ್‌ವುಡ್‌ಗೆ ಮರಳಿದ್ದಾರೆ. ಗುರುನಂದನ್‌ ಹೀರೋ ಆಗಿ ನಟಿಸಿರುವ ‘ರಾಜು ಜೇಮ್ಸ್‌ ಬಾಂಡ್‌’ ಸಿನಿಮಾದ ‘ಬೇಕಿತ್ತಾ ಬೇಕಿತ್ತಾ, ಈ ಲವ್ವು ಬೇಕಿತ್ತಾ’ಗೆ ಅವರು ದನಿಯಾಗಿದ್ದಾರೆ. ಈ ಲಿರಿಕಲ್‌ ವೀಡಿಯೋ ಸಾಂಗ್‌ ಬಿಡುಗಡೆಯಾಗಿದ್ದು, ಸಿನಿಪ್ರಿಯರ ಗಮನಸೆಳೆದಿದೆ. ಅನೂಪ್‌ ಸಿಳೀನ್‌ ಸಂಗೀತ ಸಂಯೋಜನೆಯ ಹಾಡಿದು. ದೀಪಕ್‌ ಮಧುವನಹಳ್ಳಿ ನಿರ್ದೇಶನದ ಚಿತ್ರ ಬಹುದಿನಗಳಿಂದ ಸುದ್ದಿಯಲ್ಲಿದೆ. ಚಿತ್ರದ ಬಹುಪಾಲು ಶೂಟಿಂಗ್‌ ಲಂಡನ್‌ನಲ್ಲಿ ನಡೆದಿದೆ ಎನ್ನುವುದು ವಿಶೇಷ. ಮಂಜುನಾಥ್‌ ವಿಶ್ವಕರ್ಮ ಮತ್ತು ಕಿರಣ್‌ ಬರ್ತೂರ್‌ ನಿರ್ಮಾಣದ ಚಿತ್ರದಲ್ಲಿ ನಾಲ್ಕು ಹಾಡುಗಳಿವೆ. ಛಾಯಾಗ್ರಹಣ ಮನೋಹರ್‌ ಜೋಷಿ ಅವರದು. ಗುರುನಂದನ್‌ ಅವರಿಗೆ ನಾಯಕಿಯಾಗಿ ಮೃದುಲ ನಟಿಸಿದ್ದಾರೆ. ರವಿಶಂಕರ್, ಸಾಧುಕೋಕಿಲ, ಅಚ್ಯುತಕುಮಾರ್, ಚಿಕ್ಕಣ್ಣ, ಜೈ ಜಗದೀಶ್, ತಬಲ ನಾಣಿ, ಮಂಜುನಾಥ್ ಹೆಗಡೆ, ವಿಜಯ್ ಚೆಂಡೂರ್ ಚಿತ್ರದ ಇತರೆ ಪ್ರಮುಖ ಪಾತ್ರಧಾರಿಗಳು.

LEAVE A REPLY

Connect with

Please enter your comment!
Please enter your name here